More

    ನೀರು, ಪೋಷಕಾಂಶಗಳ ನಿರ್ವಹಣೆಯಿಂದ ಉತ್ತಮ ಇಳುವರಿ

    ಚಿಕ್ಕಮಗಳೂರು: ಉತ್ತಮ ನೀರು ಮತ್ತು ಪೋಷಕಾಂಶಗಳ ನಿರ್ವಹಣೆಯಿಂದ ತೆಂಗು ಮತ್ತು ಅಡಕೆ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯಲು ಸಾಧ್ಯ ಎಂದು ತೋಟಗಾರಿಕಾ ವಿಷಯ ತಜ್ಞರಾದ ಸಿ.ಎಸ್.ರವಿ ತಿಳಿಸಿದರು.

    ಸಖರಾಯಪಟ್ಟಣ ಸಮೀಪದ ಕೇತುಮಾರನಹಳ್ಳಿ ಗ್ರಾಮದಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆಯ ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕಾ ಕಾರ್ಯಾನುಭವ ಶಿಬಿರದಡಿ ಆಯೋಜಿಸಲಾಗಿದ್ದ ತೆಂಗು ಮತ್ತು ಅಡಕೆ ಬೆಳೆಯ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತಮ ನೀರು, ಪೋಷಕಾಂಶ, ರೋಗ ಮತ್ತು ಕೀಟಗಳ ನಿರ್ವಹಣೆಯ ಮೂಲಕ ಹೇಗೆ ಪರಿಹಾರಗಳನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
    ಅಡಕೆ ಮತ್ತು ತೆಂಗು ತೋಟದಲ್ಲಿ ಅಲಸಂದೆ, ಹುರುಳಿ, ಸೆಣಬು ಡಯಾಂಚಾದAಥ ಹಸಿರು ಎಲೆ ಗೊಬ್ಬರಗಳನ್ನು ಬೆಳೆದರೆ ಕಳೆಗಳ ನಿರ್ವಹಣೆ ಮಾಡುವುದರ ಜೊತೆಗೆ ತೋಟಕ್ಕೆ ಬೇಕಾಗುವ ನೀರಿನ ಪ್ರಮಾಣವನ್ನು ತಗ್ಗಿಸಬಹುದು ಹಾಗೂ ಕೀಟಗಳ ಬಾಧೆಯನ್ನು ತಡೆಗಟ್ಟಬಹುದು ಎಂದು ಮಾಹಿತಿ ನೀಡಿದರು.
    ಅಡಕೆ ತೋಟದಲ್ಲಿ ಮಿಶ್ರ ಬೆಳೆಯನ್ನಾಗಿ ಬಾಳೆಯನ್ನು ಬೆಳೆದರೆ ಕಳೆ ನಿರ್ವಹಣೆಯ ಜೊತೆಗೆ ಹೆಚ್ಚುವರಿ ಆದಾಯವನ್ನು ಗಳಿಸಬಹುದು ಹಾಗೂ ಉಳುಮೆ ಮಾಡುವುದರಿಂದ ಕೀಟ ಹಾಗೂ ರೋಗಗಳ ಬಾಧೆ ತಡೆಗಟ್ಟಬಹುದು ಎಂದರು .
    ತೋಟದಲ್ಲಿ ಬಸಿ ಕಾಲುವೆಗಳನ್ನು ಮಾಡಬೇಕು. ಅಡಕೆಗೆ ಹಿಡಿ ಮುಂಡಿಗೆ ರೋಗದ ಬಾಧೆ ಹೆಚ್ಚಾಗುತ್ತದೆ. ಹೆಚ್ಚು ರಂಜಕವನ್ನು ಬಳಸುವುದರಿಂದಲೂ, ಅತಿ ಹೆಚ್ಚು ಕೆರೆಗೋಡು ಹಾಕಿಸುವುದರಿಂದಲೂ ಹಿಡಿಮುಂಡಿ ರೋಗ ಬರುವ ಸಾಧ್ಯತೆಯಿರುತ್ತದೆ. ಇವೆಲ್ಲವುಗಳ ನಿರ್ವಹಣೆಗೆ ಅಡಕೆಗೆ ಬೇಕಾದ ಲಘು ಪೋಷಕಾಂಶಗಳಾದ ಜಿಂಕ್ ಬೋರಾನ್ ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಬೇಕು ಎಂದು ಹೇಳಿದರು.
    ಅಡಕೆ ಸಿಪ್ಪೆಯನ್ನು ನೇರವಾಗಿ ಉಪಯೋಗಿಸುವುದರ ಬದಲು ಗೊಬ್ಬರವನ್ನಾಗಿ ಮಾಡಿ ತೋಟಕ್ಕೆ ಹಾಕುವುದರಿಂದ ಭೂಮಿಗೆ ಹೆಚ್ಚು ಪೋಷಕಾಂಶಗಳನ್ನು ಸೇರಿಸಬಹುದು ಎಂದು ರೈತರಿಗೆ ಮಾಹಿತಿ ನೀಡಿದರು.
    ಕಾರ್ಯಕ್ರಮದಲ್ಲಿ ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸಹನಾ , ಗೌತಮಿ , ಚೈತ್ರಾ ಪ್ರದ್ಯುಮ್ನ, ಉಜ್ಜಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts