More

    ರೋಹಿತ್ ಟೆಸ್ಟ್ ನಾಯಕನ ಪಟ್ಟವೇರಲು ವೇದಿಕೆ ಸಜ್ಜು; ಲಂಕಾ ಸರಣಿಗೆ ಮುಂದಿನ ವಾರ ಭಾರತ ತಂಡ ಆಯ್ಕೆ

    ನವದೆಹಲಿ: ಪ್ರವಾಸಿ ಶ್ರೀಲಂಕಾ ವಿರುದ್ಧದ ತವರಿನ ಟಿ20 ಮತ್ತು ಟೆಸ್ಟ್ ಸರಣಿಗೆ ಭಾರತ ತಂಡದ ಆಯ್ಕೆ ಮುಂದಿನ ವಾರ ನಡೆಯುವ ನಿರೀಕ್ಷೆ ಇದ್ದು, ಟೆಸ್ಟ್ ತಂಡಕ್ಕೂ ರೋಹಿತ್ ಶರ್ಮ ಅವರನ್ನು ನಾಯಕರನ್ನಾಗಿ ಅಧಿಕೃತವಾಗಿ ನೇಮಿಸಲು ವೇದಿಕೆ ಸಜ್ಜುಗೊಂಡಿದೆ.

    ಈಗಾಗಲೆ ಟಿ20, ಏಕದಿನ ತಂಡದ ನಾಯಕರಾಗಿರುವ ರೋಹಿತ್‌ಗೆ ಟೆಸ್ಟ್ ತಂಡದ ಜವಾಬ್ದಾರಿಯನ್ನೂ ಒಪ್ಪಿಸಲು ಆಯ್ಕೆಗಾರರಿಗೆ ಬಿಸಿಸಿಐ ಪದಾಧಿಕಾರಿಗಳು ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ್ದರು. ಮಾರ್ಚ್ 4ರಿಂದ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಅದಕ್ಕೆ ಮುನ್ನ ಫೆಬ್ರವರಿ 24ರಿಂದ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

    ಅನುಭವಿ ಬ್ಯಾಟರ್‌ಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರ ಭವಿಷ್ಯ ರಣಜಿ ಟ್ರೋಫಿಯಲ್ಲಿ ತೋರುವ ನಿರ್ವಹಣೆಯ ಆಧಾರದಲ್ಲಿ ನಿರ್ಧಾರವಾಗಲಿದೆ. ಗುರುವಾರದಿಂದ ಅವರಿಬ್ಬರು ರಣಜಿ ಪಂದ್ಯ ಆಡಲಿದ್ದು, ಅದರಲ್ಲಿ ಮಿಂಚಿದರೆ ಮಾತ್ರ ಟೆಸ್ಟ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು ಅನುಭವಿ ವೇಗಿ ಇಶಾಂತ್ ಶರ್ಮ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಾಹರನ್ನು ಕಡೆಗಣಿಸುವುದು ಈಗಾಗಲೆ ಸ್ಪಷ್ಟವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts