More

    ಉಗ್ರತ್ವ ಭಾವನೆ ಬೆಳೆಸಲು ರಾಷ್ಟ್ರೀಯತೆ, ಭಾರತ್​ ಮಾತಾ ಕೀ ಜೈ ಘೋಷಣೆ ಬಳಕೆಯಾಗುತ್ತಿರುವುದು ದುರಂತ: ಮಾಜಿ ಪ್ರಧಾನಿ ಡಾ. ಸಿಂಗ್​

    ನವದೆಹಲಿ: ರಾಷ್ಟ್ರೀಯತೆ ಮತ್ತು ಭಾರತ್​ ಮಾತಾ ಕೀ ಜೈ ಎನ್ನುವ ಘೋಷಣೆಗಳನ್ನು ಉಗ್ರತ್ವ ಭಾವನೆ ಬೆಳೆಸಲು ಬಳಸುತ್ತಿರುವುದು ದುರಂತ ಎಂದು ಮಾಜಿ ಪ್ರಧಾನಿ ಡಾ. ಮನ ಮೋಹನ್​ ಸಿಂಗ್​ ಹೇಳಿದರು.

    ಜವಾಹರ ಲಾಲ್​ ನೆಹರು ಅವರ ಕಾರ್ಯ ಮತ್ತು ಭಾಷಣಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಪರೋಕ್ಷವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

    ಭಾರತ ವಿಶ್ವದಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ, ಭಾರತ ವಿಶ್ವದ ಬಲಶಾಲಿ ದೇಶಗಳಲ್ಲೊಂದು ಎಂದು ಗುರುತಿಸಿಕೊಳ್ಳಲು ಕಾರಣ ದೇಶದ ಮೊದಲ ಪ್ರಧಾನಿ ನೆಹರು ಕಾರಣ ಎಂದರು.

    ಭಾರತೀಯ ಪರಂಪರೆಯ ಬಗ್ಗೆ ನೆಹರು ಹೆಮ್ಮೆಪಡುತ್ತಿದ್ದರು, ಅಂತಹ ಪರಂಪರೆಯನ್ನು ಒಟ್ಟುಗೂಡಿಸಿದರು. ಆಧುನಿಕ ಭಾರತದ ಅಗತ್ಯತೆಗಳಿಗೆ ಹೊಂದಿಕೊಂಡರು ಎಂದು ಮಾಜಿ ಪ್ರಧಾನಿ ಹೇಳಿದರು.

    ಆದರೆ ಇತಿಹಾಸವನ್ನು ಓದುವ ತಾಳ್ಮೆ ಇಲ್ಲದ, ಮತ್ತು ಪೂರ್ವಾಗ್ರಹ ಪೀಡಿತರಾದ ಜನರು ನೆಹರು ಅವರನ್ನು ಸುಳ್ಳು ಬೆಳಕಿನಲ್ಲಿ ಚಿತ್ರಿಸಲು ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆ. ಇತಿಹಾಸಕ್ಕೆ ಒಂದು ಸಾಮರ್ಥ್ಯವಿದೆ. ನಕಲಿ ಮತ್ತು ಸುಳ್ಳು ಪ್ರಚೋದನೆಗಳನ್ನು ತಿರಸ್ಕರಿಸಿ ಮತ್ತು ಎಲ್ಲವನ್ನೂ ಸರಿಯಾದ ದೃಷ್ಟಿಕೋನದಲ್ಲಿ ಇರಿಸುತ್ತದೆ ಎಂದರು.

    ಪುರುಷೋತ್ತಮ ಅಗರ್​ವಾಲ ಮತ್ತು ರಾಧಾಕೃಷ್ಣ ಅವರ “Who is Bharat Mata” ಪುಸ್ತಕವು ನೆಹರು ಅವರ ಡಿಸ್ಕವರಿ ಆಪ್​ ಇಂಡಿಯಾ, ಭಾಷಣಗಳು, ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಬರೆದ ಪತ್ರಗಳು, ಸಂದರ್ಶನಗಳನ್ನು ಒಳಗೊಂಡಿದೆ, ಮೊದಲು ಇದು ಇಂಗ್ಲಿಷ್​ನಲ್ಲಿ ಲಭ್ಯವಿತ್ತು. ಇದೀಗ ಕನ್ನಡಕ್ಕೆ ತರ್ಜುಮೆಗೊಂಡಿದೆ.

    ಪುಸ್ತಕವು ಜವಾಹರ ಲಾಲ್ ನೆಹರು ಅವರ ಸಮಕಾಲೀನರಾದ ಗಾಂಧಿ, ಭಗತ್ ಸಿಂಗ್, ಸರ್ದಾರ್ ಪಟೇಲ್, ಮೌಲಾನಾ ಆಜಾದ್, ಅರುಣಾ ಅಸಫ್ ಅಲಿ, ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ನೆನಪುಗಳ ಬರಹಗಳನ್ನು ಕೂಡ ಒಳಗೊಂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts