More

    ಬೆಳಗಿನ ಉಪಾಹಾರದ ವೇಳೆ ಈ 5 ಪದಾರ್ಥಗಳನ್ನು ಸೇವಿಸಲೇಬಾರದು: ಆರೋಗ್ಯ ಕೆಡಲಿದೆ ಹುಷಾರ್​!

    ನವದೆಹಲಿ: ಬೆಳಗಿನ ಆಹಾರ ಆರೋಗ್ಯಕ್ಕೆ ತುಂಬಾ ಮುಖ್ಯವಾದುದ್ದು. ನೀವು ಆರೋಗ್ಯಕರವಾದ ಉಪಾಹಾರ ಸೇವನೆ ಮಾಡಿದರೆ, ಇಡೀ ದಿನ ನೀವು ತುಂಬಾ ಲವಲವಿಕೆಯಿಂದ ಇರುತ್ತೀರಿ. ಆದರೆ, ಕೆಲವೊಂದು ಆಹಾರಗಳನ್ನು ಉಪಾಹಾರದ ವೇಳೆ ಸೇವನೆ ಮಾಡಿದ್ದೇ ಆದಲ್ಲಿ ನೀವು ಇಡೀ ದಿನ ಸಮಸ್ಯೆ ಎದುರಿಸಬೇಕಾಗುತ್ತದೆ.

    ಹೌದು. ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ತಿನ್ನುವುದರಿಂದ ಗಂಭೀರವಾದ ಆರೋಗ್ಯ ಸಮಸ್ಯೆಗಳು ಕಾಣಿ,ಸಿಕೊಳ್ಳುತ್ತವೆ. ಖಾಲಿ ಹೊಟ್ಟೆಯಲ್ಲಿ ತಿನ್ನಬಾರದಂತಹ 5 ಆಹಾರಗಳ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತೇವೆ.

    ಕೆಲವು ಜನ ಹಣ್ಣಿನ ಜ್ಯೂಸ್ ಕುಡಿಯುವ ಮೂಲಕ ದಿನವನ್ನು ಆರಂಭಿಸುತ್ತಾರೆ. ಆದರೆ, ಅದು ಕೂಡ ಆರೋಗ್ಯಕ್ಕೆ ಹಾನಿಕಾರವಾಗಬಹುದು. ಏಕೆಂದರೆ, ಖಾಲಿ ಹೊಟ್ಟೆಯಲ್ಲಿ ಹಣ್ಣಿನ ಜ್ಯೂಸ್‍ನಲ್ಲಿರುವ ಫ್ರೂಕ್ಟೋಸ್ ಎಂಬ ಸಕ್ಕರೆ ಅಂಶವು ಹೃದಯದ ಮೇಲೆ ಪರಿಣಾಮ ಬೀರುತ್ತದೆ.

    ಇದನ್ನೂ ಓದಿರಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಸಾಬೀತು, ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ, 55 ಸಾವಿರ ರೂ. ದಂಡ

    ಸಂಸ್ಕರಿಸಿದ ಶುಗರ್ ತುಂಬಾ ಕೆಟ್ಟದಾಗಿರುವುದರಿಂದ ಉಪಾಹಾರದಲ್ಲಿ ಸಿಹಿತಿನಿಸು (ಸ್ವೀಟ್)ಗಳನ್ನು ಸೇವಿಸಬಾರದು. ಸಕ್ಕರೆ ಅಂಶವುಳ್ಳ ಆಹಾರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಸಾಲೆ ಮತ್ತು ಖಾರವಾದ ವಸ್ತುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಇದು ಹೊಟ್ಟೆಯ ಕಿರಿಕಿರಿಯಾದ ಗ್ಯಾಸ್ಟ್ರಿಕ್ ಮತ್ತು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು.

    ಖಾಲಿ ಹೊಟ್ಟೆಯಲ್ಲಿ ಹುಳಿ ಹಣ್ಣುಗಳನ್ನು ತಿನ್ನಲೇಬಾರದು. ಹಣ್ಣಿನಲ್ಲಿರುವ ಸಿಟ್ರಸ್ ಅಂಶ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಸಮಯದಲ್ಲಿ ಬೇಕಾದರೂ ಸಲಾಡ್ ಅನ್ನು ತಿನ್ನಬಹುದು ಎಂದು ಅನೇಕರು ನಂಬಿದ್ದಾರೆ. ಕಚ್ಛಾ ತರಕಾರಿ ಅಥವಾ ಸಲಾಡ್ ಅನ್ನು ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಸೇವಿಸಬೇಡಿ. ಅದರಲ್ಲಿ ಹೆಚ್ಚಾಗಿ ಫೈಬರ್ ಅಂಶ ಇರುತ್ತದೆ. ಇದು ಹೊಟ್ಟೆಯ ಮೇಲೆ ಹೆಚ್ಚು ಭಾರವನ್ನು ಹಾಕುತ್ತದೆ. ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹೊಟ್ಟೆ ನೋವು ಮತ್ತು ಗ್ಯಾಸ್ಟ್ರಿಕ್‍ನಂತಹ ಸ£ಮಸ್ಯೆಗಳು ಕಾಣಿ¸ಸಿಕೊಳ್ಳುವ ಸಾಧ್ಯತೆ ಇದೆ.

    ಇಂದು ಅನೇಕರಿಗೆ ಬೆಡ್ ಕಾಫಿ, ಟೀ ಇಲ್ಲದೆ ದಿನ ಪರಿಪೂರ್ಣ ಅನಿಸುವುದೇ ಇಲ್ಲ. ಆದರೆ, ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಇದು ಕೆಲವು ಜನರಲ್ಲಿ ಗ್ಯಾಸ್ಟ್ರಿಕ್‍ಗೆ ಕಾರಣವಾಗಬಹುದು.

    ಇದನ್ನೂ ಓದಿರಿ: ರೇಪ್​ ಕೇಸ್​ನಲ್ಲಿ ಬೇಲ್​ ಬೇಕೆ? ರಾಖಿ ಕಟ್ಟಿಸಿಕೋ ಎಂದಿದ್ದ ಹೈಕೋರ್ಟ್! ಗರಂ ಆದ ‘ಸುಪ್ರೀಂ’​

    ಈ ವಿಷಯವು ಸಲಹೆ ಸೇರಿದಂತೆ ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಬದಲಿಯಾಗಿಲ್ಲ. ಹೀಗಾಗಿ ಯಾವಾಗಲೂ ಹೆಚ್ಚಿನ ಮಾಹಿತಿಗಾಗಿ ತಜ್ಞರು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. (ಏಜೆನ್ಸೀಸ್​)

    ಅಂಡಾಶಯದಲ್ಲಿನ ನೀರುಗುಳ್ಳೆಗೂ, ಮಕ್ಕಳಾಗದೇ ಇರುವುದಕ್ಕೂ ಸಂಬಂಧವಿದೆಯೆ?

    ಆ ಭಾಗದಲ್ಲಿ ಕೆಟ್ಟ ವಾಸನೆಯಿಂದ ಮುಜುಗರಕ್ಕೆ ಸಿಲುಕಿದ್ದೇನೆ- ಪ್ಲೀಸ್ ಪರಿಹಾರ ಹೇಳಿ

    ವೀರ್ಯಾಣು ಉತ್ಪತ್ತಿಯೇ ಆಗುತ್ತಿಲ್ಲವೆಂದಾದರೆ ಈ ಕಾರಣಗಳೂ ಇರಬಹುದು… ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts