More

    ಪ್ರಕೃತಿ ವಿಕೋಪ ಪರಿಹಾರ ಧನ; 6 ರಾಜ್ಯಗಳಿಗೆ 4,381.88 ಕೋಟಿ ರೂ. ಮಂಜೂರು

    ಬೆಂಗಳೂರು: ಕಳೆದ ವರ್ಷ ಸಂಭವಿಸಿದ ಪ್ರವಾಹ, ಚಂಡಮಾರುತ, ಭೂಕುಸಿತ ಮುಂತಾದ ಪ್ರಕೃತಿವಿಕೋಪ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (ಎನ್​ಡಿಆರ್​ಎಫ್​) ಮೂಲಕ 4,381. 88 ಕೋಟಿ ರೂಪಾಯಿ ಮಂಜೂರು ಮಾಡಿದೆ.

    ಕೇಂದ್ರ ಗೃಹಸಚಿವ ಅಮಿತ್​ ಷಾ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಮಿತಿಯು ಕರ್ನಾಟಕ, ಮಹಾರಾಷ್ಟ್ರ, ಸಿಕ್ಕಿಂ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಿಗೆ ಒಟ್ಟು 4,381. 88 ಕೋಟಿ ರೂ. ಮಂಜೂರು ಮಾಡಿದೆ.

    ಪ್ರವಾಹ ಮತ್ತು ಭೂಕುಸಿತ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ 577.84 ಕೋಟಿ ರೂ., ಮಧ್ಯಪ್ರದೇಶಕ್ಕೆ 611.61 ಕೋಟಿ ರೂ., ಸಿಕ್ಕಿಂಗೆ 87.84 ಕೋಟಿ ರೂ. ಮತ್ತು ಚಂಡಮಾರುತ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ 268.69 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇನ್ನು ಚಂಡಮಾರುತ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಲಕ್ಕೆ 2,707.77 ಕೋಟಿ ರೂ., ಒಡಿಶಾಗೆ 128.23 ಕೋಟಿ ರೂ. ಹಂಚಿಕೆ ಆಗಿದೆ ಎಂದು ಮೂಲಗೂ ತಿಳಿಸಿವೆ.

    ಅಲ್ಲದೆ 2020-21ರ ಸಾಲಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹೆಚ್ಚುವರಿಯಾಗಿ ಇದುವರೆಗೆ ಎಸ್​ಡಿಆರ್​ಎಫ್​ ಅಡಿ 28 ರಾಜ್ಯಗಳಿಗೆ 15,524.43 ಕೋಟಿ ರೂ. ಬಿಡುಗಡೆ ಮಾಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts