More

    ಶ್ರದ್ಧಾಭಕ್ತಿಯಿಂದ ಜರುಗಿದ ನೇಮೋತ್ಸವ

    • ಕೊಡಗು : ಸುಂಟಿಕೊಪ್ಪ ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ ಹಾಗೂ ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿಗನ 84 ನೇ ನೇಮೋತ್ಸವವು ಶನಿವಾರ ಮತ್ತು ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಶನಿವಾರ ಆಯುಧಾ ಪೂಜೆ, ಸಂಜೆ ನಿತ್ಯ ಪೂಜೆ ಮತ್ತು ಭಂಡಾರ ಹೊರಡುವುದರ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರೆಯಿತು.
    • ಸಂಜೆ 7 ಗಂಟೆಯ ನಂತರ ಮಂತ್ರವಾದಿ ಗುಳಿಗನ ನೇಮ ನಡೆದು ಭಕ್ತರಲ್ಲಿ ಭಯ ಭಕ್ತಿ ಮೂಡಿಸಿತು, ರಾತ್ರಿ ಆದಿನಾಗಬ್ರಹ್ಮ ಮೊಗೇರ ದೈವಗಳ ಆದಿಮಾಯೆ ತನ್ನಿ ಮಾನಿಗ ಗರಡಿ ಇಳಿಯಿತು.
    • ಭಾನುವಾರ ಮುಂಜಾನೆ ತಾವು ನಂಬಿದ ಕಾರಣಿಕ ದೈವಗಳಿಗೆ ಹರಕೆ ಮತ್ತು ಕಾಣಿಕೆ ಅರ್ಪಿಸಿ ಭಕ್ತಿ ಪರಾವಶರಾದರು. ಬೆಳಗ್ಗೆ 9 ಗಂಟೆಯ ನಂತರ ದೇವಾಲಯದ ಮತ್ತು ಭಕ್ತರು ಸೇರಿದಂತೆ ಮೂರು ಕೊರಗ ತನಿಯ ದೈವದ ಕಾರಣಿಕ ನೇಮೋತ್ಸವವು ನಡೆಯಿತು. ತಾನು ನಂಬಿದವರಿಗೆ ಇಂಬು ನೀಡುವೆ. ನನಗೆ ಮೋಸ ಮಾಡಿದರೆ ಕೆಲವೇ ದಿನದಲ್ಲಿ ತಪ್ಪಿನ ಮನವರಿಕೆ ಮಾಡಿಕೊಡುವೆ ಎಂದು ನುಡಿ ನೀಡಿದ ಕೊರಗಜ್ಜ, ತನ್ನ ಭಕ್ತರಲ್ಲಿ ತನ್ನ ಶಕ್ತಿ ಕಾರಣಿಕವನ್ನು ತೋರಿಸಿ ಭಯ ಉಂಟುಮಾಡಿತು. ನಂತರ ಗಂಧಪ್ರಸಾದ ವಿತರಿಸಲಾಯಿತು. ರಾತ್ರಿ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
    • ಸುಂಟಿಕೊಪ್ಪ, ಹರದೂರು, ಮಾದಾಪುರ, ಮಡಿಕೇರಿ, ಕುಶಾಲನಗರ, ಮೈಸೂರು, ಮಂಗಳೂರು, ಸೂಳ್ಯ, ಪುತ್ತೂರು, ಸಕಲೇಶಪುರ ಸೇರಿದಂತೆ ಬೇರೆ, ಬೇರೆ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts