More

    ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿದ ಭಾರತ

    ಅಡಿಲೇಡ್: ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ (55ಕ್ಕೆ 4), ಉಮೇಶ್ ಯಾದವ್ (40ಕ್ಕೆ 3) ಹಾಗೂ ಜಸ್‌ಪ್ರೀತ್ ಬುಮ್ರಾ (52ಕ್ಕೆ 2) ತ್ರಿಮೂರ್ತಿಗಳ ಮಾರಕ ದಾಳಿ ನೆರವಿನಿಂದ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿಯ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರು ಇನಿಂಗ್ಸ್ ಮುನ್ನಡೆ ಸಾಧಿಸಿದೆ. ದಿನದ ಆರಂಭದಲ್ಲೇ ಕುಸಿದ ಅನುಭವಿಸಿದರೂ ಆಸ್ಟ್ರೇಲಿಯಾಗೆ ತಿರುಗೇಟು ನೀಡಲು ಯಶಸ್ವಿಯಾಯಿತು. ಅಡಿಲೇಡ್ ಓವೆಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 6 ವಿಕೆಟ್‌ಗೆ 233 ರನ್‌ಗಳಿಂದ ದಿನದಾಟ ಆರಂಭಿಸಿದ ಭಾರತ ತಂಡ 244 ರನ್‌ಗಳಿಗೆ ಸರ್ವಪತನ ಕಂಡಿತು. ಮೊದಲ ದಿನದಾಟದ ಮೊತ್ತಕ್ಕೆ ಭಾರತ ಕೇವಲ 11 ರನ್ ಪೇರಿಸಿ 4 ವಿಕೆಟ್ ಕಳೆದುಕೊಂಡಿತು.

    ಇದನ್ನೂ ಓದಿ: ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ ನ್ಯೂಜಿಲೆಂಡ್

    ಬಳಿಕ ಆಸ್ಟ್ರೇಲಿಯಾ ತಂಡ, ನಾಯಕ ಟಿಮ್ ಪೇನ್ (73*ರನ್, 99 ಎಸೆತ, 10 ಬೌಂಡರಿ) ಏಕಾಂಗಿ ನಿರ್ವಹಣೆ ನಡುವೆಯೂ ಭಾರತದ ತ್ರಿಮೂರ್ತಿಗಳ ಮಾರಕ ದಾಳಿಗೆ ನಲುಗಿ 191 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 53 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 9ರನ್ ಪೇರಿಸಿದ್ದು, ಒಟ್ಟಾರೆ 62 ರನ್ ಮುನ್ನಡೆಯಲ್ಲಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ (5) ಹಾಗೂ ನೈಟ್‌ವಾಚ್ ಮ್ಯಾಚ್ ಜಸ್‌ಪ್ರೀತ್ ಬುಮ್ರಾ (0) ಕ್ರೀಸ್‌ನಲ್ಲಿದ್ದಾರೆ. ಮೊದಲ ಇನಿಂಗ್ಸ್ ಮಾದರಿಯಂತೆ ಪೃಥ್ವಿ ಷಾ (4) ನಿರಾಸೆ ಅನುಭವಿಸಿದರು.

    ಇದನ್ನೂ ಓದಿ: ಆಸ್ಟ್ರೇಲಿಯಾ ಎದುರು ದಾಖಲೆ ಬರೆದ ಭಾರತದ ಚೇತೇಶ್ವರ್ ಪೂಜಾರ..

    ಭಾರತ : 244 (ಆರ್.ಅಶ್ವಿನ್ 15, ಉಮೇಶ್ ಯಾದವ್ 6, ಬುಮ್ರಾ 4*, ಮಿಚೆಲ್ ಸ್ಟಾರ್ಕ್ 53ಕ್ಕೆ 4, ಪ್ಯಾಟ್ ಕಮ್ಮಿನ್ಸ್ 48ಕ್ಕೆ 3, ನಥಾನ್ ಲ್ಯಾನ್ 68ಕ್ಕೆ 1, ಜೋಸ್ ಹ್ಯಾಸಲ್‌ವುಡ್ 47ಕ್ಕೆ 1), ಮತ್ತು 1 ವಿಕೆಟ್‌ಗೆ (ಪೃಥ್ವಿ 4, ಮಯಾಂಕ್ ಅಗರ್ವಾಲ್ 5*, ಪ್ಯಾಟ್ ಕಮ್ಮಿನ್ಸ್ 6ಕ್ಕೆ 1). ಆಸ್ಟ್ರೇಲಿಯಾ: 72.1 ಓವರ್‌ಗಳಲ್ಲಿ 191 (ಪೇನ್ 73*, ಮಾರ್ನಸ್ ಲಬುಶೇನ್ 47, ಮಿಚೆಲ್ ಸ್ಟಾರ್ಖ್ 15, ನಥಾನ್ ಲ್ಯಾನ್ 10, ಆರ್.ಅಶ್ವಿನ್ 55ಕ್ಕೆ 4, ಉಮೇಶ್ ಯಾದವ್ 40ಕ್ಕೆ 3, ಜಸ್‌ಪ್ರೀತ್ ಬುಮ್ರಾ 52ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts