More

    100 ವಾಹನಗಳ ನಡುವೆ ಸರಣಿ ಅಪಘಾತ: ಐವರು ಸಾವು, ಅನೇಕರ ಸ್ಥಿತಿ ಗಂಭೀರ

    ಟೆಕ್ಸಾಸ್​: ಸುಮಾರು 100 ವಾಹನಗಳ ನಡುವಿನ ಅತಿದೊಡ್ಡ ಸರಣಿ ಅಪಘಾತದಿಂದಾಗಿ ಐವರು ದಾರುಣವಾಗಿ ಮೃತಪಟ್ಟಿರುವ ಘಟನೆ ಯುನೈಟೆಡ್​ ಸ್ಟೇಟ್ಸ್​, ಟೆಕ್ಸಾಸ್​ನ ದಲ್ಲಾಸ್​ನಿಂದ 50 ಕಿ.ಮೀ ದೂರುದಲ್ಲಿರುವ ಫೋರ್ಟ್​ ವರ್ತ್​ನಲ್ಲಿ ನಡೆದಿದೆ.

    ಸಣ್ಣ ಕಾರುಗಳು, ಎಸ್​ಯುವಿ ಮತ್ತು 18 ಚಕ್ರವುಳ್ಳ ಟ್ರಕ್ಸ್​ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ ಎಂದು ಅಮೆರಿಕದ ಸಿಎನ್​ಎನ್​ ಮಾಧ್ಯಮ ವರದಿ ಮಾಡಿದೆ. ಸರಣಿ ಅಪಘಾತದಲ್ಲಿ ಅನೇಕ ಮಂದಿ ವಾಹನಗಳಲ್ಲೇ ಸಿಲುಕೊಂಡಿದ್ದಾರೆಂದು ಸ್ಥಳೀಯ ಆಗ್ನಿಶಾಮಕ ದಳ ಮಾಹಿತಿ ನೀಡಿದೆ.

    ಇದನ್ನೂ ಓದಿರಿ: ಸಚಿವ ಸಿ.ಪಿ. ಯೋಗೇಶ್ವರ್​ಗೆ ತವರಿನಲ್ಲೇ ಮುಖಭಂಗ: ಪ್ರಾಬಲ್ಯ ಮೆರೆದ ಎಚ್​ಡಿಕೆ

    ಅಪಘಾತಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸರಣಿ ಅಪಘಾತದಿಂದ ಅನೇಕ ವಾಹನಗಳು ಜಖಂಗೊಂಡಿರುವ ದೃಶ್ಯವನ್ನು ಕಾಣಬಹುದಾಗಿದೆ. 30 ಮಂದಿಯನ್ನು ಆಸ್ಪತ್ರೆಗೆ ದಾಖಲಾಗಿದ್ದು, ಅನೇಕರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

    ಘಟನಾ ಸ್ಥಳದಲ್ಲಿ ಸುಮಾರು 24 ಅಗ್ನಿಶಾಮಕ ಘಟಕಗಳು ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದು ಖಚಿತವಾಗಿ ತಿಳಿದಿಲ್ಲ. ಹಿಮಾವೃತ ರಸ್ತೆ ಪರಿಸ್ಥಿತಿಗಳು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಸಿಎನ್ಎನ್ ವರದಿ ಮಾಡಿದೆ.

    ಇದನ್ನೂ ಓದಿರಿ: ಮಗುವಿನ ಕಿಡ್ನಾಪ್ ಹಿಂದಿನ‌ ಕತೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ! ಬೆದರಿಸಿ ಹಣ ಪಡೆಯುವುದಕ್ಕಲ್ಲ

    ಅಪಘಾತ ಸಂಭವಿಸಿದ ಪ್ರದೇಶವು ಚಳಿಗಾಲದ ಎಚ್ಚರಿಕೆ ಅಡಿಯಲ್ಲಿತ್ತು. ರಸ್ತೆಗಳಲ್ಲಿ ಹಿಮಾವೃತಗೊಂಡಿದ್ದರಿಂದ ವಾಹನಗಳು ಸ್ಲಿಪ್​ ಆಗುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್​ನ ರಾಷ್ಟ್ರೀಯ ಹವಾಮಾನ ಸೇವೆ ಎಚ್ಚರಿಸಿತ್ತು. (ಏಜೆನ್ಸೀಸ್​)

    ಪತ್ನಿ ಉಡುಗೊರೆಯಾಗಿ ಕೊಟ್ಟ ಬೈಕ್​ ಒರೆಸುವಾಗ ಪತಿಗೆ ಕಾದಿತ್ತು ಬಿಗ್​ ಶಾಕ್..!​

    ಮತ್ತೆ ಹಿಂದಿಗೆ ಐಂದ್ರಿತಾ, ಮಾಯಾ ವೆಬ್​ಸಿರೀಸ್​ನಲ್ಲಿ ನಟನೆ

    ಆರೋಗ್ಯ ಇಲಾಖೆ ಅಸ್ವಸ್ಥ: 30 ಸಾವಿರ ಹುದ್ದೆ ಖಾಲಿ; ಸಿಬ್ಬಂದಿಗೆ ಹೊರೆ, ರೋಗಿಗೆ ಬರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts