More

    ಬೆಂಗಳೂರಿನಲ್ಲಿ ವಿಶ್ವ ದರ್ಜೆ ಎನ್‌ಸಿಎ ಕೇಂದ್ರ ನಿರ್ಮಾಣ; 3 ಕ್ರಿಕೆಟ್ ಮೈದಾನ, 40 ಪಿಚ್!

    ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಸಂಕೀರ್ಣಕ್ಕೆ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಷಾ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ಬೆಂಗಳೂರು ಹೊರವಲಯದಲ್ಲಿ ವಿಶ್ವ ದರ್ಜೆ ಸೌಲಭ್ಯಗಳನ್ನು ಹೊಂದಿರುವ ಎನ್‌ಸಿಎಯ ಹೊಸ ಕೇಂದ್ರ ನಿರ್ಮಾಣಗೊಳ್ಳಲಿದೆ. ಈ 50 ಏಕರೆ ಪ್ರದೇಶವನ್ನು ಬಿಸಿಸಿಐಗೆ ಕರ್ನಾಟಕ ಸರ್ಕಾರ 99 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಿದೆ.

    ‘ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕೆಲಸ ಇಂದು ಆರಂಭಗೊಂಡಿದೆ. ಇದಕ್ಕೆ ಬೆಂಗಳೂರಿನಲ್ಲಿ ಶಂಕು ಸ್ಥಾಪನೆ ನೆರವೇರಿಸಲಾಯಿತು’ ಎಂದು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ೆಟೋಗಳ ಸಮೇತ ಟ್ವೀಟ್ ಮಾಡಿದ್ದಾರೆ. ‘ನೂತನ ಎನ್‌ಸಿಎ, ಶ್ರೇಷ್ಠತಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ’ ಎಂದು ಕಾರ್ಯದರ್ಶಿ ಜಯ್ ಷಾ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ್ ಧುಮಾಲ್, ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್, ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹಾಗೂ ಕೆಎಸ್‌ಸಿಎ ಪದಾಧಿಕಾರಿಗಳು ಉಪಸ್ಥಿತರಿದ್ದರು.

    2000ದಲ್ಲಿ ಸ್ಥಾಪನೆಗೊಂಡ ಎನ್‌ಸಿಎ ಸದ್ಯ, ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೊರಾಂಗಣ ಅಭ್ಯಾಸಕ್ಕೆ ಬಿ ಗ್ರೌಂಡ್‌ಅನ್ನು ಎನ್‌ಸಿಎಗೆ ಕೆಎಸ್‌ಸಿಎ ಬಾಡಿಗೆ ಆಧಾರದಲ್ಲಿ ನೀಡಿದ್ದರೆ, ಒಳಾಂಗಣದಲ್ಲಿ ಆಧುನಿಕ ಜಿಮ್ ವ್ಯವಸ್ಥೆ ಒಳಗೊಂಡಿದೆ.

    ಸುಸಜ್ಜಿತ ಎನ್‌ಸಿಎ ನಿರ್ಮಾಣ
    ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿರುವ ಹೈಟೆಕ್ ಡಿೆನ್ಸ್ ಏರೋಪಾರ್ಕ್ ಬಳಿ 50 ಏಕರೆ ಪ್ರದೇಶದಲ್ಲಿ ನೂತನ ಎನ್‌ಸಿಎ ತಲೆ ಎತ್ತುತ್ತಿದೆ. ಇನ್ನು ಒಂದು ವರ್ಷದ ಒಳಗಾಗಿ ಎನ್‌ಸಿಎ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ. ನೂತನ ಎನ್‌ಸಿಎ ಕೇಂದ್ರದಲ್ಲಿ ಮೂರು ಕ್ರಿಕೆಟ್ ಮೈದಾನಗಳನ್ನು ನಿರ್ಮಿಸುತ್ತಿದ್ದು, ದೇಶೀಯ ಪಂದ್ಯಗಳು ನಡೆಯಲಿವೆ. 16 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಆಧುನಿಕ ಪರಿಕರಗಳನ್ನು ಒಳಗೊಂಡ ಜಿಮ್ ಇರಲಿದೆ. 40 ಅಭ್ಯಾಸ ಪಿಚ್‌ಗಳು ಇರಲಿದ್ದು, ಈ ಪೈಕಿ 20ಕ್ಕೆ ಹೊನಲು ಬೆಳಕಿನ ವ್ಯವಸ್ಥೆಯೂ ಇರಲಿದೆ. ಆಟಗಾರರ ವಾಸ್ತವ್ಯಕ್ಕೆ 243 ಕೊಠಡಿಗಳ ವ್ಯವಸ್ಥೆ ಇರಲಿದ್ದು, ಅವರ ಮಕ್ಕಳಿಗೆ ಶಿಶುಧಾಮವೂ ಇರಲಿದೆ. ಉಷ್ಣಾಂಶ ನಿಯಂತ್ರಿಸಬಲ್ಲ ಈಜುಕೊಳ ಮತ್ತು ಒಳಾಂಗಣ ಅಭ್ಯಾಸ ಸೌಕರ್ಯವೂ ಇರಲಿದೆ. ಇದರ ಆವರಣದಲ್ಲಿ ಬ್ಯಾಂಕ್, ಫಾರ್ಮಸಿ, ಆಸ್ಪತ್ರೆ, ಕೋರಿಯರ್, ಸಲೂನ್, ಎಟಿಎಂ, ಸೈಕ್ಲಿಂಗ್ ಟ್ರ್ಯಾಕ್, ಬಾಸ್ಕೆಟ್‌ಬಾಲ್, ಟೆನಿಸ್ ಮತ್ತು ುಟ್ಸಲ್ ಕೋರ್ಟ್ ಇರಲಿವೆ.

    ತಾಯ್ತನದ ಬಳಿಕ ಸ್ಕ್ವಾಷ್​ಗೆ ಮರಳಲು ಸಜ್ಜಾದ ದೀಪಿಕಾ ಪಲ್ಲಿಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts