More

    ಟೀಮ್​ ಇಂಡಿಯಾದ ಬೌಲಿಂಗ್​ ದಾಳಿಗೆ ಬ್ಯಾಟ್​ ಬೀಸಲು ತಿಣುಕಾಡಿದ ಕಿವೀಸ್​ ಪಡೆ: ಭಾರತ ಗೆಲುವಿಗೆ ಸಾಧಾರಣ ಗುರಿ

    ಆಕ್ಲೆಂಡ್​: ಇಲ್ಲಿನ ಈಡನ್​ ಪಾರ್ಕ್​ನಲ್ಲಿ ನಡೆಯುತ್ತಿರುವ ಆತಿಥೇಯ ನ್ಯೂಜಿಲೆಂಡ್​ ವಿರುದ್ಧದ 5 ಟಿ20 ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ಟೀಮ್​ ಇಂಡಿಯಾ ಬೌಲಿಂಗ್​ ದಾಳಿಗೆ ಬ್ಯಾಟ್​ ಬೀಸಲು ತಿಣುಕಾಡಿದ ಕಿವೀಸ್​ ಪಡೆ ಭಾರತಕ್ಕೆ ಸಾಧಾರಣ ಗುರಿ ನೀಡಿದೆ.

    ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಕಿವೀಸ್​ ಪಡೆಗೆ ಮಾರ್ಟಿನ್​ ಗುಪ್ಟಿಲ್​ ಮತ್ತು ಕೊಲಿನ್​ ಮನ್ರೋ 48 ರನ್​ಗಳ ಜತೆಯಾಟವಾಡಿ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ವೇಳೆ 33 ರನ್ ಗಳಿಸಿದ್ದ ಗುಪ್ಟಿಲ್​ ಕ್ಯಾಚಿತ್ತು ನಿರ್ಗಮಿಸಿದರು.

    ಇಲ್ಲಿಂದಾಚೆಗೆ ಟೀಮ್​ ಇಂಡಿಯಾ ಎದುರು ರನ್​ ಕದಿಯಲು ಕಿವೀಸ್​ ತಿಣುಕಾಡಿತು. ತಂಡದ ಮೊತ್ತ 68 ರನ್​ ಆಗಿದ್ದಾಗ ಕೊಲಿನ್​ ಮನ್ರೋ(26), 74 ರನ್​ ಆಗಿದ್ದಾಗ ನಾಯಕ ಕೇನ್​ ವಿಲಿಯಮ್ಸನ್​(14) ಮತ್ತು 81 ರನ್​ ಆಗಿದ್ದಾಗ ಕೊಲಿನ್​ ಡಿ ಗ್ರ್ಯಾಂಡ್​ಹೋಮ್​(3) ವಿಕೆಟ್​ ಕಳೆದುಕೊಂಡು ತಂಡ ಸಂಕಷ್ಟಕ್ಕೀಡಾಯಿತು.

    ಉಳಿದಂತೆ ರಾಸ್​ ಟೇಲರ್​(18) ರನ್​ ಗಳಿಸಿ ಔಟಾದರೆ, ಟಿಮ್​ ಸೈಫರ್ಟ್​(33) ಮತ್ತು ಮಿಚೆಲ್​ ಸ್ಯಾಂಟ್ನರ್​ ಯಾವುದೇ ರನ್​ ಖಾತೆ ತೆರೆಯದೆ ಅಜೇಯರಾಗಿ ಉಳಿದರು.

    ಅಂತಿಮವಾಗಿ ನ್ಯೂಜಿಲೆಂಡ್​ ತಂಡ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 132 ರನ್​ ಗಳಿಸಿತು. ಈ ಮೂಲಕ ಟೀಮ್​ ಇಂಡಿಯಾ ಗೆಲುವಿಗೆ 133 ರನ್​ ಗುರಿ ನೀಡಿತು.

    ಟೀಮ್​ ಇಂಡಿಯಾ ಪರ ರವೀಂದ್ರ ಜಡೇಜಾ ಪ್ರಮುಖ 2 ವಿಕೆಟ್​ ಕಬಳಿಸಿ ಮಿಂಚಿದರೆ, ಶಾರ್ದುಲ್​ ಠಾಕೂರ್​, ಮಹಮ್ಮದ್​ ಶಮಿ ಹಾಗೂ ಶಿವಂ ದುಬೆ ತಲಾ ಒಂದೊಂದು ವಿಕೆಟ್​ ಉರುಳಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts