More

    ನಿಮಗೆ ಭಾರತದ ಮುಂದಿನ ಸಿಜೆಐ ಯಾರು ಗೊತ್ತಾ?

    ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಂದಿನ ಸಿಜೆಐ (ಚೀಫ್ ಜಸ್ಟಿಸ್ ಆಫ್​ ಇಂಡಿಯಾ)ಯಾರು ಎಂದು ಘೋಷಿಸಿದ್ದಾರೆ.

    ಜಸ್ಟೀಸ್ ಧನಂಜಯ ವೈ ಚಂದ್ರಚೂಡ ನವೆಂಬರ್ 9ರಿಂದ ಸಿಜೆಐ ಆಗಿ ಸೇವೆ ಸಲ್ಲಿಸಲು ಪ್ರಾರಂಭಿಸಲಿದ್ದಾರೆ. ಇವರು ಜಸ್ಟಿಸ್ ಯು.ಯು. ಲಲಿತ್​ರ ನಿವತ್ತಿ ನಂತರ 50ನೇ ಸಿಜೆಐ ಆಗಿ ಪದಗ್ರಹಣ ಮಾಡಲಿದ್ದಾರೆ.

    ಸಿಜೆಐ ಆಗಿ ಜಸ್ಟಿಸ್ ಚಂದ್ರಚೂಡ 2024ರ ವರೆಗೆ ಅಧಿಕಾರದಲ್ಲಿ ಇರಲಿದ್ದಾರೆ. ಇತ್ತೀಚೆಗೆ ಬಂದಿರುವ ಸಿಜೆಐಗಳ ಕಾಲಾವಧಿಯನ್ನು ಗಮನಿಸಿದರೆ, ಇದು ದೀರ್ಘಾವಧಿ ಆಗಿರಲಿದೆ. ಇವರ ತಂದೆ ಜಸ್ಟಿಸ್ ವೈವಿ ಚಂದ್ರಚೂಡ ಭಾರತದ 16ನೇ ಸಿಜೆಐ ಆಗಿದ್ದರು.

    ಇವರು ಸಲಿಂಗ ಕಾಮವನ್ನು ಸಮರ್ಥಿಸಿದ್ದರು. ಅದಲ್ಲದೇ ಅಯೋಧ್ಯಾ-ಬಾಬರಿ ಮಸೀದಿ ಪ್ರಕರಣದಲ್ಲಿ ಪೀಠದಲ್ಲಿದ್ದ ಐವರು ನ್ಯಾಯಾಧೀಶರಲ್ಲಿ ಒಬ್ಬರಾಗಿದ್ದರು. ಇವರಿಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜುಝು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts