More

    ಜೀರೋ ಟ್ರಾಫಿಕ್‌ನಲ್ಲಿ ನವಜಾತ ಶಿಶು ಸ್ಥಳಾಂತರ

    ಶಿವಮೊಗ್ಗ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನವಜಾತ ಶಿಶುವನ್ನು ಭಾನುವಾರ ರಾತ್ರಿ ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ಮೂಲಕ ಸ್ಥಳಾಂತರಿಸಲಾಯಿತು.

    ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೂರು ದಿನದ ಹಿಂದೆ ಜನಿಸಿದ್ದ ಮಗುವಿನ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಜೀರೋ ಟ್ರಾಫಿಕ್ ಮೂಲಕ ಶಿಫ್ಟ್ ಮಾಡಲಾಯಿತು. ಶಿವಮೊಗ್ಗದ ಗಾಂಧಿಬಜಾರ್‌ನ ನಿಲೇಶ್ ಜೈನ್ ಮತ್ತು ಮೋನಿಕಾ ದಂಪತಿಗೆ ಶಿಶು ಜನಿಸಿತ್ತು. ಜನಿಸುವಾಗಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು. ಹಾಗಾಗಿ ಶಿಶುವಿಗೆ ಶಸ್ತ್ರಚಿಕಿತ್ಸೆ ಅಗತ್ಯ ಇದ್ದ ಕಾರಣ ಬೆಂಗಳೂರಿನ ಎನ್‌ಎಚ್ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು.
    ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರು ರಾತ್ರಿಯೇ ಶಿಶುವನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಶಿವಮೊಗ್ಗದಿಂದ ರಾತ್ರಿ 10.08ಕ್ಕೆ ಹೊರಟ ಆ್ಯಂಬುಲೆನ್ಸ್ ತಡರಾತ್ರಿ 1.40ಕ್ಕೆ ಬೆಂಗಳೂರಿನ ಎನ್‌ಎಚ್ ಆಸ್ಪತ್ರೆಗೆ ತಲುಪಿದ್ದು ಚಾಲಕ ಜಗದೀಶ್ ಹಾಗೂ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts