More

    ಭದ್ರತಾ ಭೀತಿಯಿಂದಾಗಿ ಪಾಕ್ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿದ ನ್ಯೂಜಿಲೆಂಡ್

    ರಾವಲ್ಪಿಂಡಿ: ನ್ಯೂಜಿಲೆಂಡ್ ತಂಡ ಭದ್ರತಾ ಭೀತಿಯಿಂದಾಗಿ ಪಾಕಿಸ್ತಾನ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿದೆ. ಕಿವೀಸ್ ತಂಡ ಶುಕ್ರವಾರದಿಂದ ಪಾಕ್‌ನಲ್ಲಿ 3 ಏಕದಿನ ಮತ್ತು 5 ಟಿ20 ಟಿ20 ಪಂದ್ಯಗಳ ಸರಣಿ ಆಡಬೇಕಾಗಿತ್ತು. ಆದರೆ ಅಭದ್ರತೆಯ ಕಾರಣ ನೀಡಿ ಕಿವೀಸ್ ತಂಡ ಮೊದಲ ಏಕದಿನ ಪಂದ್ಯ ಆಡಲು ಸ್ಟೇಡಿಯಂಗೆ ತೆರಳಲು ನಿರಾಕರಿಸಿತು.

    ಕರೊನಾ ಹಾವಳಿಯ ನಡುವೆ ರಾವಲ್ಪಿಂಡಿ ಸ್ಟೇಡಿಯಂನಲ್ಲಿ ಶೇ. 25 ಪ್ರೇಕ್ಷಕರಿಗೂ ಪ್ರವೇಶ ಅವಕಾಶ ಕಲ್ಪಿಸಲಾಗಿತ್ತು. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಭದ್ರತಾ ಸಲಹೆಗಾರರ ಸೂಚನೆಯ ಮೇರೆ ತಂಡ ಸ್ಟೇಡಿಯಂಗೆ ತೆರಳಲಿಲ್ಲ. ಬಳಿಕ ಪ್ರವಾಸ ರದ್ದುಗೊಂಡಿದ್ದು, ತಂಡ ಶೀಘ್ರದಲ್ಲೇ ತವರಿಗೆ ಮರಳಲಿದೆ ಎಂದು ಕಿವೀಸ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿತು.

    ಇದರಿಂದ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖಭಂಗಕ್ಕೀಡಾಗಿದ್ದು, ಇದೊಂದು ಏಕಪಕ್ಷೀಯ ನಿರ್ಧಾರವಾಗಿದೆ ಎಂದು ದೂರಿದೆ. ಜತೆಗೆ ಈ ನಡೆಗೆ ನ್ಯೂಜಿಲೆಂಡ್, ಐಸಿಸಿ ಎದುರು ಉತ್ತರ ನೀಡಬೇಕಾಗುತ್ತದೆ ಎಂದು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ. ಕಿವೀಸ್ ತಂಡ ಕಳೆದ 18 ವರ್ಷಗಳಲ್ಲಿ ಕೈಗೊಂಡ ಮೊದಲ ಪಾಕ್ ಪ್ರವಾಸ ಇದಾಗಿತ್ತು.

    ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಿರುವ ನಡುವೆ ಕಿವೀಸ್, 2ನೇ ಸ್ತರದ ತಂಡವನ್ನು ಪ್ರವಾಸಕ್ಕೆ ಕಳುಹಿಸಿತ್ತು. ಕಿವೀಸ್ ಹಿಂದೆ ಸರಿದ ಹಿನ್ನೆಲೆಯಲ್ಲಿ, ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಇಂಗ್ಲೆಂಡ್ ತಂಡದ ಪಾಕಿಸ್ತಾನ ಪ್ರವಾಸವೂ ಅನುಮಾನವೆನಿಸಿದೆ.

    ಕನ್ನಡಿಗ ಕೆಎಲ್ ರಾಹುಲ್ ಭವಿಷ್ಯದ ಭಾರತ ತಂಡದ ನಾಯಕ ಎಂದ ದಿಗ್ಗಜ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts