More

    ಸಾಮಾಜಿಕ ಅಂತರ ಮರೆತ ಸಚಿವರು

    ರಾಮನಗರ: ಇಲ್ಲಿನ ಕೋವಿಡ್-19 ಆಸ್ಪತ್ರೆಗೆ ಸೋಮವಾರ ಜಿಲ್ಲಾ ಉಸ್ತವಾರಿ ಸಚಿವರೂ ಆದ ಡಿಸಿಎಂ ಅಶ್ವಥ ನಾರಾಯಣ್, ರೇಷ್ಮೆ ಸಚಿವ ನಾರಾಯಣಗೌಡ ಅವರು ಸಾಮಾಜಿಕ ಅಂತರ ಮರೆತು ಪಕ್ಷದ ಕಾರ್ಯಕರ್ತರೊಂದಿಗೆ ಆಗಮಿಸಿದ್ದು ಚರ್ಚೆಗೆ ಗ್ರಾಸವಾಗಿದೆ..

    ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಸಾಮಾಜಿಕ ಅಂತರವೇ ಪ್ರಮುಖ ಮದ್ದು ಎಂದು ವೈದ್ಯಲೋಕ ಅಭಿಪ್ರಾಯಪಟ್ಟಿದೆ. ವಿಶ್ವದ ಎಲ್ಲ ರಾಷ್ಟ್ರಗಳೂ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿವೆ. ಈ ನಿಟ್ಟಿನಲ್ಲಿ ಲಾಕ್​ಡೌನ್​ ಕೂಡ ಜಾರಿಯಲ್ಲಿದೆ. ಇದಾಗ್ಯೂ ಸಚಿವರುಗಳು ಮಾತ್ರ ಆಸ್ಪತ್ರೆ ಆವರಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ಗುಂಪುಗುಂಪಾಗಿ ಕಾಣಿಸಿಕೊಂಡರು.

    ಇದನ್ನೂ ಓದಿರಿ ಮುಂಬೈನಲ್ಲಿ ಪೂನಂ ಪಾಂಡೆ ಬಂಧನ!

    ಆಸ್ಪತ್ರೆ ಆವರಣದಲ್ಲಿ ಐಸಿಯು ಉದ್ಘಾಟಿಸಲು ಬಂದ ಸಚಿವರ ಜತೆ ಸ್ಥಳೀಯ ಜನಪ್ರತಿನಿಧಿಗಳು ಕರೊನಾ ಸೋಂಕಿನ ಭೀತಿ ಮರೆತು ರೇಸ್​ಗೆ ಬಿದ್ದವರಂತೆ ಗುಂಪುಗೂಡಿದ್ದರು.

    ಕಂದಾಯ ಭವನದಲ್ಲಿ ನಿರ್ಮಿಸಿರುವ ಕೋವಿಡ್ ಆಸ್ಪತ್ರೆಗೆ ಮಧ್ಯಾಹ್ನ 12ಕ್ಕೆ ಭೇಟಿ ನೀಡಿದ ಸಚಿವರು ಒಂದು ಸುತ್ತು ಪರಿಶೀಲನೆ ನಡೆಸಿದರು. ಇದು‌ ಮಾದರಿ ಆಸ್ಪತ್ರೆ. ರಾಮನಗರದಲ್ಲಿ‌ ಅಚ್ಚುಕಟ್ಟಾಗಿ ಕೋವಿಡ್ ಆಸ್ಪತ್ರೆ ನಿರ್ಮಿಸಲಾಗಿದೆ ಎಂದರು. ಕೋವಿಡ್ ಆಸ್ಪತ್ರೆ ಪ್ರವೇಶಕ್ಕೆ ಮುನ್ನವೇ ಥರ್ಮಲ್ ಪರೀಕ್ಷೆಗೆ ಒಳಪಟ್ಟರು. ಅಧಿಕಾರಿಗಳೊಂದಿಗೆ ಐಸಿಯು ಘಟಕ ವಿಕ್ಷೀಸಿದರು.

    ಸಾಮಾಜಿಕ ಅಂತರ ಮರೆತ ಸಚಿವರು
    ರಾಮನಗರದಲ್ಲಿ ಕರೊನಾ ಆಸ್ಪತ್ರೆ ಪರಿಶೀಲಿಸಿದ ಡಿಸಿಎಂ ಅಶ್ವಥ ನಾರಾಯಣ್.

    ಇದನ್ನೂ ಓದಿರಿ ಪಾದರಾಯನಪುರದಲ್ಲಿ ಕ್ವಾರಂಟೈನ್​ನಲ್ಲಿದ್ದ ಮಹಿಳೆಯರ ಮಿತಿಮೀರಿದ ವರ್ತನೆ: ಆರೋಗ್ಯ ಸಚಿವರಿಂದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts