More

    ಕೋಚ್ ಕಾಶಿನಾಥ್​ ನಾಯ್ಕ್​ ಮನೆಗೆ ತೆರಳಿ ಗುರುವಂದನೆ ಸಲ್ಲಿಸಿದ ನೀರಜ್​ ಚೋಪ್ರಾ

    ಉತ್ತರಕನ್ನಡ: ಒಲಿಂಪಿಕ್ಸ್​​ನಲ್ಲಿ ಚಿನ್ನ ಗೆದ್ದು ಭಾರತೀಯರ ಹೆಮ್ಮೆಯ ಕ್ರೀಡಾಳು ಎನಿಸಿಕೊಂಡ ನೀರಜ್ ಚೋಪ್ರಾ ಇಂದು ತನ್ನ ಗುರು, ಉತ್ತರಕನ್ನಡ ಜಿಲ್ಲೆ ಶಿರಸಿಯವರಾದ ಕಾಶಿನಾಥ್​ ನಾಯ್ಕ್ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಒಲಿಂಪಿಕ್ಸ್​ನಲ್ಲಿ ಜಾವೆಲಿನ್​ ಥ್ರೋನಲ್ಲಿ ಚಿನ್ನದ ಪದಕ ಗಳಿಸಿದ್ದ ನೀರಜ್​ ಚೋಪ್ರಾ, 2015ರಿಂದ ಸುಮಾರು ಮೂರು ವರ್ಷಗಳ ಕಾಲ ಪಟಿಯಾಲಾದಲ್ಲಿ ಕಾಶಿನಾಥ್​ ನಾಯ್ಕ್​ ಅವರಿಂದ ಜಾವೆಲಿನ್​ ಥ್ರೋ ತರಬೇತಿ ಪಡೆದಿದ್ದರು.

    ಇಂದು ಪುಣೆಯ ಕೋರೆಗಾಂವ್​ನಲ್ಲಿರುವ ಕಾಶಿನಾಥ್ ನಾಯ್ಕ್ ಅವರ ಮನೆಗೆ ತೆರಳಿದ ನೀರಜ್ ಚೋಪ್ರಾ ಗುರುವಂದನೆ ಸಲ್ಲಿಸಿದ್ದಾರೆ. ಈ ವೇಳೆ ಕಾಶಿನಾಥ್ ನಾಯ್ಕ್ ಅವರ ಪತ್ನಿ ಚೈತ್ರಾ ಅವರು ಆರತಿ ಬೆಳಗಿ ಮನೆಗೆ ಸ್ವಾಗತಿಸಿದರು. ಸುಮಾರು ಒಂದು ಗಂಟೆಗಳ ಕಾಲ ಗುರು-ಶಿಷ್ಯರು ಒಲಿಪಿಂಕ್ಸ್​ ಕ್ರೀಡಾಕೂಟದ ಬಗ್ಗೆ ಮಾತುಕತೆ ನಡೆಸಿದರು.

    ಕೋಚ್ ಕಾಶಿನಾಥ್​ ನಾಯ್ಕ್​ ಮನೆಗೆ ತೆರಳಿ ಗುರುವಂದನೆ ಸಲ್ಲಿಸಿದ ನೀರಜ್​ ಚೋಪ್ರಾ ಕೋಚ್ ಕಾಶಿನಾಥ್​ ನಾಯ್ಕ್​ ಮನೆಗೆ ತೆರಳಿ ಗುರುವಂದನೆ ಸಲ್ಲಿಸಿದ ನೀರಜ್​ ಚೋಪ್ರಾ ಕೋಚ್ ಕಾಶಿನಾಥ್​ ನಾಯ್ಕ್​ ಮನೆಗೆ ತೆರಳಿ ಗುರುವಂದನೆ ಸಲ್ಲಿಸಿದ ನೀರಜ್​ ಚೋಪ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts