More

    ಜುಲೈ 20ರಿಂದ ನೀಟ್ ಯುಜಿ ಸೀಟ್‌ಗೆ ನೋಂದಣಿ

    ನವದೆಹಲಿ: ವೈದ್ಯಕೀಯ ಪದವಿ ಪ್ರವೇಶಕ್ಕೆ ನಡೆಸಲಾದ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಯ ಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಸೀಟ್ ಹಂಚಿಕೆಗೆ ಇದೇ ತಿಂಗಳ 20ರಿಂದ ನೋಂದಣಿ ನಡೆಯಲಿದೆ.

    ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು (ಎಂಸಿಸಿ) ಅಖಿಲ ಭಾರತ ಸೀಟುಗಳ ಹಂಚಿಕೆಗೆ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಒಟ್ಟು ಸೀಟುಗಳಲ್ಲಿ ಶೇ.15 ಸ್ಥಾನಗಳನ್ನು ಈ ಕೌನ್ಸೆಲಿಂಗ್ ಮೂಲಕ ಹಂಚಿಕೆ ಮಾಡಲಾಗುತ್ತದೆ. ಈ ಬಾರಿ ಉಳಿಕೆ ಸೀಟುಗಳ ಹಂಚಿಕೆಯಲ್ಲೂ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು ಎಂದು ಎಂಸಿಸಿ ಪ್ರಕಟಿಸಿದೆ. ಕಳೆದ ಬಾರಿ ಈ ಅವಕಾಶ ನೀಡಲಾಗಿರಲಿಲ್ಲ. ಜು.25ರವರೆಗೆ ನೋಂದಣಿ ಶುಲ್ಕ ಪಾವತಿಸಬಹುದು.

    29ಕ್ಕೆ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ. ಎರಡನೇ ಸುತ್ತಿಗೆ ಆ.9ರಿಂದ ಪ್ರಕ್ರಿಯೆಗಳು ನಡೆಯಲಿದ್ದು, ಆ.18ರಂದು ಸೀಟು ಹಂಚಿಕೆ ಮಾಡಲಾಗುವುದು. ಉಳೀಕೆ ಸೀಟುಗಳ ಹಂಚಿಕೆ ಪ್ರಕ್ರಿಯೆ ಸೆ.21ರಿಂದ ನಡೆಯಲಿದೆ ಎಂದು ಎಂಸಿಸಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts