More

    ದಿಢೀರ್​ ಶ್ರೀಮಂತನಾಗಲು ಅಡ್ಡದಾರಿ ಹಿಡಿದ ನಿವೃತ್ತ ಕಾನ್ಸ್​ಟೇಬಲ್​ ಪುತ್ರ: ಮಹಿಳೆಯ ಮೊಬೈಲ್​ ಪಡೆದು ನೀಚ ಕೃತ್ಯ

    ಥಾಣೆ: ಪೊಲೀಸ್ ವೇಷದಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ನಕಲಿ ಪೊಲೀಸ್​ ಕಾನ್ಸ್​ಟೇಬಲ್​ನನ್ನ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಾಲ್ವಾ ಪೊಲೀಸರು ಶನಿವಾರ (ನ.19) ಬಂಧಿಸಿದ್ದಾರೆ.

    ಹಿರಿಯ ಪೊಲೀಸ್​ ಅಧಿಕಾರಿಯ ಪ್ರಕಾರ, ಆರೋಪಿ ರಾಮದಾಸ್​ ಜಗ್ತಾಪ್​ ಪೊಲೀಸ್​ ಆಗಲು ಬಯಸಿದ್ದ. ಆದರೆ, ಪರೀಕ್ಷೆಯಲ್ಲಿ ಕಳಪೆ ಸಾಧನೆ ಹಿನ್ನೆಲೆಯಲ್ಲಿ ಆತನ ಆಸೆ ಕೈಗೂಡಲಿಲ್ಲ. ಇದಾದ ಬಳಿಕ ಆತ ನಕಲಿ ಪೊಲೀಸ್​ ಡ್ರೆಸ್​ ಖರೀದಿ ಮಾಡಿದ್ದಲ್ಲದೆ, ನಕಲಿ ಗುರುತಿನ ಚೀತಿಯನ್ನೂ ಪಡೆದ ರಾಮದಾಸ್​, ತನ್ನನ್ನು ತಾನು ಪೊಲೀಸ್​ ಕಾನ್ಸ್​ಟೇಬಲ್​ ಎಂದು ಹೇಳಿಕೊಂಡು ಅನೇಕರಿಗೆ ವಂಚನೆ ಮಾಡುತ್ತಿದ್ದ.

    ಆರೋಪಿ ರಾಮದಾಸ್​ ತಂದೆ ನಿವೃತ್ತ ಕಾನ್ಸ್​ಟೇಬಲ್​ ಆಗಿದ್ದು, ಮಗನ ಕೃತ್ಯ ಗೊತ್ತಾದ ಬಳಿಕ ಆತನಿಗೆ ಬುದ್ಧಿ ಹೇಳಿದ್ದರು. ಆದರೂ ರಾಮದಾಸ್​ ತನ್ನ ಕೃತ್ಯವನ್ನು ಮುಂದುವರಿಸಿದ್ದ. ಇದು ಸರಿ ಹೋಗಲ್ಲ ಅಂತಾ ಆತನ ತಂದೆ ಕಾಲ್ವಾ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಆರೋಪಿ ರಾಮದಾಸ್​, ಕಾರು ಮಾಲೀಕರನ್ನು ತಡೆದ ಸಂಚಾರ ನಿಯಮ ಉಲ್ಲಂಘಟನೆ ಮಾಡಿದ್ದೀರಿ ಎಂದು ಹೇಳಿ ಹಣ ಸುಲಿಗೆ ಮಾಡುತ್ತಿದ್ದ. ಇಷ್ಟೇ ಅಲ್ಲದೆ, ನಕಲಿ ಐಡೆಂಟಿಟಿ ಕಾರ್ಡ್​ ತೋರಿಸಿ ಮಹಿಳೆಯೊಬ್ಬಳನ್ನು ಪ್ರೀತಿಯ ಬಲೆಯಲ್ಲಿ ಕೆಡವಿಕೊಂಡಿದ್ದ. ಯಾವಾಗ ಈತನ ನಿಜ ರೂಪ ತಿಳಿಯಿತೋ ಆತನಿಂದ ದೂರಾವಾಗಿದ್ದಾಳೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಕಾಲ್ವಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮನೋಹರ್ ಅವ್ಹಾದ್ ಮಾತನಾಡಿ, ನವೆಂಬರ್ 13 ರಂದು ಭಾರತಿ ಎಂಬುವವರಿಂದ ನಾವು ದೂರು ಸ್ವೀಕರಿಸಿದೆವು. ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ರಾಮದಾಸ್​ ಅವರನ್ನು ನಿಲ್ಲಿಸಿದ್ದರು. ಈ ವೇಳೆ ಆತ ಪೊಲೀಸ್ ಸಮವಸ್ತ್ರ ಧರಿಸಿದ್ದ. ತನ್ನ ಫೋನ್‌ನಲ್ಲಿ ಕೆಲವು ಮೆಸೇಜ್​ಗಳನ್ನು ಡಿಲೀಟ್​ ಮಾಡುವ ನೆಪದಲ್ಲಿ ಎಕ್ಸೋಡಸ್ ಬಿಟ್‌ಕಾಯಿನ್ ಅಪ್ಲಿಕೇಶನ್ ತೆರೆದ ರಾಮದಾಸ್​, ದೂರುದಾರೆಯ 7,669 ಡಾಲರ್​ ಅನ್ನು ತನ್ನ ಸ್ವಂತ ಖಾತೆಗೆ ವರ್ಗಾಯಿಸಿಕೊಂಡಿದ್ದ. ಈ ಬಗ್ಗೆ ದೂರುದಾರರಿಗೆ ಅರಿವಾದಾಗ ಅವರು ಅಪರಿಚಿತ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

    ದೂರು ದಾಖಲಾದ ಬಳಿಕ ಪೊಲೀಸ್ ಅಧಿಕಾರಿಗಳು ನಕಲಿ ಪೊಲೀಸ್ ಅಧಿಕಾರಿಯನ್ನು ಹುಡುಕಲು ಪ್ರಾರಂಭಿಸಿದರು. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ನಾವು ಅಪರಾಧದ ಸಮಯದಲ್ಲಿ ರಾಮದಾಸ್​ ಬಳಸಿದ್ದ ದಟ್ಸನ್ ಕಾರಿನ ಸಂಖ್ಯೆಯನ್ನು ನಾವು ಕಂಡುಕೊಂಡೆವು. ಇದಾದ ಬಳಿಕ ರಾಮದಾಸ್​ನನ್ನು ಕಲ್ವಾದ ಮನೀಶಾ ನಗರದಲ್ಲಿ ಪತ್ತೆ ಹಚ್ಚಿ ಬಂಧಿಸಲಾಯಿತು. ಜನರನ್ನು ವಂಚಿಸಲು ಮತ್ತು ತ್ವರಿತವಾಗಿ ಹಣ ಸಂಪಾದಿಸಲು ಅವರು ಪೋಲೀಸ್‌ನಂತೆ ನಟಿಸಿರುವುದನ್ನು ಒಪ್ಪಿಕೊಂಡರು ಎಂದು ಮನೋಹರ್ ಅವ್ಹಾದ್ ಹೇಳಿದರು. (ಏಜೆನ್ಸೀಸ್​)

    ದಿಢೀರ್​ ಶ್ರೀಮಂತನಾಗಲು ಅಡ್ಡದಾರಿ ಹಿಡಿದ ನಿವೃತ್ತ ಕಾನ್ಸ್​ಟೇಬಲ್​ ಪುತ್ರ: ಮಹಿಳೆಯ ಮೊಬೈಲ್​ ಪಡೆದು ನೀಚ ಕೃತ್ಯ

    ಹಬ್ಬದ ಮೆರವಣಿಗೆಯತ್ತ ನುಗ್ಗಿದ ಟ್ರಕ್​: ಮಕ್ಕಳು ಸೇರಿದಂತೆ 12 ಮಂದಿ ದುರ್ಮರಣ, ಪ್ರಧಾನಿ ಮೋದಿ ಸಂತಾಪ

    ಹಣದ ವಿಚಾರವಾಗಿ ಬೆದರಿಕೆ ಹಾಕಿ ಕೆಟ್ಟದಾಗಿ ನಿಂದನೆ: ಹಾಸ್ಯ ಕಲಾವಿದೆ ನಯನಾ ವಿರುದ್ಧ ದೂರು ದಾಖಲು

    ಶಾಸಕರಿಗೇ ಹೊಡೆದು ಬಟ್ಟೆ ಹರಿದು ಹಾಕಿದ ಜನರು; ಕತ್ತಲಲ್ಲಿ ಹರಿದ ಅಂಗಿಯಲ್ಲೇ ಪರಿಸ್ಥಿತಿ ವಿವರಿಸಿದ ಕುಮಾರಸ್ವಾಮಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts