More

    ಬೆಚ್ಚಿಬೀಳಿಸುವಂತಿದೆ ನೇಪಾಳಿ ಮೀನಾಕ್ಷಮ್ಮನವರ ಹಗಲು ದರೋಡೆ ಪ್ರಕರಣ.. 10 ಕೋಟಿ ರೂ. ಹೂಡಿಕೆಗೆ ಮಹಿಳೆಯರೇ ಟಾರ್ಗೆಟ್ !!

    ಡೆಹ್ರಾಡೂನ್:ನೇಪಾಳ ಮೂಲದ ನಾಲ್ವರು ಸಹೋದರಿಯರು ಸಣ್ಣ ಪ್ರಮಾಣದಲ್ಲಿ ನಿಶ್ಚಿತ ಠೇವಣಿ ಪಡೆದು, ಹೆಚ್ಚಿನ ಬಡ್ಡಿ ನೀಡುವ ಆಮಿಷ ಒಡ್ಡಿ ಅಂದಾಜು ಮೂರು ಸಾವಿರ ಮಹಿಳೆಯರಿಗೆ ವಂಚಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದ ಹಿನ್ನೆಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
    ನಾಲ್ವರು ಸಹೋದರಿಯರನ್ನು ಮೀನಾಕ್ಷಿ ಖಾರ್ತಿ, ಮೋನಾ, ಮಾಧುರಿ ಮತ್ತು ಮನೀಶಾ ಎಂದು ಗುರುತಿಸಲಾಗಿದೆ.
    ಈ ಆರೋಪಿಗಳು ಡೆಹ್ರಾಡೂನ್ ನಲ್ಲಿದ್ದು ಅಲ್ಲಿಂದಲೇ ಈ ದಂಧೆಯನ್ನು ನಡೆಸುತ್ತಿದ್ದು, ಅಂದಾಜು ಸುಮಾರು 3,000 ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದರು.

    ಇದನ್ನೂ ಓದಿ: ನಬಾರ್ಡ್​​ನಲ್ಲಿ ಸ್ಪೆಷಲಿಸ್ಟ್ ಕನ್ಸಲ್ಟೆಂಟ್ ಆಗುವ ಅವಕಾಶ.. ಯಾವ್ಯಾವ ಹುದ್ದೆಗಳಿವೆ ನೋಡಿ ?

    ತಮ್ಮ ಚೀಟಿ ದಂಧೆಯಲ್ಲಿ 10 ಕೋಟಿ ರೂ. ತೊಡಗಿಸಬೇಕೆಂದೂ, ಅದಕ್ಕೆ ತಾವು ಹೆಚ್ಚಿನ ಬಡ್ಡಿ ನೀಡುವುದಾಗಿಯು ಆಮಿಷವೊಡ್ಡಿ, ಹಣ ಪಡೆದು ವಂಚಿಸುತ್ತಿದ್ದರು.
    2019ರ ಜೂನ್‌ನಲ್ಲಿ ವಿದ್ಯಾ ಭಟ್ ಎಂಬಾಕೆ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮೀನಾಕ್ಷಿ ತನ್ನ ಹೆತ್ತವರು ಮತ್ತು ಸಹೋದರಿಯರ ಸಹಾಯದಿಂದ ಚೀಟಿ ವ್ಯವಹಾರ ನಡೆಸುತ್ತಿದ್ದಾಳೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
    ಈ ಆರೋಪಿಗಳ ಪೋಷಕರನ್ನು ಲಾಲ್ ಬಹದ್ದೂರ್ ಮತ್ತು ಸುನೀತಾ ಎಂದು ಗುರುತಿಸಲಾಗಿದೆ. ಆರೋಪಿಗಳು ತನ್ನಿಂದ 5 ಲಕ್ಷ ರೂ.ತೆಗೆದುಕೊಂಡಿದ್ದು, ಚೀಟಿ ವ್ಯವಹಾರ ಪೂರ್ಣಗೊಂಡ ನಂತರವೂ ಆ ಮೊತ್ತವನ್ನು ಪಾವತಿಸಿಲ್ಲ ಎಂದು ಭಟ್ ಹೇಳಿದ್ದು, ಆಕೆ ಅವರಿಗೆ ಈ ಕುರಿತು ಕೇಳಿದಾಗ, ಅವರು ಹಣ ನೀಡಲು ನಿರಾಕರಿಸಿದ್ದಾರೆ.

    ಇದನ್ನೂ ಓದಿ: ಮಕ್ಕಳೆದುರು ಬೆತ್ತಲಾಗಿದ್ದ ರೆಹನಾ ಪೊಲೀಸರೆದುರು ಶರಣು: ಕೊನೆಗೂ ಅಂದ್ಕೊಂಡಿದ್ದು ಆಗಲೇ ಇಲ್ಲ!

    ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆರೋಪಿಗಳು ಸುಮಾರು ಮೂರು ಸಾವಿರ ಮಹಿಳೆಯರನ್ನು ವಂಚಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳು ವಹಿವಾಟುಗಳನ್ನೆಲ್ಲ ಹೋಟೆಲ್‌ಗಳಲ್ಲಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ತಾಯಿಯನ್ನು ಬಂಧಿಸಲಾಗಿದ್ದು, ಕುಟುಂಬದ ಇತರ ಸದಸ್ಯರು ಪರಾರಿಯಾಗಿದ್ದರು. ಆದರೆ, ಸುಳಿವು ಸಿಕ್ಕ ನಂತರ ಪೊಲೀಸರು ಅವರೆಲ್ಲರನ್ನೂ ಬಂಧಿಸಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ, ಮಹಿಳೆಯರು ನೇಪಾಳ ಮೂಲದವರು ಮತ್ತು ಕಳೆದ ಒಂದು ವರ್ಷದಿಂದ ಭಾರತದಲ್ಲಿ ವಾಸವಾಗಿದ್ದರು.

    ಕೋವಿಡ್​ ಕೇರ್​ ಸೆಂಟರ್​ ಆಗಿರುವ ಹೋಟೆಲ್​ನಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ 10ಕ್ಕೇರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts