More

    ಬಾಬಿ ಡಿಯೋಲ್ ಪುತ್ರನ 20ನೇ ಜನ್ಮದಿನ; ಆಕರ್ಷಕ ರೂಪ ಮೆಚ್ಚಿದ ನೆಟ್ಟಿಗರು

    ಮುಂಬೈ : ಬಾಲಿವುಡ್ ನಟ ಬಾಬಿ ಡಿಯೋಲ್ ಪುತ್ರ ಆರ್ಯಮನ್ ಡಿಯೋಲ್​ಗೆ ಇಂದು 20ನೇ ವರ್ಷದ ಹುಟ್ಟಿದಹಬ್ಬದ ಸಡಗರ. ಈ ಸಂದರ್ಭದಲ್ಲಿ ತಮ್ಮ ಪುತ್ರನೊಂದಿಗಿನ ಫೋಟೋವನ್ನು ಬಾಬಿ ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರಕ್ಕೆ 13 ಗಂಟೆಗಳಲ್ಲಿ ಸುಮಾರು 1 ಲಕ್ಷ ಲೈಕುಗಳು ಲಭಿಸಿವೆ.

    ‘ಹ್ಯಾಪಿ ಬರ್ತ್​ಡೇ ಮೈ ಏಂಜಲ್​’ ಎಂದು ವಿಶ್​ ಮಾಡಿರುವ ಬಾಬಿ ಡಿಯೋಲ್​ ಅವರ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಹಲವಾರು ಸೆಲೆಬ್ರಿಟಿಗಳು ಆರ್ಯಮನ್​ಗೆ ಶುಭಾಶಯಗಳ ಮಳೆಗರೆದಿದ್ದಾರೆ. ಹಲವು ಅಭಿಮಾನಿಗಳೂ ಬರ್ತ್​ಡೇ ವಿಶ್​ ಮಾಡಿದ್ದು, ಆರ್ಯಮನ್​ ಆಕರ್ಷಕ ರೂಪ ಹೊಂದಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಕೆಲವರು ಆರ್ಯಮನ್ ತಮ್ಮ ತಾತ ಧರ್ಮೇಂದ್ರರಂತೆ ಕಾಣುತ್ತಾರೆ ಎಂದಿದ್ದಾರೆ. ‘ಧರಮ್​ ಪಾಜೀ ಯುವಕರಾಗಿದ್ದಾಗ ಇದ್ದ ಸುಂದರ ಮುಖ ಆರ್ಯಮನ್​ಗಿದೆ’ ಎಂದು ಹೊಗಳಾಡಿದ್ದಾರೆ.

     

    View this post on Instagram

     

    A post shared by Bobby Deol (@iambobbydeol)

    ಬಾಬಿ ಡಿಯೋಲ್​ ಮತ್ತು ತಾನ್ಯ ಡಿಯೋಲ್​ ಅವರಿಗೆ ಇಬ್ಬರು ಪುತ್ರರು – ಆರ್ಯಮನ್ ಮತ್ತು ಧರಮ್​​. ಕಳೆದ ಮೇನಲ್ಲಷ್ಟೆ ಬಾಬಿ ತಮ್ಮ ವಿವಾಹದ 25ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಚಲನಚಿತ್ರಗಳಲ್ಲದೆ, ವೆಬ್​ ಸೀರಿಸ್​ಗಳಲ್ಲೂ ಮಿಂಚುತ್ತಿರುವ ಬಾಬಿ ಡಿಯೋಲ್​ರ ‘ಆಶ್ರಮ್’​, ಇತ್ತೀಚೆಗೆ ಭಾರೀ ವೀಕ್ಷಣೆ ಪಡೆದಿತ್ತು. ಇದೀಗ ನೆಟ್​ಫ್ಲಿಕ್ಸ್​​ನ ‘ಪೆಂಟ್​ಹೌಸ್’​, ‘ಲವ್​ ಹಾಸ್ಟೆಲ್’ ಮತ್ತು ‘ಅನಿಮಲ್’​ ಎಂಬ ಸೀರಿಸ್​ಗಳಲ್ಲಿ ಅವರು ನಟಿಸುತ್ತಿದ್ದಾರೆ. (ಏಜೆನ್ಸೀಸ್)

    ಪುದುಚೇರಿ ವಿಧಾನಸಭಾ ಸ್ಪೀಕರ್ ಆಗಿ ಬಿಜೆಪಿ ಶಾಸಕ ಆರ್​.ಸೆಲ್ವಂ ಆಯ್ಕೆ

    ಕ್ರೆಡಿಟ್ ಕಾರ್ಡ್ ಹೆಸರಲ್ಲಿ ಜನರಿಗೆ ಟೋಪಿ! ನಕಲಿ ಕಾಲ್ ಸೆಂಟರ್ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts