More

    ಸತತ ವೈಫಲ್ಯದಿಂದ ಭಾರಿ ಟ್ರೋಲ್‌ಗೆ ಒಳಗಾದ ಪೃಥ್ವಿ ಷಾ

    ಬೆಂಗಳೂರು: ಐಪಿಎಲ್‌ನಲ್ಲಿ ನೀರಸ ನಿರ್ವಹಣೆ ತೋರಿದ ನಡುವೆಯೂ ಆಸ್ಟ್ರೇಲಿಯಾ ಪ್ರವಾಸದ ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಮುಂಬೈನ ಯುವ ಬ್ಯಾಟ್ಸ್‌ಮನ್ ಪೃಥ್ವಿ ಷಾ, ಎರಡು ಅಭ್ಯಾಸ ಪಂದ್ಯಗಳಲ್ಲೂ ನಿರಾಸೆ ಮೂಡಿಸಿದ್ದರು. ಇದರ ನಡುವೆಯೂ ಮೊದಲ ಟೆಸ್ಟ್ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗದಲ್ಲಿ ಅಚ್ಚರಿಯ ರೀತಿಯಲ್ಲಿ ಸ್ಥಾನ ಪಡೆದ ಪೃಥ್ವಿ ಷಾ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಕಂಡರು. ಇದರಿಂದಾಗಿ ಕ್ರಿಕೆಟ್ ಪ್ರೇಮಿಗಳಿಂದ ಭಾರಿ ಟೀಕೆಗೆ ಗುರಿಯಾಗಿರುವ ಪೃಥ್ವಿ ಷಾ, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಟ್ರೋಲ್‌ಗಳಿಗೂ ಆಹಾರವಾಗಿದ್ದಾರೆ.

    ಮೊದಲ ಇನಿಂಗ್ಸ್‌ನಲ್ಲಿ ಖಾತೆ ತೆರೆಯದೆ ಎರಡೇ ಎಸೆತಗಳಲ್ಲಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದ್ದ ಪೃಥ್ವಿ ಷಾ, 2ನೇ ಇನಿಂಗ್ಸ್‌ನಲ್ಲಿ ಖಾತೆ ತೆರೆಯುವಲ್ಲಿ ಸಫಲರಾದರೂ, 4 ಎಸೆತಗಳಲ್ಲಿ ಅಷ್ಟೇ ರನ್ ಗಳಿಸಿ ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಔಟಾದರು. ಎರಡೂ ಇನಿಂಗ್ಸ್‌ಗಳಲ್ಲಿ ಒಂದೇ ರೀತಿಯ ತಾಂತ್ರಿಕ ದೋಷವನ್ನು ತೋರಿ ಬೌಲ್ಡ್ ಆದ ಪೃಥ್ವಿ ಷಾ, ನೆಟ್ಟಿಗರಿಂದ ಕಟು ಟೀಕೆಗಳನ್ನು ಎದುರಿಸಿದ್ದಾರೆ.

    ಇದನ್ನೂ ಓದಿ: ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ ನ್ಯೂಜಿಲೆಂಡ್

    ಪೃಥ್ವಿ ಷಾ ಡ್ರೆಸ್ಸಿಂಗ್ ರೂಂಗೆ ಮರಳಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಅವರಿಂದ ಹೇಗೆಲ್ಲ ಒದೆ ತಿನ್ನಬಹುದು ಎಂಬ ತಮಾಷೆಯ ವಿಡಿಯೋ, ಚಿತ್ರಗಳನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ. ಇನ್ನು ಕೆಲವರು, ಪೃಥ್ವಿ ಷಾ ಅವರಲ್ಲಿ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಬ್ರಿಯಾನ್ ಲಾರಾ ಅವರ ಗುಣಗಳಿವೆ ಎಂದು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಹಿಂದೊಮ್ಮೆ ಹೇಳಿದ್ದನ್ನು ಉಲ್ಲೇಖಿಸಿ ತಮಾಷೆ ಮಾಡಿದ್ದಾರೆ.

    ಇನ್ನು ಕೆಲವರು ಪೃಥ್ವಿ ಷಾ ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸಕಾಲ ಎಂದು ಕಟು ಟೀಕೆ ಮಾಡಿದ್ದಾರೆ. ಪೃಥ್ವಿ ಷಾ ಅವರಿಗಿಂತ ನೈಟ್ ವಾಚ್‌ಮನ್ ಜಸ್‌ಪ್ರೀತ್ ಬುಮ್ರಾ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ ಎಂದು ಇನ್ನೂ ಕೆಲವರು ಕಾಲೆಳೆದಿದ್ದಾರೆ. ಪೃಥ್ವಿ ಷಾ 2ನೇ ಇನಿಂಗ್ಸ್​ನಲ್ಲಿ 96 ರನ್​ಗಳಿಂದ ಶತಕ ವಂಚಿತರಾದರು ಎಂದೂ ಕೆಲವರು ಅಪಹಾಸ್ಯ ಮಾಡಿದ್ದಾರೆ.

    ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts