More

    ನೇಹಾ ಕೊಲೆ ಪ್ರಕರಣ, ಆರೋಪಿ ಪ್ರತಿಕೃತಿ ದಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಗದಗ
    ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ವಿರೋಧಿಸಿ ಗದಗ ಹಳೆ ಡಿಸಿ ಆಫೀಸ್​ ವೃತ್ತದಲ್ಲಿ ವಿವಿಧ ಸಂಟನೆಗಳಿಂದ ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಯಿತು. ಮಾನವ ಸರಪಳಿ ನಿಮಿರ್ಸಿ 1 ಗಂಟೆಗೂ ಅಧಿಕ ಕಾಲ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಹಾಗೂ ಕಾನೂನು ಸುವ್ಯವಸ್ಥೆ ವಿರುದ್ಧ ಘೋಷಣೆ ಕೂಗಲಾಯಿತು. ಆರೋಪಿ ಯಾಜ್​ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಮಹಿಳೆಯರಿಗೆ ರಕ್ಷಣೆ ಇಲ್ಲ, ಸರ್ಕಾರಕ್ಕೆ ದಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ನೇಹಾ ಕೊಲೆ ಪ್ರಕರಣ, ಆರೋಪಿ ಪ್ರತಿಕೃತಿ ದಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ


    ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ವಿವಿಧ ಶಾಲಾ ವಿದ್ಯಾಥಿರ್, ವಿದ್ಯಾಥಿರ್ನಿಯರು, ವಿವಿಧ ಸಂಟನೆಗಳು, ನಗರಸಭೆ ಸದಸ್ಯರು, ವಿವಿಧ ಸಮುದಾಯದ ಮುಕಂಡರು ಭಾಗವಹಿಸಿದ್ದರು. 1 ಗಂಟೆಗೂ ಹೆಚ್ಚು ಕಾಲದ ನಡೆದ ಪ್ರತಿಬಟನೆಯಲ್ಲಿ “ಹಂತಕ ಯಾಜ್​ ನನ್ನ ಗಲ್ಲಿಗೇರಿಸಬೇಕು, ಮಹಿಳೆಯರಿಗೆ ಆಂತರಿಕ ಭದ್ರತೆ ಕೊಡಿ, ಜಿಹಾದಿ ಮನಸ್ಥಿ ನಾಶವಾಗಲಿ, ಗ್ಯಾರಂಟಿ ಬೇಕಾ, ರಕ್ಷಣೆ ಬೇಕಾ ಎಂಬ ಘೋಷಣೆಗಳು ಮೊಳಗಿದವು. ಪ್ರತಿಭಟನೆಯುದ್ಧಕ್ಕೂ ಆರೋಪಿಗೆ ಗಲ್ಲು ಶಿೆ ನೀಡಿ ನ್ಯಾಯ ದೊರಕಿಸಿಕೊಡಿ ಎಂಬ ೂಷವ್ಯಾಕ್ಯ ಮೊಳಗಿದವು. ಆರೋಪಿ ಯಾಜ್​ ಪ್ರತಿಕೃತಿ ದಹಿಸುವ ವೇಳೆ ಪೊಲೀಸ ಮತ್ತು ಪ್ರತಿಭಟನಾಕಾರರ ನಡುವೆ ಮಾತಿ ಚಕಮಕಿಯೂ ನಡೆಯಿತು.
    ಈ ವೇಳೆ ಮಾತನಾಡಿದ ವಿಧಾನಪರಿಷತ್​ ಸದಸ್ಯ ಎಸ್​.ವಿ. ಸಂಕನೂರು, ನೇಹಾ ಕೊಲೆಯನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು. ಜಾತ್ಯಾತಿತವಾಗಿ ಎಲ್ಲರೂ ಪ್ರತಿಭಟಿಸಬೇಕು. ತುಷ್ಟೀಕರಣ ಮನೋಭಾವದಿಂದ ಕಾಂಗ್ರೆಸ್​ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ಅಷ್ಟೇ ಅಲ್ಲದೇ, ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಹ ಪ್ರಕರಣಗಳು ಅಮಾನವೀಯ. ಕಾಂಗ್ರೆಸ್​ ಸರ್ಕಾರ ತಲೆ ತಗ್ಗಿಸಬೇಕು. ಯಾವುದೇ ಸಮಾಜದ ಹೆಣ್ಣುಮಕ್ಕಳಿಗೂ ಈ ರೀತಿ ಅನ್ಯಾಯವಾಗಬಾರದು. ಮಹಿಳಾ ಸಂರಕ್ಷಣೆ ರಾಜ್ಯದ ಕಾನೂನು ಬಿಗಿಯಾಗಬೇಕು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದರು.
    ನಗರಸಭೆ ಅಧ್ಯೆ ಉಷಾ ದಾಸರ ಮಾತನಾಡಿ, ವಿವಿಧ ಸಮುದಾಯಗಳನ್ನು ಒಂದುಗೂಡಿಸಿ ಮುಂಬರುವ ದಿನಮಾನದಲ್ಲಿ ಯಾರಿಗೂ ಅನ್ಯಾಯ ಆಗದಂತೆ ಮಕ್ಕಳಿಗೆ ಸಂಸ್ಕಾರ ಸಂಸತಿ ನೀಡಬೇಕಾಗಿದೆ. ಸುಸಂಕೃತತು ಒಂದಾಗದಿದ್ದರೆ ಈ ಅನ್ಯಾಯ ನಿರಂತರವಾಗಲಿದೆ. ನೇಹಾ ಕೊಲೆ ಪ್ರಕರಣವನ್ನು ಕೇವಲ ಒಂದು ಜಾತಿಗೆ, ಧರ್ಮಕ್ಕೆ ಸೀಮಿತಗೊಳಿಸಬಾರದು. ಜಾತ್ಯಾತಿತ, ಪಕ್ಷಾತಿತವಾಗಿ ಹೆಣ್ಣುಮಕ್ಕಳು, ಮಹಿಳೆಯರು ಒಂದಾಗಿ ರಾಜ್ಯದಲ್ಲಿ ಲೋಪಗೊಂಡಿರುವ ಕಾನೂನು ಸುವ್ಯವಸ್ಥೆ ವಿರುದ್ಧ ಹೋರಾಟ ನಡೆಸುವ ಅನಿವಾರ್ಯತೆ ಸೃಷ್ಟಿ ಆಗಿದೆ. ನೇಹಾ ಕೊಲೆ ಅಮಾನುಷವಾಗಿದ್ದು. ಹೆಣ್ಣು ಹೆತ್ತ ಪ್ರತಿ ಹೆಣ್ಣಿಗೂ ಮಗಳು ಇನ್ನಿಲ್ಲದಂತಾದ ದುಃಖ ಅನುಭವಕ್ಕೆ ಬಾರದೇ ಇರಲಾರದು. ಇಂತಹ ನೋವು ಯಾವ ಪೋಷಕರಿಗೂ ಬರಬಾರದು. ನೇಹಾ ಪೋಷಕರಿಗೆ ನಾವು ಸಾಂತ್ವನ ಹೇಳಬಹುದೇ ವಿನಹ ಮಗಳನ್ನು ಮರಳಿ ತಂದುಕೊಡಲು ಸಾಧ್ಯವಿಲ್ಲ.. ಹಾಗಾಗಿ ಮಹಿಳಾ ರಕ್ಷಣೆಗಾಗಿ ಇಂದು ಮಹಿಳೆಯೇ ಧ್ವನಿ ಎತ್ತಬೇಕು. ಧ್ವನಿ ಗೂಡಿಸಬೇಕು ಎಂದರು.
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್​ ಅಬ್ಬಿಗೇರಿ ಮಾತನಾಡಿ, ಕಾನೂನು ಸಚಿವ ಎಚ್​.ಕೆ. ಪಾಟೀಲರು ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು. ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಆರೋಪಿಗೆ ಗಲ್ಲು ಶಿೆ ವಿಧಿಸುವಂತೆ ಮನವಿ ಸಲ್ಲಿಸಲಾಯಿತು.
    ಪ್ರತಿಭಟನೆಯಲ್ಲಿ ರಾಜು ಕುರಡಗಿ, ಮಂಜುನಾಥ ಮುಳಗುಂದ, ಶಶಿಧರ ದಿಂಡೂರು, ಅನಿತಾ ಗಡ್ಡಿ, ರಾವೇಂದ್ರ ಯಳವತ್ತಿ, ವಿದ್ಯಾಥಿರ್ ಸಂಟನೆಗಳು ಭಾಗವಹಿಸಿದ್ದವು.

    ಬಾಕ್ಸ್​:
    ಒಂದು ಗಂಟೆಗೂ ಅಧಿಕ ಕಾಲ ಪ್ರತಿಭಟನ ಜರುಗಿದ್ದರಿಂದ ಟ್ರಾಫಿಕ್​ ಸಮಸ್ಯೆ ಉಲ್ಬಣಿಸಿತು. ಬೆಟಗೇರಿಯಿಂದ ಹೊಸ ಬಸ್​ ನಿಲ್ದಾಣಕ್ಕೆ ಮತ್ತು ಹುಬ್ಬಳ್ಳೀಗೆ ಹೋಗುವ ವಾಹನಗಳಿಗೆ ತಿರುವು ನಿಡಲಾಯಿತು. ಅದೇ ರಿತಿ ಹೊಸ ಬಸ್​ ನಿಲ್ದಾಣದಿಂಧ ಹಲೇ ಬಸ್​ ನಿಲ್ದಾಣಕ್ಕೆ ಸಾಗುವ ವಾಹನಗಳನ್ನು ಸಂಚರಿಸಿದಂತೆ ನಿರ್ಬಂಧಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts