ಮೋದಿ ಕುರಿತು ವಿವಾದಾತ್ಮಕ ಡಾಕ್ಯುಮೆಂಟರಿ ಪ್ರದರ್ಶನ: ಜೆಎನ್​ಯು ವಿವಿಯಲ್ಲಿ ಕಲ್ಲು ತೂರಾಟ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ(ಬ್ರಿಟಿಷ್​ ಬ್ರಾಡ್​ಕಾಸ್ಟಿಂಗ್​ ಕಾರ್ಪೊರೇಷನ್​) ನಿರ್ಮಿಸಿರುವ ಸಾಕ್ಷ್ಯಚಿತ್ರದ ವಿವಾದ ಮತ್ತಷ್ಟು ಕಾವೇರುತ್ತಿದೆ. ವಿವಾದಾತ್ಮಕ ಡಾಕ್ಯುಮೆಂಟರಿ ‘ದಿ ಮೋದಿ ಕ್ವೆಶ್ಚನ್​’ನ ಲಿಂಕ್​ಗಳನ್ನು ಕೇಂದ್ರ ಸರ್ಕಾರ ಬ್ಲಾಕ್​ ಮಾಡಿ, ಭಾರತದಲ್ಲಿ ಇದರ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಆದರೂ ದೆಹಲಿಯ ಜವಾಹರಲಾಲ್​ ನೆಹರೂ ವಿಶ್ವವಿದ್ಯಾಲಯದಲ್ಲಿ(ಜೆಎನ್​ಯು) ಚಿತ್ರಪ್ರದರ್ಶನ ಮಾಡಲು ಮುಂದಾದ ವೇಳೆ ಕಾಲೇಜಿನಲ್ಲಿ ಕಲ್ಲು ತೂರಟ ನಡೆದಿದ್ದು, ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ನಿಷೇಧದ ನಡವೆಯೂ ಹೈದರಾಬಾದ್​ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಡಾಕ್ಯುಮೆಂಟರಿಯನ್ನ ಪ್ರದರ್ಶಿಸಿದ್ದಾರೆ. ಕೇರಳದಲ್ಲಿ ಗಣರಾಜ್ಯ … Continue reading ಮೋದಿ ಕುರಿತು ವಿವಾದಾತ್ಮಕ ಡಾಕ್ಯುಮೆಂಟರಿ ಪ್ರದರ್ಶನ: ಜೆಎನ್​ಯು ವಿವಿಯಲ್ಲಿ ಕಲ್ಲು ತೂರಾಟ