More

    ಕರೊನಾ ವಿರುದ್ಧ ಹೋರಾಡಲು ಪ್ರಧಾನಿ ಬಳಿ 25000 ಕೋಟಿ ರೂ. ಪರಿಹಾರ ಕೇಳಿದ ಸಿಎಂ ಮಮತಾ ಬ್ಯಾನರ್ಜಿ

    ನವದೆಹಲಿ: ಕರೊನಾ ವೈರಸ್​ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ನಿಂತಿದ್ದು, ರಾಜ್ಯವು ಹಣದ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್​ ಘೋಷಿಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಕೋರಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲಾಕ್​ಡೌನ್​ ಮುಂದುವರೆಸುವುದರಲ್ಲಿ ಪಶ್ಚಿಮ ಬಂಗಾಳವೂ ಕೂಡ ಪ್ರಧಾನಿ ಮೋದಿ ಅವರ ಕ್ರಮವನ್ನು ಅನುಸರಿಸುತ್ತದೆ. ಏಪ್ರಿಲ್​ 30ರವರೆಗೂ ರಾಜ್ಯ ಸ್ತಬ್ಧವಾಗೇ ಉಳಿಯಲಿದೆ. ಶಿಕ್ಷಣ ಸಂಸ್ಥೆಗಳು ಜೂನ್​ 10ರವರೆಗೂ ಮುಚ್ಚಲಾಗುವುದು ಎಂದು ತಿಳಿಸಿದರು.

    ಇದೇ ವೇಳೆ ಆರ್ಥಿಕ ಮಂದಗತಿ ಮತ್ತು ಆದಾಯ ಸಂಗ್ರಹ ಕೊರತೆಯ ಬಗ್ಗೆ ಉಲ್ಲೇಖಿಸಿ ರಾಜ್ಯಗಳಿಗೆ ಆರ್ಥಿಕ ಉತ್ತೇಜನವನ್ನು ಘೋಷಿಸಬೇಕೆಂದು ಪ್ರಧಾನಿ ಮೋದಿಗೆ ಕರೆ ಕೊಟ್ಟರು. ಕರೊನಾ ತಡೆಗಟ್ಟಲು ಹಾಗೂ ಅದರಿಂದಾಗಿರುವ ಆರ್ಥಿಕ ಹಿಂಜರಿತ ಸರಿಪಡಿಸಲು ಎಲ್ಲ ರಾಜ್ಯಗಳಿಗೆ 10 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್​ ಘೋಷಿಸಲು ಒತ್ತಾಯಿಸುತ್ತೇನೆಂದರು.

    ಪಶ್ಚಿಮ ಬಂಗಾಳಕ್ಕೆ 25 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್​ ನೀಡಲು ಕೇಳಿದ್ದೇನೆ. ಲಾಕ್​ಡೌನ್​ ಸಮಯದಲ್ಲಿ ಅಸಂಘಟಿತ ವಲಯದವರಿಗೆ ಸಹಾಯವಾಗಲಿದೆ. ಕೊನೆ ಪಕ್ಷ ಶೇ. 6ರಷ್ಟು ಜಿಡಿಪಿಯನ್ನು ರಾಜ್ಯಗಳಿಗೆ ಹಂಚಿಕೆ ಮಾಡಬೇಕು. ವಲಸಿಗರ ಹಿತ ಕಾಪಾಡಲು ಕೇಳಿದ್ದೇನೆ. 100 ದಿನಗಳ ಕೆಲಸವನ್ನು ಒದಗಿಸಲು ಒತ್ತು ನೀಡಿದ್ದೇನೆ. ರಾಜ್ಯದ ಜಿಎಸ್​ಟಿ ಪಾಲನ್ನು ಗೌರವಪೂರ್ವಕವಾಗಿ ನೀಡಬೇಕು ಎಂದು ಒತ್ತಾಯಿಸಿದರು.

    ಇಂದು ಬೆಳಗ್ಗೆ ಎಲ್ಲ ರಾಜ್ಯದ ಸಿಎಂ ಜತೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮೋದಿ ನಡೆಸಿದ ಸಂವಾದದಲ್ಲಿಯು ಮಮತಾ ಬ್ಯಾನರ್ಜಿ ಪಾಲ್ಗೊಂಡು ರಾಜ್ಯದ ಸಮಸ್ಯೆಗಳನ್ನು ಮನವರಿಕೆ ಮಾಡಿದರು. (ಏಜೆನ್ಸೀಸ್​)

    ಸೂಕ್ತ ವಾಹನ ವ್ಯವಸ್ಥೆಯಿಲ್ಲದೇ ಮಗು ಸಾವು: ಆಂಬುಲೆನ್ಸ್​ ನೀಡಲು ನಿರಾಕರಣೆ, ಕಣ್ಣೀರಿಡುತ್ತಾ ಮೃತದೇಹ ಹೊತ್ತು ನಡೆದ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts