More

    ಇಂಗ್ಲೆಂಡ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿದ ನ್ಯೂಜಿಲೆಂಡ್ ತಂಡ

    ಅಬುಧಾಬಿ: ಆರಂಭಿಕ ಡೆರಿಲ್ ಮಿಚೆಲ್ (72*ರನ್, 47 ಎಸೆತ, 4 ಬೌಂಡರಿ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊಟ್ಟಮೊದಲ ಬಾರಿಗೆ ಫೈನಲ್‌ಗೇರಿದ ಸಾಧನೆ ಮಾಡಿದೆ. ಕೇನ್ ವಿಲಿಯಮ್ಸನ್ ಪಡೆ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಸತತ ಮೂರನೇ ಐಸಿಸಿ ಟೂರ್ನಿಯಲ್ಲಿ ಫೈನಲ್‌ಗೇರಿದ ಕಿವೀಸ್ ತಂಡ, 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಂಗ್ಲರ ವಿರುದ್ಧ ಬೌಂಡರಿ ಕೌಂಟ್‌ನಲ್ಲಿ ಕಂಡ ನಿರಾಸೆಗೂ ಸೇಡು ತೀರಿಸಿಕೊಂಡಿತು. ನ್ಯೂಜಿಲೆಂಡ್ ತಂಡ, ಮತ್ತೊಂದು ಸೆಮೀಸ್ ಹಣಾಹಣಿಯಲ್ಲಿ ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ವಿಜೇತರನ್ನು ಭಾನುವಾರ ಫೈನಲ್‌ನಲ್ಲಿ ಎದುರಿಸಲಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ, ಮೊಯಿನ್ ಅಲಿ (51 ರನ್, 37 ಎಸೆತ, 3 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 166 ರನ್‌ಗಳಿಸಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 167 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ಇಂಗ್ಲೆಂಡ್: 4 ವಿಕೆಟ್‌ಗೆ 166 (ಜೋಸ್ ಬಟ್ಲರ್ 29, ಮೊಯಿನ್ ಅಲಿ 51*, ಡೇವಿಡ್ ಮಲಾನ್ 41, ಲಿಯಾಮ್ ಲಿವಿಂಗ್‌ಸ್ಟೋನ್ 17, ಟಿಮ್ ಸೌಥಿ 24ಕ್ಕೆ 1, ಆಡಂ ಮಿಲ್ನೆ 31ಕ್ಕೆ 1, ಜೇಮ್ಸ್ ನೀಶಾಮ್ 18ಕ್ಕೆ 1), ನ್ಯೂಜಿಲೆಂಡ್: 19 ಓವರ್‌ಗಳಲ್ಲಿ 5 ವಿಕೆಟ್‌ಗೆ167 (ಡೆರಿಲ್ ಮಿಚೆಲ್ 71*, ಡೆವೊನ್ ಕಾನ್‌ವೇ 46, ಜೇಮ್ಸ್ ನೀಶಾಮ್ 27, ಕ್ರಿಸ್ ವೋಕ್ಸ್ 36ಕ್ಕೆ 2, ಲಿಯಾಮ್ ಲಿವಿಂಗ್‌ಸ್ಟೋನ್ 22ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts