More

    ಶರಣ ಚಳವಳಿಗೆ ಕಾಯಕತತ್ವ ಬುನಾದಿ: ಪಂಡಿತಾರಾಧ್ಯ ಶ್ರೀ

    ಹೊಸದುರ್ಗ: ಬಸವಾದಿ ಶಿವಶರಣರ ಚಳವಳಿ ಕಾಯಕ ತತ್ವದ ಮೇಲೆ ನಿಂತಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

    ತಾಲೂಕಿನ ಸಾಣೇಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದಲ್ಲಿ ಆಯೋಜಿಸಿರುವ ‘ಮತ್ತೆ ಕಲ್ಯಾಣ ಅಂತರ್‌ಜಾಲ ಉಪನ್ಯಾಸ ಮಾಲಿಕೆಯ ಎರಡನೆಯ ದಿನದ ಸೋಮವಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಶುದ್ಧ ಬದುಕಿನ ಕಾಯಕ. ಕಾಯಕವೇ ಶರಣರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಆಧಾರ ಸ್ತಂಭ. ಕಾಯಕವೇ ಶರಣರ ಚಳವಳಿಗೆ ಶಕ್ತಿ. ಆ ಶಕ್ತಿಯನ್ನು ತುಂಬಿದವರು ತಳಸಮುದಾಯದ ಕುಶಲಕರ್ಮಿಗಳು ಎಂದು ಹೇಳಿದರು.

    ಕಾಯಕವೇ ಶರಣರ ಬದುಕಿನ ಉಸಿರು. ಶರಣರ ದೃಷ್ಟಿಯಲ್ಲಿ ಪೂಜೆಗಿಂತಲೂ ಶ್ರೇಷ್ಠವಾದುದು ಕಾಯಕ. ಕಾಯಕ ವ್ಯಕ್ತಿಯ ಮತ್ತು ಸಮಾಜದ ಪ್ರಗತಿಯ ಸಂಕೇತ. ಜಾತ್ಯತೀತ ನಿಲವಿನ ದ್ಯೋತಕ.

    ಕಾಯಕದಲ್ಲಿ ಮೇಲು-ಕೀಳು, ಸಣ್ಣದು-ದೊಡ್ಡದು ಎನ್ನುವ ಅಂತರ ಇಲ್ಲ. ಯಾವುದೇ ಕಾಯಕವಾದರೂ ಕೈಮುಟ್ಟಿ ಮಾಡಬೇಕು. ಅದರಿಂದ ಬಂದ ಆದಾಯವನ್ನು ತಾನೊಬ್ಬನೇ ಬಳಸದೆ ಗುರು-ಲಿಂಗ-ಜಂಗಮದ ಮುಂದಿಟ್ಟು ಸಂತೃಪ್ತಿ ಅನುಭವಿಸಬೇಕು ಎಂದು ತಿಳಿಸಿದರು.

    ನಿವೃತ್ತ ಪ್ರಾಧ್ಯಾಪಕ ಡಾ.ಸಿ.ವೀರಣ್ಣ ಮಾತನಾಡಿ, 12ನೆಯ ಶತಮಾನದ ಕಾಯಕ ಜೀವಿಗಳ ಚಳವಳಿ ಇಂದಿಗೂ ಮೊಗೆದಷ್ಟೂ ಹೊಸ ಹೊಳಹುಗಳನ್ನು ನೀಡುತ್ತದೆ. ಅದೊಂದು ಧಾರ್ಮಿಕ ಚಳವಳಿಯಷ್ಟೇ ಅಲ್ಲ; ಸಾಮಾಜಿಕ, ಆರ್ಥಿಕ ವಿಚಾರಗಳೂ ಅದರಲ್ಲಿ ಅಡಗಿವೆ ಎಂದರು.
    ಶಿವಸಂಚಾರದ ಕಲಾವಿದರಾದ ಕೆ.ಜ್ಯೋತಿ, ಕೆ. ದಾಕ್ಷಾಯಣಿ, ಎಚ್.ಎಸ್. ನಾಗರಾಜ್ ಇತರರು ವಚನಗೀತೆಗಳನ್ನು ಹಾಡಿದರು. ಅಧ್ಯಾಪಕ ಟಿ.ಎಂ.ಮರುಳಸಿದ್ಧಯ್ಯ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts