More

    ನ್ಯೂಜಿಲೆಂಡ್​ ಪ್ರಧಾನಿಯಾಗಿ ಕ್ರಿಸ್​ ಹಿಪ್ಕಿನ್ಸ್​ ಅಧಿಕಾರ ಸ್ವೀಕಾರ

    ವೆಲ್ಲಿಂಗ್ಟನ್​: ನ್ಯೂಜಿಲೆಂಡ್​ನ ನೂತನ ಪ್ರಧಾನಿಯಾಗಿ 44 ವರ್ಷದ ಹಿರಿಯ ರಾಜಕಾರಣಿ ಕ್ರಿಸ್​ ಹಿಪ್ಕಿನ್ಸ್​ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ನ್ಯೂಜಿಲೆಂಡ್ ಗವರ್ನರ್ ಜನರಲ್ ಸಿಂಡಿ ಕಿರೊ ಅವರು ಪ್ರಮಾಣವಚನ ಬೋಧಿಸಿದರು. ಇದೇ ವೇಳೆ ದೇಶದ ಆರ್ಥಿಕತೆಯನ್ನ ಭದ್ರಪಡಿಸುವುದಾಗಿ ನೂತನ ಪ್ರಧಾನಿ ಘೋಷಿಸಿದರು.

    ಜಸಿಂಡಾ ಅಡೆರ್ನ್​ ಅವರ ದಿಢೀರ್​ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಪೊಲೀಸ್​ ಮತ್ತು ಶಿಕ್ಷಣ ಸಚಿವ ಕ್ರಿಸ್​ ಹಿಪ್ಕಿನ್ಸ್​ ಅವರನ್ನ ಲೇಬರ್​ ಪಕ್ಷದ ಸದಸ್ಯರೆಲ್ಲರೂ ನ್ಯೂಜಿಲೆಂಡ್​ನ 41ನೇ ಪ್ರಧಾನಿಯಾಗಿ ಭಾನುವಾರ ಆಯ್ಕೆ ಮಾಡಿದ್ದರು.

    ಕರೊನಾ ಸಂಕಷ್ಟ ಕಾಲ ನಿರ್ವಹಿಸುವ ಜವಾಬ್ದಾರಿ ವಹಿಸಿಕೊಂಡಿದ್ದ ಕ್ರಿಸ್​, ಉತ್ತಮ ಕೆಲಸ ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದರು. ಪ್ರಧಾನಿಯಾಗಿ ತಮ್ಮ ಪಕ್ಷವನ್ನು ಮುನ್ನಡೆಸುವ ಮೂಲಕ ಮುಂದಿನ ಅಕ್ಟೋಬರ್​ನಲ್ಲಿ ಎದುರಾಗಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಪೂರ್ಣ ಜವಾಬ್ದಾರಿ ಕ್ರಿಸ್​ ಮೇಲೆ ಬೀಳಲಿದೆ.

    ಸದ್ಯ ಲೇಬರ್​ ಪಕ್ಷವು ಜನಾಭಿಪ್ರಾಯದಲ್ಲಿ ಹಿನ್ನಡೆ ಅನುಭವಿಸಿದೆ. ಅಪರಾಧ ಪ್ರಕರಣಗಳ ಹೆಚ್ಚಳ, ಬಡತನ ಮತ್ತು ಏರುತ್ತಿರುವ ಬೆಲೆಗಳ ನಡುವೆ ವಿರೋಧ ಪಕ್ಷಗಳು ನಿರಂತರವಾಗಿ ಟೀಕಾ ಪ್ರಹಾರ ಮಾಡುತ್ತಿದ್ದು, ಆಡಳಿತರೂಢ ಲೇಬರ್​ ಪಕ್ಷಕ್ಕೆ ಸಂಕಷ್ಟದ ಹಾದಿ ಎದುರಾಗಿದೆ. ಇದೆಲ್ಲವನ್ನೂ ಮೆಟ್ಟಿ ನಿಂತು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಬಹುದೊಡ್ಡ ಸವಾಲು ಕ್ರಿಸ್​ ಮುಂದಿದೆ. (ಏಜೆನ್ಸೀಸ್​)

    ಹಳೇ ಸ್ಕೂಟರ್​ನಲ್ಲಿ ದೇಶ ಸುತ್ತಿದ ತಾಯಿ-ಮಗನಿಂದ ಕುಕ್ಕೆಯಲ್ಲಿ ವಿಶೇಷ ಪೂಜೆ

    ಮೋದಿ ಕುರಿತು ವಿವಾದಾತ್ಮಕ ಡಾಕ್ಯುಮೆಂಟರಿ ಪ್ರದರ್ಶನ: ಜೆಎನ್​ಯು ವಿವಿಯಲ್ಲಿ ಕಲ್ಲು ತೂರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts