More

    ಶತಕದಂಚಿನಲ್ಲಿ ಕೇನ್ ವಿಲಿಯಮ್ಸನ್, ಬೃಹತ್ ಮೊತ್ತದತ್ತ ಕಿವೀಸ್

    ಮೌಂಟ್ ಮೌಂಗನುಯಿ: ನಾಯಕ ಕೇನ್ ವಿಲಿಯಮ್ಸನ್ (94*ರನ್, 243 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ (70ರನ್, 151 ಎಸೆತ, 10 ಬೌಂಡರಿ, 1 ಸಿಕ್ಸರ್) ಜೋಡಿಯ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ವಿರುದ್ಧ ಬೃಹತ್ ಮೊತ್ತದತ್ತ ಮುಖಮಾಡಿದೆ. ಬೇ ಓವೆಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ, ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 222 ರನ್ ಪೇರಿಸಿದೆ.

    ಇದನ್ನೂ ಓದಿ: ವಿರಾಟ್ ಕೊಹ್ಲಿ ಬಳಿ ಅಜಿಂಕ್ಯ ರಹಾನೆ ಕ್ಷಮೆಯಾಚಿಸಿದ್ದೇಕೆ..?,

    ಶಾಹೀನ್ ಅಫ್ರಿದಿ (55ಕ್ಕೆ 3) ಮಾರಕ ದಾಳಿಯಿಂದಾಗಿ ನ್ಯೂಜಿಲೆಂಡ್ ತಂಡ ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾದ ಟಾಮ್ ಲಾಥಮ್ (4) ಹಾಗೂ ಟಾಮ್ ಬ್ಲೆಂಡೆಲ್ (5) ನಿರಾಸೆ ಅನುಭವಿಸಿದರು. ಕೇವಲ 13 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ ಆರಂಭಿಕ ಆಘಾತ ಎದುರಿಸಿತು. ಈ ವೇಳೆ ಜತೆಯಾದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಜೋಡಿ 3ನೇ ವಿಕೆಟ್‌ಗೆ 120 ರನ್ ಜತೆಯಾಟವಾಡಿ ಇನಿಂಗ್ಸ್‌ಗೆ ಚೇತರಿಕೆ ನೀಡಿತು. ಟೇಲರ್ ವಿಕೆಟ್ ಕಬಳಿಸುವ ಮೂಲಕ ಶಾಹೀನ್ ಅಫ್ರಿದಿ ಈ ಜೋಡಿಗೆ ಬ್ರೇಕ್ ಹಾಕಿದರು. ಬಳಿಕ ವಿಲಿಯಮ್ಸನ್ ಹಾಗೂ ಹೆನ್ರಿ ನಿಕೋಲಸ್ (42*ರನ್, 100 ಎಸೆತ, 4 ಬೌಂಡರಿ) ಜೋಡಿ ಮುರಿಯದ 3ನೇ ವಿಕೆಟ್‌ಗೆ 89 ರನ್ ಪೇರಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಇದನ್ನೂ ಓದಿ: ನಾಲ್ಕೂವರೆ ತಿಂಗಳಿನಿಂದ ಪತ್ನಿಯನ್ನು ನೋಡದೆ ಚಡಪಡಿಸುತ್ತಿದ್ದಾರೆ ಸ್ಟೀವನ್ ಸ್ಮಿತ್!

    ನ್ಯೂಜಿಲೆಂಡ್: 87 ಓವರ್‌ಗಳಲ್ಲಿ 3 ವಿಕೆಟ್‌ಗೆ 222 (ಕೇನ್ ವಿಲಿಯಮ್ಸನ್ 94*, ರಾಸ್ ಟೇಲರ್ 70, ಹೆನ್ರಿ ನಿಕೋಲಸ್ 42*, ಶಾಹೀನ್ ಅಫ್ರಿದಿ 55ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts