More

    ರಾಷ್ಟ್ರೀಯ ಶಿಕ್ಷಣ ನೀತಿ ಕೇಂದ್ರದೊಂದಿಗೆ ರಾಜ್ಯದಲ್ಲೂ ಜಾರಿಗೆ; ಸಚಿವ ಅಶ್ವತ್ಥನಾರಾಯಣ ಘೋಷಣೆ

    ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ನವ ಭಾರತವನ್ನು ನಿರ್ಮಾಣ ಮಾಡುವ ಪ್ರಬಲ ಶಕ್ತಿ ಹೊಂದಿದ್ದು, ಆಧುನಿಕ ದೃಷ್ಟಿಕೋನ, ದೇಶದ ಅಗತ್ಯಗಳು, ಜಾಗತಿಕ ಸವಾಲು.. ಹೀಗೆ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ರೂಪಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು, ಆ ಬಗ್ಗೆ ಸೂಕ್ತ ಸಲಹೆ-ಸಹಕಾರ ನೀಡಲು ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದೆ. ಕೇಂದ್ರ ಜಾರಿ ಮಾಡಿದ ಕೂಡಲೇ ರಾಜ್ಯದಲ್ಲಿಯೂ ನೀತಿ ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ; 65 ಸಾವಿರ ರೂ.ಗೆ ಏರಲಿದೆ 10 ಗ್ರಾಂ ಚಿನ್ನದ ಬೆಲೆ; ಬಂಗಾರದಲ್ಲಿ ಹೂಡಿಕೆಗೆ ಸಕಾಲ….! 

    ಹಲವು ವರ್ಷಗಳಿಂದ ನಮ್ಮ ಶಿಕ್ಷಣ ನೀತಿಯೇ ಬದಲಾಗಿರಲಿಲ್ಲ. ಶಿಕ್ಷಣ ಸಶಕ್ತ ಸಮಾಜದ ಆತ್ಮ. ಯಾವುದೇ ದೇಶವನ್ನು ಬಲಿಷ್ಠ, ಭವ್ಯವಾಗಿ ನಿರ್ಮಾಣ ಮಾಡಬಲ್ಲ ಶಕ್ತಿ ಅದಕ್ಕೆ ಮಾತ್ರ ಇದೆ. ಶಿಕ್ಷಣ ನೀತಿ ಜಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದಾರೆ ಎಂದಿದ್ದಾರೆ.

    ಶಿಕ್ಷಣ ಪದ್ಧತಿಯಲ್ಲಿ ಏಕರೂಪತೆ ತರುವುದು, ಸರ್ವರಿಗೂ ಶಿಕ್ಷಣ ಎನ್ನುವ ಮಾತಿನಂತೆ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡುವುದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತದಿಂದಲೇ ಅತ್ಯುತ್ತಮ ಶಿಕ್ಷಣ ಸಿಗಲಿ ಎಂಬುದು ನೀತಿಯ ಆಶಯವಾಗಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ; ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಉತ್ಪ್ರೇಕ್ಷೆ ಬೇಡ; ಆರ್ಥಿಕತೆ ಮತ್ತೆ ಸ್ಥಗಿತಗೊಳಿಸಬೇಡಿ; ತಜ್ಞರು ಹೇಳಿದ್ಯಾರಿಗೆ? 

    ಸುರೇಶ್​ಕುಮಾರ್​ ಸ್ವಾಗತ: ಬದಲಾವಣೆಗಾಗಿ ಬೋಧನೆ; ಸಬಲೀಕರಣಕ್ಕಾಗಿ ಶಿಕ್ಷಣ ಹಾಗೂ ಮುನ್ನಡೆಸಲು ಕಲಿಕೆ ಎಂಬ ಧ್ಯೇಯದೊಂದಿಗೆ ಅನುಷ್ಠಾನಗೊಳ್ಳಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸ್ವಾಗತಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ಕುಮಾರ್​ ಹೇಳಿದ್ದಾರೆ. ಈ ನೀತಿಯ ಪ್ರಮುಖ ಅಂಶಗಳನ್ನು ಜಾರಿಗೊಳಿಸುವತ್ತ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದಿದ್ದಾರೆ.

    ಎಂಫಿಲ್​ ರದ್ದು, ಪದವಿ ಶಿಕ್ಷಣ ಸ್ವರೂಪದಲ್ಲಿ ಬದಲಾವಣೆ; ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಏನೇನಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts