More

    ನೇಕಾರರಿಗೆ ಗುರುತಿನ ಚೀಟಿ ನೀಡಲು ಪಟ್ಟು

    ಕುದೂರು: ಕುದೂರು ಗ್ರಾಮದ ನೇಕಾರರಿಗೆ ಗುರುತಿನ ಚೀಟಿ ಸಿಗದೆ ಅನ್ಯಾಯವಾಗಿದ್ದು, ರಾಮನಗರ ಜವಳಿ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕೆಂದು ಒತ್ತಾಯಿಸಿ ಕುದೂರು ನೇಕಾರ ಸಹಕಾರ ಸಂಘದಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು.

    ಗ್ರಾಮದ ನೇಕಾರ ಮುಖಂಡ ಕೆ.ಎಲ್.ವೆಂಕಟೇಶ್ ಮಾತನಾಡಿ, ಕುದೂರಿನಲ್ಲಿ ಒಂದೂವರೆ ಸಾವಿರ ನೇಕಾರರಿದ್ದು, ಚೀಟಿ ಇಲ್ಲದೆ 30 ವರ್ಷಗಳಿಂದ ಸರ್ಕಾರದ ಸೌಲಭ್ಯ ಪಡೆಯದೆ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಕುದೂರಿನ ನೇಕಾರ ಗೋವಿಂದ ಮಾತನಾಡಿ, ಕರೊನಾ ಬರುವುದಕ್ಕೂ ಮುನ್ನ ರಾಮನಗರ ಜವಳಿ ಇಲಾಖೆಗೆ ತೆರಳಿ ಮನೆಗೆ ಮಗ್ಗ ಹಾಕಲು ಸಾಲ ಸೌಲಭ್ಯಕ್ಕೆ ಅರ್ಜಿ ಹಾಕಲು ತೆರಳಿದ್ದಾಗ ಇಲಾಖೆಯವರು ಸಂಘದಿಂದ ಅರ್ಜಿ ಕಳುಸಿ ನೀವು ನೇರವಾಗಿ ಇಲಾಖೆಗೆ ಬರಬೇಡಿ ಎಂದು ವಾಪಸ್ ಕಳುಸುತ್ತಾರೆ ಎಂದು ಅಳಲು ತೋಡಿಕೊಂಡರು.
    ಸತ್ತವರು ಇಲ್ಲಿ ಸದಸ್ಯರೇ: ಕುದೂರು ಕೈಮಗ್ಗ ನೇಕಾರ ಸಹಕಾರ ಸಂಘದಲ್ಲಿ ಸತ್ತಿರುವ ಸದಸ್ಯರಿಗೆ ಸಂಘದಲ್ಲಿ ಜೀವವಿದೆ. ಆದರೆ ಬದುಕಿರುವ ನೇಕಾರರಿಗೆ ಇಲ್ಲಿಯವರೆಗೂ ಸದಸ್ಯತ್ವ ನೀಡಿಲ್ಲ. ಕಾರಣ ಕೇಳಿದರೆ ಎಲ್ಲದಕ್ಕೂ ರಾಮನಗರ ಜವಳಿ ಇಲಾಖೆಯತ್ತ ತೋರಿಸಿ ಗ್ರಾಮದ ನೇಕಾರರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಕುದೂರು ಗ್ರಾಮದ ನೇಕಾರರಾದ ಕೆ.ಎಂ.ಗವಿರಂಗಸ್ವಾಮಿ, ರಾಮಚಂದ್ರ, ಸತೀಶ್, ಚಂದ್ರಶೇಖರ್, ಕೆ.ಡಿ.ನಾಗರಾಜು, ಗಂಗಾಧರ, ಹನುಮಂತರಾಜು, ಕೆ.ಯು.ಸೋಮಶೇಖರ್, ಗೋಪಿ, ವೇಣುಗೋಪಾಲ್, ಆನಂದ್ ಮತ್ತಿತರಿದ್ದರು.

    ಗುರುತಿನ ಚೀಟಿ ಬಗ್ಗೆ ರಾಮನಗರ ಜವಳಿ ಇಲಾಖೆ ಅಧಿಕರಿಗಳ ಬಳಿ ಪ್ರಸ್ತಾಪಿಸಿದ್ದೇನೆ, ಸತ್ತಿರುವ ನೇಕಾರರ ಸದಸ್ಯತ್ವ ಕುದೂರು ಕೈಮಗ್ಗ ನೇಕಾರ ಸಹಕಾರ ಸಂಘದಲ್ಲಿರುವುದು ನಿಜ.
    ಮೋಹನ್‌ಕುಮಾರ್, ಕಾರ್ಯದರ್ಶಿ, ಕೈಮಗ್ಗ ನೇಕಾರ ಸಹಕಾರ ಸಂಘ ಕುದೂರು

    ಮುಖ್ಯಮಂತ್ರಿಗಳ ನೇಕಾರರ ಸಮ್ಮಾನ್ ನಿಧಿ 2000 ಹಣ ನೀಡುವುದಾಗಿ ಘೋಷಣೆ ಮಾಡಿರುವ ಆದೇಶ ಪತ್ರ ಇಲಾಖೆಗೆ ಈವರೆಗೆ ತಲುಪಿಲ್ಲ. ರಾಮನಗರ ಜವಳಿ ಇಲಾಖೆ ಅಧಿಕಾರಿಗಳು ಕುದೂರಿನ ನೇಕಾರರ ಮನೆಗೆ ತೆರಳಿ ಗುರುತಿನ ಚೀಟಿ ಬಗ್ಗೆ ಇಲಾಖೆಯಿಂದಲೇ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ.
    ಕೆ.ಶಶಿಧರ್, ಜವಳಿ ಇಲಾಖೆ ಸಹಾಯಕ ನಿರ್ದೇಶಕರು, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts