More

    ಜೀನ್ಸ್​-ಟಿ ಶರ್ಟ್​, ಪ್ಯಾಂಟ್​- ಶರ್ಟ್​ ಹಾಕಿದವರಿಗೆ ಕಾಶಿ ವಿಶ್ವನಾಥನ ಸ್ಪರ್ಶ ಸಾಧ್ಯವಿಲ್ಲ: ವಾರಾಣಸಿಯಲ್ಲಿ ಶೀಘ್ರ ಜಾರಿಯಾಗಲಿದೆ ಡ್ರೆಸ್​ಕೋಡ್

    ವಾರಾಣಸಿ: ಪ್ರಖ್ಯಾತ ಕಾಶಿ ವಿಶ್ವನಾಥನ ದರ್ಶನಕ್ಕೆ ಇನ್ನು ಡ್ರೆಸ್​ ಕೋಡ್​ ಜಾರಿಯಾಗುತ್ತಿದೆ.

    ಜ್ಯೋತಿರ್ಲಿಂಗದ ಸ್ಪರ್ಶಿಸುವವರು (ಸ್ಪರ್ಶ ದರ್ಶನ) ಇನ್ನು ಜುಬ್ಬಾ- ಪಂಚೆ ಹಾಕಬೇಕು. ಇಂತಹದ್ದೊಂದು ಮನವಿಯನ್ನು ಕಾಶಿ ವಿದ್ವತ್​ ಪರಿಷದ್​ ಮಾಡಿದೆ. ಈ ಪರಿಷದ್​ ಸಂಸ್ಕೃತ ಪಂಡಿತರು ಮತ್ತು ವೈದಿಕ ತಜ್ಞರನ್ನೊಳಗೊಂಡ ಸನಾತನ ಸಂಸ್ಥೆ.

    ಯಾವ ಭಕ್ತರು ಪ್ಯಾಂಟ್​, ಶರ್ಟ್​ ಅಥವಾ ಜೀನ್ಸ್​ ಬಟ್ಟೆ ಹಾಕಿರುತ್ತಾರೋ ಅವರು ದೂರದಿಂದ ವಿಶ್ವನಾಥನ ದರ್ಶನ ಮಾಡಬಹುದು ಅಷ್ಟೆ. ಅವರಿಗೆ ಗರ್ಭಗುಡಿಯೊಳಗೆ ಪ್ರವೇಶಿವಿಲ್ಲ.

    ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಡಾ. ನೀಲಕಂಠ ತಿವಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮನವಿಯನ್ನು ಪರಿಷದ್​ನ ಸದಸ್ಯರು​ ಮಾಡಿದರು. ಜತೆಗೆ ಸ್ಪರ್ಶ ದರ್ಶನದ ಸಮಯವನ್ನು ಹೆಚ್ಚಿಸಬೇಕು, ಇದರಿಂದ ಹೆಚ್ಚು ಹೆಚ್ಚು ಭಕ್ತರಿಗೆ ದರ್ಶನ ದೊರೆಯಲಿದೆ ಎಂದರು.

    “ಡ್ರೆಸ್​ಕೋಡ್​ ಬಗ್ಗೆ ದೇಗುಲದ ಆಡಳಿತ ಮಂಡಳಿ ಶೀಘ್ರ ಕ್ರಮ ಕೈಗೊಳ್ಳಲಿದೆ. ಇಲ್ಲಿನ ಅರ್ಚಕರಿಗೂ ಡ್ರೆಸ್​ಕೋಡ್​ ಮಾಡಲಾಗುವುದು. ಅಷ್ಟು ಜನರ ಗುಂಪಿನಲ್ಲಿ ಅರ್ಚಕರನ್ನು ಗುರುತಿಸಲು ಇದು ಸಹಾಯವಾಗಲಿದೆ” ಎಂದು ಸಚಿವ ತಿವಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts