More

    ಕಾಶ್ಮೀರದ ದಯನೀಯ ಸ್ಥಿತಿಗೆ ನೆಹರು, ಗಾಂಧಿ ಕಾರಣಕರ್ತರು

    ಬೆಂಗಳೂರು: ಕಾಶ್ಮೀರದ ಇಂದಿನ ದುಸ್ಥಿತಿಗೆ ದೇಶದ ಪ್ರಥಮ ಪ್ರಧಾನಿ ನೆಹರು ಅವರು ಆಡಳಿತ ನಡೆಸಿದ ರೀತಿ ಎಷ್ಟು ಕಾರಣವೋ, ನೆಹರು ಕುರಿತು ವ್ಯಾಮೋಹ ಹೊಂದಿದ್ದ ಗಾಂಧಿಯವರತ್ತಲೂ ಬೊಟ್ಟು ಮಾಡಬೇಕಾಗುತ್ತದೆ ಎಂದು ಹಿರಿಯ ಸಾಹಿತಿ ಡಾ.ಎಸ್. ಎಲ್. ಭೈರಪ್ಪ ಹೇಳಿದ್ದಾರೆ.

    ಕಾಶ್ಮೀರಿ ಪಂಡಿತರ ಕುರಿತು ಹೇಮಂತ್ ಶಾಂತಿಗ್ರಾಮ ಅನುವಾದಿಸಿರುವ ‘ಕಶೀರ’ ಕಾದಂಬರಿಯ ಇಂಗ್ಲಿಷ್ ಆವೃತ್ತಿಯ (ಮೂಲ: ಸಹನಾ ವಿಜಯಕುಮಾರ್) ಬಿಡುಗಡೆ

    ಕಾರ್ಯಕ್ರಮದಲ್ಲಿ ಮಾತನಾಡಿ ದರು. ಧೈರ್ಯದಲ್ಲಿ ನೆಹರು ಅವರನ್ನು ಯಾರೂ ಹಿಂದಿಕ್ಕಲು ಸಾಧ್ಯವಿಲ್ಲ ಎಂದು 1927ರಲ್ಲಿ ಗಾಂಧಿ ಹೇಳಿದ್ದರು. ಪಟೇಲರ ಬದಲಿಗೆ ನೆಹರು ಅವರನ್ನು ಪ್ರಧಾನಿಯಾಗಿಸಲು ನಿರ್ಧರಿಸಿದರು. ನೆಹರುಗೆ ಸ್ವಂತ ಆಲೋಚನೆಗಳು ಇರಲಿಲ್ಲ. ಅವರು ಕಾಶ್ಮಿರ ವಿಚಾರವನ್ನು ಜಾಗತಿಕ ಮಟ್ಟಕ್ಕೆ ಒಯ್ಯಲು ಮೌಂಟ್ ಬ್ಯಾಟನ್​ನಿಂದ ಪ್ರೇರಣೆಗೊಂಡರು. ಮೌಂಟ್ ಬ್ಯಾಟನ್ ಹೆಂಡತಿ ನೀಡಿದ ಸಲಹೆಯನ್ನು ಪುರಸ್ಕರಿಸುತ್ತಿದ್ದ ನೆಹರು, ಆಚಾರ್ಯ ಕೃಪಲಾನಿ, ರಾಜೇಂದ್ರಪ್ರಸಾದ್, ರಾಜಾಜಿ, ಸರ್ದಾರ್ ಪಟೇಲ್​ರಂಥವರ ಅಭಿಪ್ರಾಯಕ್ಕೆ ಮನ್ನಣೆ ನೀಡಲಿಲ್ಲ. ಕಾಶ್ಮೀರದ ಇಂದಿನ ಎಲ್ಲ ಪರಿಸ್ಥಿತಿಗೆ ಪರೋಕ್ಷವಾಗಿ ನೆಹರು ಕಾರಣ. ಹಾಗೆಯೇ ಬಹುತ್ವದ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ನೆಹರು ಅವರನ್ನು ನೇಮಕ ಮಾಡಿದ ಗಾಂಧಿಯವರದ್ದು ತಪ್ಪಿಲ್ಲವೆ ಎಂಬುದನ್ನೂ ಆಲೋಚಿಸಬೇಕು ಎಂದರು.

    ಸಹನಾ ಶ್ರೀನಗರ ಹಾಗೂ ಜಮ್ಮುವಿನಲ್ಲಿ ಪ್ರವಾಸ ಮಾಡಿ ಅಲ್ಲಿನ ನೈಜ ಕಥಾನಕಗಳನ್ನು ಸಂಗ್ರಹಿಸಿದ್ದಾರೆ. ಅವರು ಆ ಸ್ಥಳಗಳಲ್ಲಿ ಸಂಚರಿಸುತ್ತೇನೆ ಎಂದಾಗ ನನಗೆ ಆತಂಕ ಇತ್ತು. ಆದರೆ ಧೈರ್ಯದಿಂದ ಆ ಸ್ಥಳಗಳಿಗೆ ತೆರಳಿ ಅಧ್ಯಯನ ನಡೆಸಿ ನೈಜ ಚಿತ್ರಣವನ್ನು ರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗರುಡ ಪ್ರಕಾಶನದ ಸಂಕ್ರಾಂತ್ ಸಾನು ಉಪಸ್ಥಿತರಿದ್ದರು.

    ಕಾಶ್ಮೀರದಲ್ಲಿ ಅತ್ಯಂತ ಹೀನಾಯವಾಗಿ ನಡೆದ ಹತ್ಯಾಕಾಂಡಗಳು, ಕಾಶ್ಮೀರಿ ಪಂಡಿತರ ಸಂಕಷ್ಟವನ್ನು ಹೇಳಲಾಗದು. ಇಂತಹ ಸ್ಥಿತಿಯನ್ನು ಕಣ್ಣಾರೆ ಕಂಡು ದಾಖಲಿಸಿರುವ ಸಹನಾ ಮೆಚ್ಚುಗೆಗೆ ಅರ್ಹರು. ಇಂದು ಕಾಶ್ಮೀರದಲ್ಲಿ ಆಗಿದ್ದು ನಾಳೆ ಇತರೆಡೆಯಲ್ಲೂ ಆಗುತ್ತದೆ. ಪಕ್ಕದ ರಾಜ್ಯಗಳಲ್ಲೇ ನೂರಾರು ವರ್ಷಗಳ ದೇವಸ್ಥಾನ, ಮೂರ್ತಿಗಳು ಧ್ವಂಸವಾಗುತ್ತಿವೆ. ಆದರೆ ಏನೂ ಮಾಡಲಾಗುತ್ತಿಲ್ಲ. ಸಮಾಜದಲ್ಲಿರುವ ಕ್ಷಾತ್ರ ಗುಣ ಪ್ರಕಟವಾಗಬೇಕು.
    | ಹೇಮಂತ್ ಶಾಂತಿಗ್ರಾಮ ‘ಕಾಶೀರ’ ಕೃತಿಯ ಇಂಗ್ಲಿಷ್ ಅನುವಾದಕ

    ದೇಶ ಸಾಂಸ್ಕೃತಿಕವಾಗಿ ಐಕ್ಯವಾಗಿದೆ

    ಈ ದೇಶ 1947ರಲ್ಲಿ ಆಗಿದ್ದಲ್ಲ. ಉತ್ತರ ಭಾರತ, ದಕ್ಷಿಣ ಭಾರತ ಎಂಬ ಭೇದ ಸರಿಯಲ್ಲ. ಮಧುರೈನ ಒಬ್ಬ ವ್ಯಕ್ತಿಯ ಕಾರಣಕ್ಕೆ ಇಂದು ಕಾಶ್ಮೀರದ ಅಭಿನವಗುಪ್ತರ ಚಿತ್ರ ರಚಿಸಲು ಸಾಧ್ಯವಾಗಿದೆ. ಗೋವನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮಾತೆ ಎಂದು ಪೂಜಿಸುತ್ತಾರೆ. ಇಡೀ ದೇಶ ಸಾಂಸ್ಕೃತಿಕವಾಗಿ ಐಕ್ಯವಾಗಿದೆ ಎಂದು ಗ್ಲೋಬಲ್ ಕಾಶ್ಮೀರಿ ಪಂಡಿತ್ ಡಯಾಸ್ಪೊರಾ ದಕ್ಷಿಣ ಭಾರತ ಸಮನ್ವಯಕಾರ ದಿಲೀಪ್ ಕಚರೂ ಅಭಿಪ್ರಾಯಪಟ್ಟರು.

    ಎಲ್ಲ ಮಾಹಿತಿಗಳಿವೆ…

    ನಮ್ಮ ಯಾವುದೇ ಇತಿಹಾಸದ ಪುಸ್ತಕಗಳಲ್ಲಿ ಸರ್ವಜ್ಞ ಪೀಠದ ಬಗ್ಗೆಗಾಗಲಿ, ಕಾಶ್ಮೀರದ ಬಗೆಗಾಗಲಿ ಉಲ್ಲೇಖವಿಲ್ಲ. ಇದ್ದರೂ ಕೇವಲ ಭೌಗೋಳಿಕ ಉಲ್ಲೇಖ ಗಳಿಗೆ ಸೀಮಿತವಾಗುತ್ತದೆ. ಈ ಕುರಿತು ವಿವಿಧೆಡೆ ಸಂಶೋಧನೆ, ಸ್ಥಳಗಳಿಗೆ ಭೇಟಿ ನೀಡಿದಾಗ ಈ ಎಲ್ಲವನ್ನೂ ದಾಖಲಿಸಬೇಕು ಎನ್ನಿಸಿತು. ಅದನ್ನು ಕಾದಂಬರಿ ರೀತಿಯಲ್ಲಿ ಪ್ರಸ್ತುತಪಡಿಸಲಾಯಿತು. ಕಾದಂಬರಿಯಾದರೂ ಮಾಹಿತಿ ತಪ್ಪದಂತೆ ಕಾಳಜಿ ವಹಿಸಲಾಗಿದೆ. ಪುಸ್ತಕದಲ್ಲಿ ಸೂಚಿಸಿರುವ ಅಂಶಗಳನ್ನು ಗಮನಿಸಿದ ಅನೇಕ ಓದುಗರು ಅದಕ್ಕೆ ಮೂಲ ಯಾವುದು ಎಂಬ ಕುತೂಹಲ ತೋರಿದರು. ನಂತರದ ಮುದ್ರಣದಲ್ಲಿ ಮೂಲಗಳ ಉಲ್ಲೇಖವನ್ನು ಪ್ರಕಟಿಸಿದಾಗ ಅನೇಕರು ಮೂಲ ಕೃತಿಗಳನ್ನು ಓದುವ ಆಸಕ್ತಿ ತೋರಿರುವುದು ಜನರಲ್ಲಿ ಈ ಕುರಿತು ಇರುವ ಕುತೂಹಲವನ್ನು ತೋರಿಸುತ್ತದೆ ಎಂದು ಲೇಖಕಿ ಸಹನಾ ವಿಜಯಕುಮಾರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts