More

    ನೂತನ ಶಿಕ್ಷಣ ನೀತಿಗೆ ವಿರೋಧ: ಬಳ್ಳಾರಿ ಡಿಸಿ ಕಚೇರಿ ಮುಂದೆ ಎಐಡಿಎಸ್‌ಒ ಪ್ರತಿಭಟನೆ

    ಬಳ್ಳಾರಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಎಐಡಿಎಸ್‌ಒ ಪದಾಧಿಕಾರಿಗಳು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಸಂಘದ ಜಿಲ್ಲಾಧ್ಯಕ್ಷ ಗುರಳ್ಳಿ ರಾಜ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಎನ್‌ಇಪಿ-2020ಅನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ. ಈ ನೀತಿಯ ಪ್ರಸ್ತಾವನೆ ಆದಾಗಿನಿಂದಲೂ, ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿಗಳು, ಪಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ರಾಜ್ಯ ಸರ್ಕಾರ ಅತ್ಯಂತ ತರಾತುರಿಯಲ್ಲಿ, ಪೂರ್ವಭಾವಿ ತಯಾರಿ ಇಲ್ಲದೆ ಎನ್‌ಇಪಿ-2020ರ ಭಾಗವಾಗಿರುವ ನಾಲ್ಕು ವರ್ಷದ ಪದವಿ ಕೋರ್ಸ್‌ಅನ್ನು ಅನುಷ್ಠಾನಕ್ಕೆ ತಂದಿದೆ. ಈ ಮೂಲಕ ರಾಜ್ಯದ ಶಿಕ್ಷಕ ವರ್ಗ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರವಾಗಲಿದೆ.

    ಕಾರಣ ಈಗಾಗಲೇ, ಪ್ರಥಮ ಪದವಿ ತರಗತಿಗಳು ಆರಂಭವಾಗಿದ್ದು, ಎನ್‌ಇಪಿ-2020 ಆಧಾರಿತ ಪಠ್ಯಕ್ರಮ ತಯಾರಾಗಿಲ್ಲ. ಇದರ ಜತೆ ಶಿಕ್ಷಕರಿಗಾಗಲಿ ವಿದ್ಯಾರ್ಥಿಗಳಿಗಾಗಲಿ ಪಠ್ಯಪುಸ್ತಕ ಲಭ್ಯವಿಲ್ಲ. ಹೀಗಾಗಿ ಶಿಕ್ಷಕರ ಭವಿಷ್ಯ ಹಾಗೂ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ಸದುದ್ದೇಶದಿಂದ ಸರ್ಕಾರ ಎನ್‌ಇಪಿ ಅನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. ಸದಸ್ಯರಾದ ನಿಹಾರಿಕಾ, ಉಮಾದೇವಿ, ನಾಗರತ್ನ, ಲಕ್ಷ್ಮೀ, ಮೋಹನ್, ವಿದ್ಯಾರ್ಥಿಗಳಾದ ಸುನೀಲ್, ತಿಪ್ಪೇರುದ್ರ, ಶಿವ, ಮಂಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts