More

    ಪ್ರೀತಿಯ ಮಗಳ ಅಕಾಲಿಕ ಸಾವು: ದೇವಸ್ಥಾನ ನಿರ್ಮಿಸಿ, ಮಗಳ ಮೂರ್ತಿಯನ್ನಿಟ್ಟು ನಿತ್ಯವೂ ಪೂಜಿಸುವ ತಂದೆ!

    ವಿಜಯವಾಡ: ಮಗಳ ಮೇಲೆ ಅಪಾರ ಪ್ರೀತಿ ಇಟ್ಟಿದ್ದ ತಂದೆಯೊಬ್ಬ ವಿಧಿಯ ಆಟದಲ್ಲಿ ಮಗಳನ್ನು ಕಳೆದುಕೊಂಡ ಬಳಿಕ ಆಕೆಯನ್ನು ಮರೆಯಲಾಗದೇ ಮಗಳ ಮೂರ್ತಿಯನ್ನು ಸ್ಥಾಪಿಸಿ, ದೇವಸ್ಥಾನವನ್ನು ನಿರ್ಮಿಸಿ ನಿತ್ಯವು ಪೂಜೆ ಮಾಡಿಕೊಂಡು ಬರುತ್ತಿರುವ ಅಪರೂಪದ ಹಾಗೂ ಮನ ಮುಟ್ಟುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ವೆಂಕಟಾಚಲಂ ಮಂಡಲದ ಕಾಕೂಟೂರಿನ ಚೆಂಚಯ್ಯ ಮತ್ತು ಲಕ್ಷ್ಮಮ್ಮ ದಂಪತಿಗೆ ಐವರು ಮಕ್ಕಳು. ಅದರಲ್ಲಿ ನಾಲ್ಕನೇ ಮಗಳ ಹೆಸರು ಸುಬ್ಬಲಕ್ಷ್ಮಮ್ಮ. ಈಕೆ ಹುಟ್ಟಿದ ಮೇಲೆ ಕುಟುಂಬ ಆರ್ಥಿಕವಾಗಿಯೂ ಸದೃಢವಾಯಿತು. ಹೀಗಾಗಿ ಆಕೆಯ ಮೇಲೆ ಪಾಲಕರಿಗೆ ತುಸು ಪ್ರೀತಿ ಹೆಚ್ಚಿಗೆ ಇತ್ತು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅಲ್ಲದೆ, ಮಗಳಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಿದಾಗ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು. ಆದರೆ, ಆ ಸಂತೋಷ ಹೆಚ್ಚು ದಿನ ಇರಲಿಲ್ಲ. 2011ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸುಬ್ಬಲಕ್ಷ್ಮಮ್ಮ ಪ್ರಾಣ ಕಳೆದುಕೊಂಡಿದ್ದಳು. ಆಕೆಯ ಸಾವಿನಿಂದಾಗಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು.

    ಒಂದು ದಿನ ತಂದೆ ಚೆಂಚಯ್ಯಯ ಕನಸಿನಲ್ಲಿ ಮಗಳು ಸುಬ್ಬಲಕ್ಷ್ಮಮ್ಮ ಕಾಣಿಸಿಕೊಂಡಳಂತೆ. ಆಕೆಯ ಬಯಕೆಯಂತೆ ದೇವಸ್ಥಾನ ಕಟ್ಟಿದ್ದಾಗಿ ಚೆಂಚಯ್ಯ ಹೇಳಿದ್ದಾನೆ. ಮಗಳ ಮೂರ್ತಿಯನ್ನು ಸ್ಥಾಪಿಸಿ, ಪೂಜೆ ಮಾಡಿಕೊಂಡು ಬರುತ್ತಿದ್ದಾನೆ. ಅಲ್ಲದೆ, ಪ್ರತಿ ವರ್ಷ ಮಗಳ ಹೆಸರಿನಲ್ಲಿ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದಾನೆ. ಮಗಳಿಗಾಗಿ ದೇವಸ್ಥಾನ ನಿರ್ಮಿಸಿದ ಚೆಂಚಯ್ಯನನ್ನು ಎಲ್ಲರು ಶ್ಲಾಘಿಸುತ್ತಿದ್ದಾರೆ.

    ಇನ್ನೊಂದೆಡೆ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಮತ್ತೊಬ್ಬ ತಂದೆ ಕೂಡ ದೇವಸ್ಥಾನ ಕಟ್ಟಿಸಿದ್ದಾರೆ. ಭೀಮಾವರಂ ಮಂಡಲದ ರಾಯಲಂನ ಒಡಪತಿ ರವಿತೇಜ ಅವರ ಪುತ್ರಿ ಪ್ರಸನ್ನದೇವಿ ಮೃತಪಟ್ಟಿದ್ದಾರೆ. ಕೆಲವು ತಿಂಗಳುಗಳ ಕಾಲ ನರಳುತ್ತಾ, ಚೇತರಿಸಿಕೊಂಡ ನಂತರ ಮನೆಯಲ್ಲಿ ಮಗಳಿಗೆ ದೇವಸ್ಥಾನವನ್ನು ಸ್ಥಾಪಿಸಿದರು. ಅವಳನ್ನು ಪ್ರತಿದಿನ ಪೂಜಿಸಲಾಗುತ್ತದೆ. ಇದು ಅಲ್ಲಿಗೆ ನಿಲ್ಲದೆ ಆಕೆಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಟ್ರಸ್ಟ್‌ನಿಂದ ಅನೇಕರಿಗೆ ಸಹಾಯ ಮಾಡಲಾಗುತ್ತಿದೆ. (ಏಜೆನ್ಸೀಸ್​)

    ಪ್ರೀತಿಯ ಮಗಳ ಅಕಾಲಿಕ ಸಾವು: ದೇವಸ್ಥಾನ ನಿರ್ಮಿಸಿ, ಮಗಳ ಮೂರ್ತಿಯನ್ನಿಟ್ಟು ನಿತ್ಯವೂ ಪೂಜಿಸುವ ತಂದೆ!

    ದಿಢೀರ್​ ಶ್ರೀಮಂತನಾಗಲು ಅಡ್ಡದಾರಿ ಹಿಡಿದ ನಿವೃತ್ತ ಕಾನ್ಸ್​ಟೇಬಲ್​ ಪುತ್ರ: ಮಹಿಳೆಯ ಮೊಬೈಲ್​ ಪಡೆದು ನೀಚ ಕೃತ್ಯ

    ಹಬ್ಬದ ಮೆರವಣಿಗೆಯತ್ತ ನುಗ್ಗಿದ ಟ್ರಕ್​: ಮಕ್ಕಳು ಸೇರಿದಂತೆ 12 ಮಂದಿ ದುರ್ಮರಣ, ಪ್ರಧಾನಿ ಮೋದಿ ಸಂತಾಪ

    ಇಷ್ಟು ವರ್ಷಗಳಲ್ಲಿ ಇಂಥ ಪಾತ್ರವನ್ನೇ ಮಾಡಿರಲಿಲ್ಲವಂತೆ ಗಣೇಶ್​ … ಯಾವುದು ಆ ಪಾತ್ರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts