More

    ನೀಟ್​ನಲ್ಲಿ ರಾಜ್ಯದವರ ಪಾರಮ್ಯ; ಟಾಪರ್​ಗಳ ಸಾಲಿನಲ್ಲಿ ಆರು ವಿದ್ಯಾರ್ಥಿಗಳು

    ನವದೆಹಲಿ: ವೈದ್ಯಕೀಯ ಪದವಿ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್​ಟಿಎ) ಬುಧವಾರ ತಡರಾತ್ರಿ ಪ್ರಕಟಿಸಿದೆ. ಟಾಪರ್​ಗಳ ಸಾಲಿನಲ್ಲಿ ರಾಜ್ಯದ ಆರು ವಿದ್ಯಾರ್ಥಿಗಳು ಮಿಂಚಿದ್ದಾರೆ. ಬಾಲಕರ ಟಾಪ್ ಟೆನ್ ಪಟ್ಟಿಯಲ್ಲಿ ರಾಜ್ಯದ ಮೂವರು ಹಾಗೂ ಬಾಲಕಿಯರ ವಿಭಾಗದಲ್ಲಿ ಮೂವರು ಸೇರಿದ್ದಾರೆ.

    ರಾಜ್ಯದ ಹೃಷಿಕೇಶ್ ನಾಗಭೂಷಣ ಗಂಗೂಲೆ 715 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದಿದ್ದಾರೆ. ಎಸ್.ಆರ್. ಕೃಷ್ಣ 710 ಅಂಕ ಪಡೆದು 8ನೇ ಸ್ಥಾನದಲ್ಲಿದ್ದಾರೆ. ವೃಜೇಶ್ ವೀಣಾಧರ ಶೆಟ್ಟಿ 13ನೇ ರ್ಯಾಂಕ್ ಗಳಿಸಿದ್ದಾರೆ.

    ಬಾಲಕಿಯರ ವಿಭಾಗದಲ್ಲಿ ರುಚಾ ಪಾವಶೆ ಎರಡನೇ ರ್ಯಾಂಕ್ ಪಡೆದಿದ್ದರೆ, ಅಖಿಲ ಭಾರತ ಮಟ್ಟದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬಾಲಕಿಯರಲ್ಲಿ ಶುಭಾ ಕೌಶಿಕ್ 7, ಮುರುಕಿ ಶ್ರೀ ಬಾರುಣಿ ಬಾಲಕಿಯರಲ್ಲಿ 10ನೇ ರ್ಯಾಂಕ್ ಗಳಿಸಿದ್ದಾರೆ. ದೇಶಾದ್ಯಂತ 3,750 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ 16 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು.

    ಟಾಪ್ ಟೆನ್ ವಿದ್ಯಾರ್ಥಿನಿಯರ ಪಟ್ಟಿ: ತನಿಷ್ಕಾ(ರಾಜಸ್ಥಾನ ), ರುಚಾ ಪಾವಶೆ (ಕರ್ನಾಟಕ), ಜೀಲ್ ವಿಪುಲ್ ವ್ಯಾಸ್ (ಗುಜರಾತ್), ಸಯನ್​ತಾನಿ ಚಟರ್ಜಿ(ಪಶ್ಚಿಮ ಬಂಗಾಳ) ಅನುಷ್ಕಾ ಮಂಡಲ್ (ಪಶ್ಚಿಮ ಬಂಗಾಳ), ನೂನಿ ವೆಂಕಟಸಾಯಿ ವೈಷ್ಣವಿ (ಆಂಧ್ರಪ್ರದೇಶ) ಶುಭಾ ಕೌಶಿಕ್ (ಕರ್ನಾಟಕ ), ವೈದೇಹಿ ಝಾ (ಮಹಾರಾಷ್ಟ್ರ), ದೇಬಂಕಿತ ಬೇರಾ (ಪಶ್ಚಿಮ ಬಂಗಾಳ), ಮುರಿಕಿ ಶ್ರೀ ಬರೂನಿ (ಕರ್ನಾಟಕ).

    ಟಾಪ್ ಟೆನ್ ಬಾಲಕರ ಪಟ್ಟಿ: ವತ್ಸ ಅಶಿಶ್ ಬಾತ್ರಾ (ದೆಹಲಿ ಎನ್​ಸಿಟಿ), ಹೃಷಿಕೇಶ್ ನಾಗಭೂಷಣ್ ಗಂಗೂಲೆ (ಕರ್ನಾಟಕ), ಎರಬೆಲ್ಲಿ ಸಿದ್ದಾರ್ಥ ರಾವ್ (ತೆಲಂಗಾಣ), ರಿಷಿ ವಿನಯ್ ಬಲ್ಸೆ (ಮಹಾರಾಷ್ಟ್ರ), ಅರ್ಪಿತ್ ನಾರಂಗ್ (ಪಂಜಾಬ್), ಕೃಷ್ಣ ಎಸ್.ಆರ್ (ಕರ್ನಾಟಕ), ಹಜೀಕ್ ಪರ್ವೆಜ್ ಲೋನ್ (ಜಮ್ಮು ಮತ್ತು ಕಾಶ್ಮೀರ), ಮಠದುರ್ಗ ಸಾಯಿ ಕೀರ್ತಿ ತೇಜ (ಆಂಧ್ರಪ್ರದೇಶ), ವೃಜೇಶ್ ವೀಣಾಧರ್ ಶೆಟ್ಟಿ (ಕರ್ನಾಟಕ), ಜೇ ದೀಪಕ್ ರಾಜ್ಯಗುರು (ಗುಜರಾತ್).

    ನಿರೀಕ್ಷೆ ಗರಿಗೆದರಿಸುತ್ತಿರುವ ‘ವಿಜಯಾನಂದ’ ಚಿತ್ರ; ಡಾ.ಆನಂದ ಸಂಕೇಶ್ವರ ಪಾತ್ರದಲ್ಲಿ ಭರತ್ ಬೋಪಣ್ಣ- ಕ್ಯಾರೆಕ್ಟರ್ ಇಂಟ್ರೋ ರಿಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts