More

    ಸೆಲ್ಫಿ ನಿರಾಕರಿಸಿದ್ದಕ್ಕೆ ಪೃಥ್ವಿ ಶಾ ಮೇಲೆ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​! ಸಪ್ನಾ ಜತೆ ಅಸಭ್ಯವಾಗಿ ವರ್ತಿಸಿದ್ರಾ ಶಾ?

    ಮುಂಬೈ: ಕ್ರಿಕೆಟಿಗ ಪೃಥ್ವಿ ಶಾ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸೆಲ್ಫಿ ನಿರಾಕರಿಸಿದ್ದಕ್ಕೆ ಶಾ ಮೇಲೆ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಸಪ್ನಾ ಗಿಲ್​ ಸೇರಿದಂತೆ 8 ಮಂದಿ ಹಲ್ಲೆ ಮಾಡಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಅಲ್ಲದೆ, ದೂರು ಸಹ ದಾಖಲಾಗಿತ್ತು. ಆದರೆ, ಇದೀಗ ಪ್ರಕರಣ ಬೇರೆ ತಿರುವು ಪಡೆದುಕೊಂಡಿದೆ.

    ಆರೋಪಿ ಸಪ್ನಾ ಗಿಲ್​ ಪರ ವಕೀಲರು ಪೃಥ್ವಿ ಶಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪಾನಮತ್ತ ಸ್ಥಿತಿಯಲ್ಲಿದ್ದ ಶಾ, ತಮ್ಮ ಬ್ಯಾಟ್​ನಿಂದ ಸಪ್ನಾ ಮೇಲೆ ಹಲ್ಲೆ ಮಾಡಲು ಯತ್ನಿಸಿದರು ಮತ್ತು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿದ್ದಾರೆ.

    ಸಪ್ನಾ ಪರ ವಕೀಲ ಅಲಿ ಕಾಶಿಫ್​ ಖಾನ್​ ದೇಶ್​ಮುಖ್​ ಮಾತನಾಡಿ, ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ಪಂಚತಾರಾ ಹೋಟೆಲ್​ನಲ್ಲಿ ಸಪ್ನಾ ಅವರು ಓರ್ವ ಅಭಿಮಾನಿಯಾಗಿ ಶಾ ಬಳಿ ಸೆಲ್ಫಿ ಕೇಳಿದರು. ಆದರೆ, ಪಾರ್ಟಿಯಲ್ಲಿ ಅಷ್ಟರಲ್ಲಾಗಲೇ ಮದ್ಯ ಸೇವಿಸಿದ್ದ ಶಾ, ಸೆಲ್ಫಿ ಕೊಡಲು ನಿರಾಕರಿಸಿದ್ದಲ್ಲದೆ, ಸಪ್ನಾ ಮೇಲೆ ಬ್ಯಾಟ್​ನಿಂದ ಹಲ್ಲೆ ಮಾಡಿ, ಅನುಚಿತವಾಗಿ ವರ್ತಿಸಿದರು. ಈ ಘಟನೆ ನಡೆದ ಮಾರನೇ ದಿನ ಆಕೆಯ ವಿರುದ್ಧವೇ ಶಾ ದೂರು ನೀಡಿದ್ದಾರೆ. ಇದೀಗ ನಾವು ಸಹ ಅವರ ವಿರುದ್ಧ ದೂರು ನೀಡಿದ್ದೇವೆ ಎಂದು ಹೇಳಿದರು.

    ಮದ್ಯದ ಅಮಲಿನಲ್ಲಿ ಕಾರು ಚಾಲನೆ ಸಹ ಮಾಡಿದ್ದಾರೆ. ಮಾರ್ಗ ಮಧ್ಯೆ ಬೈಕ್​ ಒಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಸಪ್ನಾ ಮತ್ತು ಶಾ ನಡುವೆ ಯಾವುದೇ ಪರಿಚಯವಿಲ್ಲ. ಸೆಲ್ಫಿ ತೆಗೆದುಕೊಳ್ಳಲು ಮಾತ್ರ ಶಾ ಬಳಿ ಸಪ್ನಾ ತೆರಳಿದ್ದರು. ಸಪ್ನಾಗೆ ಜಾಮೀನು ಪಡೆಯಲು ಪಯತ್ನಿಸುತ್ತಿದ್ದೇವೆ ಎಂದು ಕಾಶೀಫ್​ ಖಾನ್ ತಿಳಿಸಿದರು. ​

    ಅಂದಹಾಗೆ ಬುಧವಾರ (ಫೆ.15) ರಾತ್ರಿ ಈ ಘಟನೆ ನಡೆದಿದೆ. ಸೆಲ್ಫಿ ಕೊಡಲು ನಿರಾಕರಿಸಿದ್ದಕ್ಕೆ ಒಂದು ಗುಂಪು ಪೃಥ್ವಿ ಶಾ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಸಪ್ನಾ ಎಂಬ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಬಂಧನವಾಗಿದ್ದು, ಪೃಥ್ವಿ ಶಾ ಅವರೇ ಮೊದಲು ನನ್ನನ್ನು ನಿಂದಿಸಿದರು ಎಂದು ಆಕೆಯು ಸಹ ಆರೋಪ ಮಾಡಿದ್ದಾಳೆ.

    ಅಂದಹಾಗೆ ಶಾ ಅವರು ತಮ್ಮ ಸ್ನೇಹಿತರೊಂದಿಗೆ ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ಪಂಚತಾರಾ ಹೋಟೆಲ್​ ತೆರಳಿದ್ದರು. ಹೋಟೆಲ್​ ಒಳಗೆ ಕೇಳಿದ ಅನೇಕ ಸೆಲ್ಫಿಗಳಿಗೆ ಅವರು ಪೋಸ್​​ ನೀಡಿದರು. ಆದರೆ, ಕೆಲವರು ಹೋಟೆಲ್​ ಹೊರಗೆ ಶಾ ಅವರಿಗಾಗಿ ಕಾಯುತ್ತಿದ್ದರು. ಅವರಿಗೂ ಪೃಥ್ವಿ ಶಾ ಸಹಕರಿಸಿ, ಸೆಲ್ಫಿ ಕೊಟ್ಟಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಯುವಕರು ಮತ್ತೆ ಮತ್ತೆ ಸೆಲ್ಫಿಗೆ ಫೋಸ್ ಕೊಡುವಂತೆ ಕೇಳಿಕೊಂಡಿದ್ದಕ್ಕೆ ಪೃಥ್ವಿ ಶಾ ನಿರಾಕರಿಸಿದ್ದಾರೆ.

    ಸೆಲ್ಫಿ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಗುಂಪು ಶಾ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ವಾಗ್ವಾದ ನಿಧಾನವಾಗಿ ದೈಹಿಕ ಹಲ್ಲೆಗೆ ತಿರುಗಿದೆ. ಈ ವೇಳೆ ಶಾ ಅವರು ತಮ್ಮ ಕಾರನ್ನೇರಿ ತಕ್ಷಣ ಅಲ್ಲಿಂದ ಹೊರಟರು. ಆದರೆ, ಅಷ್ಟಕ್ಕೆ ಸುಮ್ಮನಾಗದ ಆ ಗುಂಪು ಶಾ ಅವರ ಕಾರನ್ನು ಹಿಂಬಾಲಿಸಿ ಹೋಗಿ ಬೇಸ್​ಬಾಲ್​ ಬ್ಯಾಟ್​ಗಳಿಂದ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರಿನ ವಿಂಡ್​ಶೀಲ್ಡ್​ಗೆ ಹಾನಿಯಾಗಿದೆ ಎಂದು ಶಾ ಪರ ದೂರಿನಲ್ಲಿ ಉಲ್ಲೇಖವಾಗಿದೆ.

    ಇದೀಗ 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಓರ್ವ ಆರೋಪಿಯನ್ನು ಮುಂಬೈ ಪೊಲೀಸರು ಬಂಧನ ಮಾಡಿದ್ದಾರೆ. (ಏಜೆನ್ಸೀಸ್​)

    ಸೆಲ್ಫಿ ನಿರಾಕರಿಸಿದ್ದಕ್ಕೆ ಪೃಥ್ವಿ ಶಾ ಮೇಲೆ ಹಲ್ಲೆ: ಸೋಶಿಯಲ್​ ಮೀಡಿಯಾ ಸುಂದರಿ ಅರೆಸ್ಟ್​!

    ಶಾರುಖ್​ ಮ್ಯಾನೇಜರ್​ ಪೂಜಾರ ಒಟ್ಟು ಆಸ್ತಿ ಮೌಲ್ಯ, ವಾರ್ಷಿಕ ಸಂಬಳ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

    ಫೋಟೋ ತೆಗೆದು ದಂಡ ವಿಧಿಸುವುದಕ್ಕೂ ಬ್ರೇಕ್: ಸುಗಮ ಸಂಚಾರಕ್ಕಷ್ಟೇ ಪೊಲೀಸರ ಸೇವೆ ಸೀಮಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts