More

    ಕೋವಿಡ್ ಸೋಂಕಿತನನ್ನು ಮನೆಗೆ ಕಳಿಸಿದ್ರು, ನೆಗೆಟಿವ್​ ಇರೋ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಿಕೊಂಡ್ರು!

    ಬೆಂಗಳೂರು: ಅದ್ಹೇಕೋ ಏನೋ ವಿಕ್ಟೋರಿಯಾ ಆಸ್ಪತ್ರೆಗೂ ವಿವಾದಕ್ಕೂ ಬಿಟ್ಟುಬಿಡದ ನಂಟು ಇರಬೇಕು. ಪತ್ರಿನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಅವಾಂತರ ಸೃಷ್ಟಿಸಿಕೊಳ್ಳುತ್ತಿರುವ ಈ ಆಸ್ಪತ್ರೆಯಲ್ಲಿ ಮತ್ತೊಂದು ಮಹಾಯಡವಟ್ಟು ಸಂಭವಿಸಿದೆ.

    ನಿರ್ಲಕ್ಷ್ಯದ ಪರಮಾವಧಿ ಅಂದ್ರೆ ಇದೇ ಇರಬೇಕು. ಕರೊನಾ ಸೋಂಕಿದ್ದರೂ ರೋಗಿಯನ್ನು ನಿನ್ನೆ(ಬುಧವಾರ) ಡಿಸ್ಚಾರ್ಜ್​ ಮಾಡಿ ಕಳುಹಿಸಿದ್ದಾರೆ. ಸೋಂಕಿಲ್ಲದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ. ಯಾರದ್ದೋ ವರದಿಯನ್ನು ಇನ್ನ್ಯಾರಿಗೋ ಕೊಟ್ಟರೆ ಹೀಗೆ ಹಾಗೋದು. ಆಸ್ಪತ್ರೆ ಸಿಬ್ಬಂದಿಯ ಈ ಬೇಜವಾಬ್ದಾರಿತನಕ್ಕೆ ಇನ್ನೆಷ್ಟು ಸಾವು-ನೋವು ಸಂಭವಿಸಲಿದೆಯೋ ಆ ದೇವರೇ ಬಲ್ಲ. ಅಷ್ಟಕ್ಕೂ ಈ ಅವಾಂತರ ಹೇಗಾಯ್ತು ಗೊತ್ತಾ?

    ಇದನ್ನೂ ಓದಿರಿ ಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ

    ಕರೊನಾ ಪರೀಕ್ಷೆಗೆ ಒಳಪಟ್ಟ ಇಬ್ಬರ ಹೆಸರೂ ಒಂದೇ ಇತ್ತು. ಈ ಪೈಕಿ ಒಬ್ಬರಿಗೆ ಸೋಂಕು ಇರುವುದು ವರದಿಯಲ್ಲಿ ದೃಢಪಟ್ಟಿತ್ತು. ಇನ್ನೊಬ್ಬನ ವರದಿ ನೆಗೆಟಿವ್​ ಬಂದಿತ್ತು. ಈ ವೇಳೆ ಗೊಂದಲ ಮಾಡಿಕೊಂಡ ಸಿಬ್ಬಂದಿ, ಕರೊನಾ ಇರುವ 40 ವರ್ಷದ ವ್ಯಕ್ತಿಯನ್ನು ಸೋಂಕಿಲ್ಲ ಎಂದು ನಿನ್ನೆ ಸಂಜೆಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ. ಇನ್ನು ಸೋಂಕು ಇಲ್ಲದ ವ್ಯಕ್ತಿಯನ್ನು ಕರೊನಾ ಇದೆ ಎಂದು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ.

    ಆಸ್ಪತ್ರೆಯಿಂದ ಹೊರ ಬಂದ ಸೋಂಕಿತನು ನಿನ್ನೆ ಸಂಜೆಯಿಂದ ಮಿನರ್ವ ಸರ್ಕಲ್​ ಬಳಿಯೇ ಇದ್ದ. ಆಸ್ಪತ್ರೆ ಸಿಬ್ಬಂದಿಯ ಯಡವಟ್ಟಿನಿಂದಾಗಿ ಸೋಂಕಿತ ಮತ್ತು ಸೋಂಕಿಲ್ಲದ ವ್ಯಕ್ತಿಗಳಿಬ್ಬರೂ ನರಳುವಂತಾಗಿದೆ. ಇನ್ನು ಸೋಂಕಿತ ಹೊರ ಬಂದಿದ್ದರಿಂದ ಸ್ಥಳೀಯರಲ್ಲೂ ಆತಂಕ ಹೆಚ್ಚಾಗಿದೆ.

    ಇದನ್ನೂ ಓದಿರಿ VIDEO: ಇವರೆಂಥಾ ತಲೆಕೆಟ್ಟ ಮಂದಿ…! ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯ ನೋಡಿದರೆ ಭಯವಾಗದೆ ಇರದು

    ನಿನ್ನೆ(ಬುಧವಾರ) ಬೆಳಗ್ಗೆ 11.30 ಸುಮಾರಿನಲ್ಲಿ ಸೋಂಕಿತನೊಬ್ಬ ವಿಕ್ಟೋರಿಯಾ ಆಸ್ಪತ್ರೆಯಿಂದ ಸೆಕ್ಯೂರಿಟಿಗಳಿಗೆ ಉಗಿದು ಪರಾರಿಯಾಗುವ ಮೂಲಕ ಬೆಂಗಳೂರಿನ ಜನರಿಗೆ ಟೆನ್ಷನ್​ ತಂದೊಡ್ಡಿದ್ದ.

    ಇನ್ನು ಇಲ್ಲಿನ ಕೋವಿಡ್​ ಆಸ್ಪತ್ರೆಯಲ್ಲಿ ಊಟ-ತಿಂಡಿ, ಕುಡಿವ ನೀರೂ ಸರಿಯಾಗಿ ಸಿಗುತ್ತಿಲ್ಲ ಎಂದು ಸೋಂಕಿತರು ಆಸ್ಪತ್ರೆ ವಿರುದ್ಧ ದೂರುತ್ತಲೇ ಇದ್ದಾರೆ. ಹೀಗೆ ಒಂದಲ್ಲ ಒಂದು ಅವಾಂತರ ಸೃಷ್ಟಿಸಿಕೊಳ್ಳುತ್ತಿರುವ ಆಸ್ಪತ್ರೆ ಇನ್ನಾದರೂ ಜಾಗ್ರತೆ ವಹಿಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದೆ.

    ಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts