More

    ನಗರದ 10 ಜನರಲ್ಲಿ ಒಬ್ಬರಿಗೆ ಕೆಲಸವಿಲ್ಲ; ನಿರ್ಬಂಧ ಸಡಿಲಿಕೆ ಹೊರತಾಗಿಯೂ ಸೃಷ್ಟಿಯಾಗದ ಉದ್ಯೋಗಾವಕಾಶ

    ನವದೆಹಲಿ: ಸಾಮಾನ್ಯ ಕ್ಷೇತ್ರದಲ್ಲಿ ಉದ್ಯೋಗಗಳು ಕಡಿಮೆಯಾಗಿ, ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸವೂ ಸೃಷ್ಟಿಯಾಗದ ಕಾರಣ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಲೇ ಸಾಗಿದೆ.

    ಕರೊನಾ ಸಂಕಷ್ಟದಿಂದ ಪಾರಾಗಲು ಮಾರ್ಚ್​ನಲ್ಲಿ ಹೇರಲಾಗಿದ್ದ ಲಾಕ್​ಡೌನ್​ ಸೇರಿ ಹಲವು ಬಗೆಯ ನಿರ್ಬಂಧಗಳನ್ನು ದೇಶಾದ್ಯಂತ ಸಡಿಲಿಸಲಾಗಿದ್ದರೂ ಆಗಸ್ಟ್​ ತಿಂಗಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸುಧಾರಣೆ ಕಂಡು ಬಂದಿಲ್ಲ ತಜ್ಞರು ಹೇಳಿದ್ದಾರೆ.

    ಇದನ್ನೂ ಓದಿ; ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…! 

    ಜುಲೈನಲ್ಲಿ ಶೇ.9.18 ರಷ್ಟಿದ್ದ ನಗರ ನಿರುದ್ಯೋಗ ಪ್ರಮಾಣ ಆಗಸ್ಟ್​ನಲ್ಲಿ ಶೇ.9.83ಕ್ಕೆ ಏರಿಕೆಯಾಗಿದೆ. ಸೆಂಟರ್ ಫಾರ್​ ಮಾನಿಟರಿಂಗ್​ ಇಂಡಿಯನ್​ ಎಕಾನಮಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಇದರರ್ಥ ನಗರದ ಪ್ರದೇಶದ 10 ಜನರಲ್ಲಿ ಒಬ್ಬರಿಗೆ ಕೆಲಸವಿಲ್ಲದಂತಾಗಿದೆ. ಒಟ್ಟಾರೆ ನಿರುದ್ಯೋಗ ಪ್ರಮಾಣ ಜುಲೈನಲ್ಲಿದ್ದ ಶೇ.7.43ರಿಂದ ಆಗಸ್ಟ್​ನಲ್ಲಿ ಶೇ.8.35ಕ್ಕೆ ಏರಿಕೆಯಾಗಿದೆ. ಮಾರ್ಚ್​ನಲ್ಲಿದ್ದ ಶೇ.8.75ಕ್ಕೆ ಹೋಲಿಸಿದಲ್ಲಿ ಕೊಂಚ ಕಡಿಮೆ ಎನ್ನಬಹುದು. ಆದರೆ, ಕರೊನಾ ಮುಂಚಿನ ದಿನಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.7.22ರಿಂದ ಶೇ.7.76 ನಡುವೆ ಇತ್ತು.

    ಗ್ರಾಮೀಣ ಪ್ರದೇಶದಲ್ಲೂ ಕೂಡ ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ. ಜುಲೈನಲ್ಲಿ ಶೇ.6.66ರಿಂದ ಆಗಸ್ಟ್​ನಲ್ಲಿ ಶೇ.7.65ಕ್ಕೆ ತಲುಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ನಿರುದ್ಯೋಗ ಪ್ರಮಾಣ ಹರಿಯಾಣದಲ್ಲಿ ಅತ್ಯಂತ ಹೆಚ್ಚು ಅಂದರೆ ಶೇ.33.5 ಇದ್ದರೆ, ನಂತರದ ಸ್ಥಾನದಲ್ಲಿ ತ್ರಿಪುರ (ಶೇ.27.9) ಆಗಿದೆ. ಆದರೆ, ಕರ್ನಾಟಕ ಹಾಗು ಒಡಿಶಾಗಳು ಉದ್ಯೋಗ ಸೃಷ್ಟಿಯಲ್ಲಿ ಕೊಂಚಮಟ್ಟಿಗಿನ ಯಶಸ್ಸು ಸಾಧಿಸಿವೆ ಎಂದು ಸಿಎಂಐಇ ವರದಿಯಲ್ಲಿ ಹೇಳಲಾಗಿದೆ.

    ಇದನ್ನೂ ಓದಿ; ಬಸ್​​ನಲ್ಲಿದ್ದ ವ್ಯಕ್ತಿಯಿಂದ 23 ಪ್ರಯಾಣಿಕರಿಗೆ ಕರೊನಾ ಸೋಂಕು; ಗಾಳಿಯಿಂದ ಹರಡುತ್ತಿದೆ ಎನ್ನಲು ಇದುವೇ ನಿದರ್ಶನ? 

    ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಿದ ಬಳಿಕವೂ ಪರಿಸ್ಥಿತಿ ಸುಧಾರಿಸದಿರುವುದು ಕಳವಳಕಾರಿ ವಿಚಾರ ಎಂದೇ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಉದ್ಯೋ ಕಡಿತ ಹಾಗೂ ಬೇಡಿಕೆ ಇಲ್ಲದಿರುವುದು ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಿದ್ದಾರೆ.  ಆದರೆ, ಉದ್ಯೋಗ ಮಾರುಕಟ್ಟೆ ಸುಧಾರಿಸುತ್ತಿದೆಯೇ ಅಥವಾ ಕುಸಿಯುತ್ತಿದೆಯೇ ಎಂಬುದನ್ನು ಕಂಡುಕೊಳ್ಳಲು ಸೆಪ್ಟಂಬರ್​ ಅಂತ್ಯದವರೆಗೂ ಕಾಯಬೇಕು ಎಂದು ತಜ್ಞರು ಹೇಳಿದ್ದಾರೆ.

    ವಾಯುಸೇನೆಯ ಬಲಾಢ್ಯ ರಫೇಲ್​ ಯುದ್ಧ ವಿಮಾನಗಳಿಗೆ ಎದುರಾಗಿದೆ ಆಪತ್ತು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts