More

    ಅಜೇಯವಾಗಿ ಫೈನಲ್‌ಗೇರಿದ ಭಾರತದ ಕಿರಿಯರ ತಂಡ

    ಜೊಹಾನ್ಸ್‌ಬರ್ಗ್: ಮುಶೀರ್ ಖಾನ್ (38ಕ್ಕೆ 5) ಮಾರಕ ಬೌಲಿಂಗ್ ದಾಳಿ ನಾಯಕ ಉದಯ್ ಸಹರಾನ್ (112 ರನ್, 153 ಎಸೆತ, 10 ಬೌಂಡರಿ) ಸಮಯೋಚಿತ ಶತಕದ ಬಲದಿಂದ ಭಾರತ ತಂಡ 19 ವಯೋಮಿತಿ ತ್ರಿಕೋನ ಏಕದಿನ ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು 6 ವಿಕೆಟ್‌ಗಳಿಂದ ಗೆದ್ದು, ಅಜೇಯವಾಗಿ ಫೈನಲ್‌ಗೇರಿದೆ.

    ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ದ.ಆಫ್ರಿಕಾ, ಭರ್ತಿ 50 ಓವರ್‌ಗಳಲ್ಲಿ 256 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಉದಯ್ ಸಹರಾನ್-ಪ್ರಿಯಾಂಶು ಮೂಲಿಯಾ (76* ರನ್, 84 ಎಸೆತ, 6 ಬೌಂಡರಿ, 1 ಸಿಕ್ಸರ್) ಜೋಡಿಯ 133 ರನ್‌ಗಳ ಜತೆಯಾಟದ ನೆರವಿನಿಂದ ಭಾರತ, 48.4 ಓವರ್‌ಗಳಲ್ಲಿ 4 ವಿಕೆಟ್‌ಗೆ 260 ರನ್‌ಗಳಿಸಿ ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿತು. ಅಂತಿಮ ಲೀಗ್ ಪಂದ್ಯದಲ್ಲಿ ದ.ಆಫ್ರಿಕಾ-ಆ್ಘನ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದ ವಿಜೇತರು ಭಾರತಕ್ಕೆ ಫೈನಲ್‌ನಲ್ಲಿ ಎದುರಾಗಲಿದ್ದಾರೆ.

    ದ.ಆಫ್ರಿಕಾ: 50 ಓವರ್‌ಗಳಲ್ಲಿ 256 (ಸ್ಟೀವ್ 69, ಮರೈಸ್ 32, ರೊಮಶಾನ್ 24, ರಿಲ್ಲೆ 32, ಮುಶೀರ್ 38ಕ್ಕೆ5, ನಮನ್ ತಿವಾರಿ 32ಕ್ಕೆ3).
    ಭಾರತ: 48.4 ಓವರ್‌ಗಳಲ್ಲಿ 4 ವಿಕೆಟ್‌ಗೆ 260 ( ರುದ್ರ 1, ಮುಶೀರ್ 41, ಉದಯ್ 112, ಪ್ರಿಯಾಂಶು 76*,ಅವಿನಾಶ್ 13*, ಮಕಾ 49ಕ್ಕೆ2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts