More

    ರಾಷ್ಟ್ರಪತಿ ಕೋವಿಂದ, ಪ್ರಧಾನಿ ಮೋದಿಗಾಗಿ ಬರಲಿರುವ ವಿಮಾನಗಳು ಹೇಗಿವೆ ಗೊತ್ತಾ…?

    ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಓಡಾಟಕ್ಕಾಗಿ ಎರಡು ಅತ್ಯಾಧುನಿಕ ಬಿ777 ವಿಮಾನಗಳನ್ನು ಖರೀದಿಸಲಾಗುತ್ತಿದೆ. ಬೋಯಿಂಗ್​ ಸಂಸ್ಥೆ ನಿರ್ಮಿಸಿರುವ ಈ ವಿಮಾನಗಳು ಸೆಪ್ಟೆಂಬರ್​ನಲ್ಲಿ ಭಾರತದ ಏರ್​ ಇಂಡಿಯಾ ಸಂಸ್ಥೆಗೆ ಹಸ್ತಾಂತರಗೊಳ್ಳುವ ಸಾಧ್ಯತೆ ಇದೆ.

    ಅತಿಗಣ್ಯ ವ್ಯಕ್ತಿಗಳ ಓಡಾಟಕ್ಕೆ ಬಳಸಲಾಗುವ ಈ ವಿಮಾನಗಳನ್ನು ಈ ವರ್ಷದ ಜುಲೈನಲ್ಲೇ ಹಸ್ತಾಂತರಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಇದರ ಹಸ್ತಾಂತರದಲ್ಲಿ ವಿಳಂಬವಾಗಿದೆ.

    ವಾಯುಪಡೆ ಯೋಧರ ಚಾಲನೆ: ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ಸೇರಿ ಅತಿಗಣ್ಯರ ಓಡಾಟಕ್ಕಾಗಿ ಸದ್ಯ ಏರ್​ಇಂಡಿಯಾದ ಬಿ747 ವಿಮಾನಗಳನ್ನು ಬಳಸಲಾಗುತ್ತದೆ. ಈ ವಿಮಾನಗಳನ್ನು ಏರ್​ಇಂಡಿಯಾ ಪೈಲಟ್​ಗಳೇ ಚಾಲನೆ ಮಾಡುತ್ತಿದ್ದರು. ಏರ್​ ಇಂಡಿಯಾ ಒನ್​ ಎಂಬ ಕರೆ ಸಂಜ್ಞೆ (Call Sign) ಹೊಂದಿರುವ ಈ ವಿಮಾನವನ್ನು ಏರ್​ಇಂಡಿಯಾದ ಉಪಸಂಸ್ಥೆ ಏರ್​ ಇಂಡಿಯಾ ಇಂಜಿನಿಯರಿಂಗ್​ ಸರ್ವೀಸಸ್​ ಲಿಮಿಟೆಡ್​ (ಎಐಇಎಸ್​ಎಲ್​) ನಿರ್ವಹಣೆ ಮಾಡುತ್ತಿತ್ತು. ಅತಿಗಣ್ಯ ವ್ಯಕ್ತಿಗಳು ಬಳಸದಿದ್ದಾಗ ಈ ವಿಮಾನಗಳನ್ನು ವಾಣಿಜ್ಯ ಸಂಚಾರಕ್ಕಾಗಿ ಏರ್​ ಇಂಡಿಯಾ ಸಂಸ್ಥೆ ಬಳಸುತ್ತಿತ್ತು.

    ಇದನ್ನೂ ಓದಿ: ಮತ್ತೆ ಏರಿಕೆಯಾಯಿತು ಪೆಟ್ರೋಲ್ ದರ: ನಿತ್ಯ ಪರಿಷ್ಕರಣೆ ನಿಯಮ ಮರುಜಾರಿ

    ಆದರೆ ಇದೀಗ ಖರೀದಿಸಲಾಗುತ್ತಿರುವ ಎರಡು ಬಿ777 ವಿಮಾನಗಳನ್ನು ವಾಯುಪಡೆಯ ಪೈಲಟ್​ಗಳೇ ಚಾಲನೆ ಮಾಡಲಿದ್ದಾರೆ. ಇವುಗಳ ನಿರ್ವಹಣೆಯ ಜವಾಬ್ದಾರಿ ಮಾತ್ರ ಎಐಇಎಸ್​ಎಲ್​ನದ್ದಾಗಿರುತ್ತದೆ. ಇವು ಕೇವಲ ಅತಿಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಸೀಮಿತಗೊಳ್ಳಲಿವೆ.

    ಕ್ಷಿಪಣಿ ನಿರೋಧಕ ವ್ಯವಸ್ಥೆ: ಅತಿಗಣ್ಯರ ಓಡಾಟಕ್ಕಾಗಿ ಖರೀದಿಸಲಾಗುತ್ತಿರುವ ಎರಡು ಬಿ777 ವಿಮಾನದಲ್ಲಿ ಲಾರ್ಜ್​ ಏರ್​ಕ್ರಾಫ್ಟ್​ ಇನ್​ಫ್ರಾರೆಡ್​ ಕೌಂಟರ್​ಮೆಷರ್ಸ್​ (ಎಲ್​ಎಐಆರ್​ಸಿಎಂ) ಎಂಬ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲ, ಸ್ವಯಂರಕ್ಷಣ ಸೂಟ್​ಗಳನ್ನೂ ಇದು ಒಳಗೊಂಡಿದೆ. ಎರಡು ವಿಮಾನಗಳಲ್ಲಿ ಅಳವಡಿಸಲಾಗುತ್ತಿರುವ ಎಲ್​ಎಐಆರ್​ಸಿಎಂ ವ್ಯವಸ್ಥೆಯನ್ನು 1,434.72 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೆರಿಕದಿಂದ ಖರೀದಿಸಲಾಗಿದೆ.

    ನೀಲಿಚಿತ್ರಗಳಲ್ಲಿ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡ ಸೂಪರ್​ಕಾರ್​ ಚಾಲಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts