More

    ಮುಟ್ಟಾಳೆ ತೊಟ್ಟು ನೇಜಿ ನೆಟ್ಟ ರಕ್ಷಿತ್ ಶೆಟ್ಟಿ

    ಬ್ರಹ್ಮಾವರ: ಉಡುಪಿ ಕ್ಷೇತ್ರದಲ್ಲಿ ಶಾಸಕ ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಸಾಥ್ ನೀಡಿದ್ದಾರೆ.

    ಅಲೆವೂರು ಮೂಲದ ರಕ್ಷಿತ್ ಭಾನುವಾರ ವಾರಂಬಳ್ಳಿ ಬಿರ್ತಿ ಹೇಮಾ ಶೆಡ್ತಿ ಅವರ ಮನೆ ಬಳಿಯಲ್ಲಿ ಗದ್ದೆಗೆ ಹಾಲು ಸಮರ್ಪಿಸಿ ಗದ್ದೆಗೆ ಇಳಿದು ಯಂತ್ರಕ್ಕೆ ನೇಜಿ ನೀಡುವ ಮೂಲಕ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು. ಬಿಳಿ ಧೋತಿ, ಶಾಲು ಧರಿಸಿ ತಲೆಗೆ ಮುಟ್ಟಾಳೆ ಇಟ್ಟು ಗದ್ದೆಗಿಳಿದು ನೇಜಿ ನೆಟ್ಟರು.
    ಬಾಲ್ಯದಲ್ಲಿ ತಾನು ಡ್ರೈವಿಂಗ್ ಕಲಿತದ್ದು ನಮ್ಮ ಮನೆಯಲ್ಲಿ ಕೃಷಿಯ ನಾಟಿ ಯಂತ್ರದ ಮೂಲಕ. ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಶಾಸಕ ರಘುಪತಿ ಭಟ್ ಅವರ ಆಲೋಚನೆ ಯುವ ಜನತೆಗೆ, ಪರವೂರಿನಲ್ಲಿರುವ ಜನರಿಗೆ ಉತ್ತೇಜನ ನೀಡಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದರು.

    ಶಾಸಕ ರಘುಪತಿ ಭಟ್ ಮಾತನಾಡಿ, ರಕ್ಷಿತ್ ಶೆಟ್ಟಿ ನಮ್ಮ ಸಾವಯವ ಕೃಷಿಯ ಬ್ರಾಂಡ್ ಅಂಬಾಸಿಡರ್ ಆಗಬೇಕು ಎಂದು ವಿನಂತಿಸಿದರು. ಕೃಷಿ ಆಂದೋಲನಕ್ಕೆ ಸಹಕರಿಸಿದ ಸಂಘ-ಸಂಸ್ಥೆಯವರಿಗೆ, ಭೂ ಮಾಲೀಕರಿಗೆ, ಸ್ಥಳೀಯರಿಗೆ ಶಾಸಕರು ಅಭಿನಂದನೆ ಸಲ್ಲಿಸಿ ಗೌರವಿಸಿದರು.
    ವಾರಂಬಳ್ಳಿ ಗ್ರಾಪಂ ಅಧ್ಯಕ್ಷೆ ಗುಲಾಬಿ, ನಾನಾ ಗಣ್ಯರಾದ ರಾಜಾ ವಿಜಯ್ ಕುಮಾರ್, ಎಚ್. ಎಸ್. ಶೆಟ್ಟಿ, ರಾಘವ್ ಎಂ. ಶೆಟ್ಟಿ, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಬಿ. ಧನಂಜಯ್, ಹಿರಿಯ ಕ್ಷೇತ್ರಾಧಿಕಾರಿಗಳಾದ ಶಂಕರ್, ಬಿರ್ತಿ ರಾಜೇಶ್ ಶೆಟ್ಟಿ, ಭುಜಂಗ ಶೆಟ್ಟಿ, ಸದಾನಂದ ಪೂಜಾರಿ ಕೇದಾರೋತ್ಥಾನ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts