More

    ತಂತ್ರಜ್ಞಾನ ಉದ್ಯಮಕ್ಕೆ ನೂತನ ನೀತಿ- ಬಂಡವಾಳ ಹೂಡಿಕೆಗೆ ಸಹಕಾರಿ: ಡಿಕೆಶಿ

    ಬೆಂಗಳೂರು ಮನರಂಜನಾ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಬಳಕೆ ಹೆಚ್ಚಾಗುತ್ತಿದೆ. ಹಾಲಿವುಡ್ ಹಾಗೂ ಟಿವಿ ಕ್ಷೇತ್ರದಲ್ಲಿ ತಂತ್ರಜ್ಞಾನ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಆದ್ದರಿಂದ ನಾವು ಕೂಡ ತಂತ್ರಜ್ಞಾನ ಸಂಬಂಧಿ ನೂತನ ನೀತಿ ರೂಪಿಸಿಕೊಳ್ಳಬೇಕಿದೆ. ನೂತನ ನೀತಿ ಕೈಗಾರಿಕಾ ಸ್ನೇಹಿಯಾಗಿರಲಿದ್ದು, ಬಂಡವಾಳ ಹೂಡಿಕೆ ಆಕರ್ಷಣೆಗೆ ಸಹಕಾರಿಯಾಗಿರಲಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.

    ನಗರದ ಖಾಸಗಿ ಹೋಟೆಲ್‌ನಲ್ಲಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಯೋಜಿಸಿರುವ ಮೂರು ದಿನಗಳ ಜಿಎಎ್ಎಕ್ಸ್-2024 ಐದನೇ ಆವೃತ್ತಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

    ನಮ್ಮ ನೂತನ ನೀತಿಯಲ್ಲಿ ಅನ್ವೇಶಣೆ, ಜಾಗತಿಕ ಮಟ್ಟದ ಸ್ಪರ್ಧೆಗೆ ಅವಕಾಶ ನೀಡಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

    ಈ ಉದ್ಯಮ ಪ್ರತಿ ಒಂದೆರಡು ವರ್ಷಗಳಲ್ಲಿ ಬದಲಾವಣೆ ಕಾಣುತ್ತಿರುತ್ತದೆ. ಆದ್ದರಿಂದ ಈ ಉದ್ಯಮಕ್ಕೆ ಎದುರಾಗುವ ಸವಾಲುಗಳನ್ನು ಎದುರಿಸಲು, ಅವುಗಳನ್ನು ಬಲಪಡಿಸಲು ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಈ ಉದ್ಯಮದ ಅಭಿವೃದ್ಧಿಗೆ ಕರ್ನಾಟಕ ಬದ್ಧವಾಗಿದೆ. ಕರ್ನಾಟಕವನ್ನು ಜಾಗತಿಕ ಕೌಶಲ್ಯ ಕೇಂದ್ರವಾಗಿ ಮಾಡುವ ಗುರಿ ಇದೆ. ಕೌಶಲಾಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ನೂತನ ನೀತಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಡಾ. ಏಕ್‌ರೂಪ್ ಕೌರ್, ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಿತುಲ್‌ಕುಮಾರ್, ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಸೇರಿ ಹಲವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts