More

    ಆಸ್ಟ್ರೇಲಿಯಾ ಎದುರು ದಾಖಲೆ ಬರೆದ ಭಾರತದ ಚೇತೇಶ್ವರ್ ಪೂಜಾರ…!

    ಅಡಿಲೇಡ್: ಭಾರತದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾ ಎದುರು ದಾಖಲೆಯೊಂದನ್ನು ಬರೆದಿದ್ದಾರೆ. ಅಡಿಲೇಡ್ ಓವೆಲ್‌ನಲ್ಲಿ ಗುರುವಾರ ಆರಂಭಗೊಂಡ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಪೂಜಾರ 160 ಎಸೆತಗಳನ್ನು ಎದುರಿಸಿ 43 ರನ್ ಬಾರಿಸಿ ನಾಥನ್ ಲ್ಯಾನ್‌ಗೆ ವಿಕೆಟ್ ಒಪ್ಪಿಸಿದರು. ಆದರೂ ದಾಖಲೆಯೊಂದಿಗೆ ಪೆವಿಲಿಯನ್‌ಗೆ ವಾಪಸಾದರು. ಕಳೆದ 10 ವರ್ಷಗಳಲ್ಲಿ ಆಸ್ಟ್ರೇಲಿಯಾ ಎದುರು ಟೆಸ್ಟ್ ಕ್ರಿಕೆಟ್ ನಲ್ಲಿ ಅತಿಹೆಚ್ಚು ಎಸೆದ ಎದುರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಪೂಜಾರ ಇದುವರೆಗೂ ಆಡಿರುವ 28 ಇನಿಂಗ್ಸ್‌ಗಳಿಂದ 3609 ಎಸೆತಗಳನ್ನು ಎದುರಿಸಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್ ಹೆಸರಿನಲ್ಲಿದ್ದ ದಾಖಲೆಯನ್ನು ಪೂಜಾರ ಹಿಂದಿಕ್ಕಿದ್ದಾರೆ.

    ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಅಹರ್ನಿಶಿ ಟೆಸ್ಟ್ ಪಂದ್ಯ, ಸಾಧಾರಣ ಮೊತ್ತದತ್ತ ಭಾರತ, 

    ಆಸ್ಟ್ರೇಲಿಯಾದ ಎದುರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಎಸೆದ ಎದುರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪೂಜಾರ ಪಾತ್ರರಾಗಿದ್ದಾರೆ. ಜೋ ರೂಟ್ 28 ಇನಿಂಗ್ಸ್‌ಗಳಿಂದ 3607 ಎಸೆತ ಎದುರಿಸಿದರೆ, ವಿರಾಟ್ ಕೊಹ್ಲಿ 35 ಇನಿಂಗ್ಸ್‌ಗಳಿಂದ 3115 ಎಸೆತಗಳನ್ನು ಎದುರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ತಜ್ಞ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಪೂಜಾರ, ಇನಿಂಗ್ಸ್‌ನ 50ನೇ ಓವರ್‌ನಲ್ಲಿ ಲ್ಯಾನ್ ಎಸೆತದಲ್ಲಿ ಔಟಾದರು.

    ಇದನ್ನೂ ಓದಿ: ಒಡಿಶಾ ಎಫ್ ಸಿ ಎದುರು ಸುಲಭ ಜಯ ದಾಖಲಿಸಿದ ಬಿಎಫ್ ಸಿ

    ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಾಯಕ ವಿರಾಟ್ ಕೊಹ್ಲಿ (74ರನ್, 180 ಎಸೆತ, 8 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ನಡುವೆಯೂ ಭಾರತ ತಂಡ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗೆ 233 ರನ್ ಗಳಿಸಿದೆ. ಒಂದು ಹಂತದಲ್ಲಿ 3 ವಿಕೆಟ್‌ಗೆ 188 ರನ್‌ಗಳಿಸಿದ್ದ ಭಾರತ, ವಿರಾಟ್ ಕೊಹ್ಲಿ ರನೌಟ್ ಆದ ಬಳಿಕ ದಿಢೀರ್ ಕುಸಿತ ಕಂಡಿತು.

    ‘ಅಂಬಿ ನಿಂಗೆ ವಯಸ್ಸಾಯ್ತೋ’ ನಂತರ ಪ್ರಜ್ವಲ್​ ಜತೆಗೆ ಗುರುದತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts