More

    ನೆರೆ ನಿರ್ವಹಣೆಗೆ ಫ್ಲಡ್ ವಾರಿಯರ್ಸ್ ಸಿದ್ಧ

    ಬೆಳಗಾವಿ: ಕಳೆದ ವರ್ಷ ನೆರೆಯಿಂದ ಸಂಭವಿಸಿದ್ದ ಸಾವು-ನೋವಿನಿಂದ ತತ್ತರಿಸಿದ್ದ ರಾಜ್ಯದಲ್ಲೀಗ ಮತ್ತೆ ಮಳೆ ಅಬ್ಬರ ಶುರುವಾಗಿದೆ. ವರುಣನ ಅಬ್ಬರಕ್ಕೆ ಅಂದು ಲಕ್ಷಾಂತರ ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದವು. ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಫ್ಲಡ್ ವಾರಿಯರ್ಸ್‌ ಹುಟ್ಟುಹಾಕುತ್ತಿದೆ.

    ಹೌದು, ಕಳೆದ ಬಾರಿ ವಾಡಿಕೆಗಿಂತ ಶೇ.279 ರಷ್ಟು ಮಳೆ ಹೆಚ್ಚಾಗಿ 87 ಜನ ಮೃತಪಟ್ಟರೆ, 2,067 ಜಾನುವಾರುಗಳ ಜೀವಹಾನಿ ಸಂಭವಿಸಿ, ರಾಜ್ಯದ 103 ತಾಲೂಕುಗಳಲ್ಲಿ ನೆರೆಯಿಂದಾಗಿ 32 ಸಾವಿರ ಕೋಟಿ ರೂ.ಗೂ ಅಧಿಕ ಹಾನಿಯಾಗಿತ್ತು. ಈ ವರ್ಷ ಸಹ ಅಧಿಕ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿಂದ ರಾಜ್ಯಾದ್ಯಂತ ನೆರೆ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆಂದೇ ರಾಜ್ಯದ ನಾಲ್ಕು ವಿಭಾಗಗಳಲ್ಲಿ ನೆರೆ ಯೋಧರನ್ನು ಸಜ್ಜುಗೊಳಿಸಲು
    ಎನ್‌ಡಿಆರ್‌ಎಫ್ ಕೈ ಜೋಡಿಸಿದೆ.

    ಬೆಂಗಳೂರು, ಮಂಗಳೂರು, ಬೆಳಗಾವಿ ಮತ್ತು ಕಲಬುರ್ಗಿಗಗಳಲ್ಲಿ ಎಸ್‌ಡಿಆರ್‌ಎಫ್ ಹಾಗೂ ಆಗ್ನಿಶಾಮಕ ದಳದ ಸಹಯೋಗದಲ್ಲಿ ಸಿವಿಲ್ ಡಿಫೆನ್ಸ್, ಹೋಂ ಗಾರ್ಡ್ಸ್, ಡಿಆರ್ ಪೊಲೀಸ್ ವಿಭಾಗದ ಆಯ್ದ 120 ಸಿಬ್ಬಂದಿಗೆ ಜೂ.8 ರಿಂದ 12ರ ವರೆಗೆ 5 ದಿನಗಳ ರಕ್ಷಣಾ ಕಾರ್ಯಾಚರಣೆ ತರಬೇತಿ ನೀಡಲಾಗುತ್ತಿದೆ.
    ರಿಸ್ಕ್‌ನಲ್ಲೂ ರೆಸ್ಕೂೃ ತರಬೇತಿ: ಯಾವುದೇ ತರಬೇತಿ ಇಲ್ಲದೆಯೂ ಕಳೆದ ವರ್ಷ ರಾಜ್ಯ ಪೊಲೀಸ್ ಸಿಬ್ಬಂದಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಸಂತ್ರಸ್ತರ ರಕ್ಷಣೆ ಮಾಡಿ ಸೈ ಎನಿಸಿಕೊಂಡಿದ್ದರು. ಪೊಲೀಸ್ ಇಲಾಖೆಯ ಇನ್ನಿತರ ಸಿಬ್ಬಂದಿಗೂ ತರಬೇತಿ ನೀಡಿ ವ್ಯವಸ್ಥಿತವಾಗಿ ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲು ಕೋಟೆ ಕೆರೆಯಲ್ಲಿ ರೆಸ್ಕೂೃ ತರಬೇತಿ ನೀಡಲಾಗುತ್ತಿದೆ.

    ಗಾಳಿ-ಮಳೆ ನಡುವೆಯೂ ನೀರಿನ ರಭಸದಲ್ಲಿ ಧೈರ್ಯವಾಗಿ ಬೋಟ್ ಚಲಾಯಿಸುವುದು, ನೀರಿನಲ್ಲಿದ್ದವರನ್ನು ಕಾಪಾಡುವುದು, ಸೇಫ್ಟಿ ಜಾಕೆಟ್ ಧರಿಸಿ ಎಚ್ಚರಿಕೆಯಿಂದ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದು. ಸಂಭಾವ್ಯ ಅವಘಡಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜತೆಗೆ ಸಂತ್ರಸ್ತರನ್ನು ರಕ್ಷಿಸುವುದು. ನೀರಿನಲ್ಲಿ ಹಗ್ಗದ ಸಹಾಯದಿಂದಲೂ ರಕ್ಷಣೆ ಮಾಡುವ ತಂತ್ರ ಮತ್ತು ಕೌಶಲವನ್ನು ಈ ತರಬೇತಿಯಲ್ಲಿ ಕಲಿಸಿಕೊಡಲಾಗುತ್ತದೆ. ಎನ್‌ಡಿಆರ್‌ಎಫ್‌ನ 7ಜನ ಸಿಬ್ಬಂದಿ ತರಬೇತಿ ನೀಡುತ್ತಿದ್ದಾರೆ ಎನ್ನುತ್ತಾರೆ ಎನ್‌ಡಿಆರ್‌ಎಫ್ ಸಿಬ್ಬಂದಿ.

    ರಾಜ್ಯದ 5 ವಿಭಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ತರಬೇತಿ ನೀಡಲಾಗುತ್ತಿದೆ. 5 ದಿನಗಳ ನಂತರ ತರಬೇತಿ ಪಡೆದ ಸಿಬ್ಬಂದಿಯನ್ನು ಅವರ ಮೂಲ ಕಾರ್ಯ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಅವರನ್ನು ಪ್ರವಾಹ ಸಂದರ್ಭದಲ್ಲಿ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುವುದು.
    ಶಿವಕುಮಾರಸ್ವಾಮಿ ಎಚ್.ಎಂ.
    |ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಬೆಳಗಾವಿ

    | ರವಿ ಗೋಸಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts