More

    ತಂದೆ ದಾಖಲೆ ಸರಿಗಟ್ಟಿದ ನೆದರ್ಲೆಂಡ್‌ನ ಬಸ್ ಡಿ ಲೀಡೆ: ವಿಶ್ವಕಪ್‌ನಲ್ಲಿ 500ಕ್ಕೂ ಅಧಿಕ ಸಿಕ್ಸರ್ ದಾಖಲು

    ಪುಣೆ: ಅನುಭವಿ ಆಟಗಾರ ಬೆನ್ ಸ್ಟೋಕ್ಸ್ (108 ರನ್, 84 ಎಸೆತ, 6 ಬೌಂಡರಿ, 6 ಸಿಕ್ಸರ್) ಸಿಡಿಸಿದ ಏಕದಿನ ವಿಶ್ವಕಪ್‌ನ ಚೊಚ್ಚಲ ಶತಕದ ನೆರವಿನಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ತನ್ನ 8ನೇ ಲೀಗ್ ಪಂದ್ಯದಲ್ಲಿ
    ನೆದರ್ಲೆಂಡ್ ಎದುರು 160 ರನ್‌ಗಳಿಂದ ಸಮಾಧಾನಕರ ಗೆಲುವು ದಾಖಲಿಸಿದೆ. ಇದರೊಂದಿಗೆ ಜೋಸ್ ಬಟ್ಲರ್ ಬಳಗ ಸತತ 5 ಸೋಲಿನ ಸರಪಳಿ ಕಳಚಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಿಂದ 7ನೇ ಸ್ಥಾನಕ್ಕೇರಿದೆ. ಈ ಮೂಲಕ ಇಂಗ್ಲೆಂಡ್ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅರ್ಹತೆ ಆಸೆಯನ್ನು ಹೆಚ್ಚಿಸಿಕೊಂಡಿದೆ.
    ಎಂಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್, ಡೇವಿಡ್ ಮಲಾನ್ (87 ರನ್, 74 ಎಸೆತ, 10 ಬೌಂಡರಿ, 2 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ಹಾಗೂ ಬೆನ್ ಸ್ಟೋಕ್ಸ್-ಕ್ರಿಸ್ ವೋಕ್ಸ್ (51*) ಜತೆಯಾಟದ ಬಲದಿಂದ 9 ವಿಕೆಟ್‌ಗೆ 339 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಮೊಯಿನ್ ಅಲಿ (42ಕ್ಕೆ 3), ಆದಿಲ್ ರಶೀದ್ (54ಕ್ಕೆ3) ಸ್ಪಿನ್ ದಾಳಿಯ ಎದುರು ಪ್ರತಿರೋಧ ತೋರದ ನೆದರ್ಲೆಂಡ್ ತಂಡ 37.2 ಓವರ್‌ಗಳಲ್ಲಿ 179 ರನ್‌ಗಳಿಗೆ ಸರ್ವಪತ ಕಂಡಿತು. ಇದರೊಂದಿಗೆ ಡಚ್ಚರು ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದರು.
    ಇಂಗ್ಲೆಂಡ್: 9 ವಿಕೆಟ್‌ಗೆ 339 (ಬೇರ್‌ಸ್ಟೋ 15, ಮಲಾನ್ 87, ರೂಟ್ 28, ಸ್ಟೋಕ್ಸ್ 108, ವೋಕ್ಸ್ 51, ಡಿ ಲೀಡೆ 74ಕ್ಕೆ3, ಆರ್ಯನ್ 67ಕ್ಕೆ 2). ನೆದರ್ಲೆಂಡ್: 37.2 ಓವರ್‌ಗಳಲ್ಲಿ 179 (ವೆಸ್ಲಿ ಬರೆಸ್ಸಿ 37, ಎಂಗಲ್ ಬ್ರೇಕ್ಟ್ 33, ಎಡ್ವರ್ಡ್ಸ್ 38, ತೇಜ 41, ಮೊಯಿನ್ ಅಲಿ 42ಕ್ಕೆ 3, ರಶೀದ್ 54ಕ್ಕೆ3). ಪಂದ್ಯಶ್ರೇಷ್ಠ: ಬೆನ್ ಸ್ಟೋಕ್ಸ್.

    *32: ಹಾಲಿ ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ ಒಟ್ಟು 32 ಶತಕ ದಾಖಲಾಗಿದ್ದು, ಇದು ಟೂರ್ನಿ ಇತಿಹಾಸದಲ್ಲಿ 2ನೇ ಅತಿ ಹೆಚ್ಚು ಎನಿಸಿದೆ. 2015ರಲ್ಲಿ 38 ಶತಕ ದಾಖಲಾಗಿದ್ದವು. 2019ರಲ್ಲಿ 31 ಸೆಂಚುರಿ ಸಿಡಿದಿತ್ತು.

    *14: ಬಸ್ ಡಿ ಲೀಡೆ ನೆದರ್ಲೆಂಡ್ ಪರ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ತನ್ನ ತಂದೆ ಟಿಮ್ ಡಿ ಲೀಡೆ (14) ದಾಖಲೆಯನ್ನು ಸರಿಗಟ್ಟಿದರು.

    *500: ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಇದೇ ಮೊದಲ ಬಾರಿಗೆ 500ಕ್ಕೂ ಅಧಿಕ ಸಿಕ್ಸರ್‌ಗಳು ದಾಖಲಾದವು. 2015ರ ಆವೃತ್ತಿಯಲ್ಲಿ 463 ಸಿಕ್ಸರ್ ಸಿಡಿದಿದ್ದು ಹಿಂದಿನ ಗರಿಷ್ಠ.

    https://x.com/CricCrazyJohns/status/1722226754839052552?s=20
    https://x.com/CricCrazyJohns/status/1722226754839052552?s=20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts