More

    ಭಾರತ-ಇಸ್ರೇಲ್ ಹೈಟೆಕ್ ಶಸ್ತ್ರಾಸ್ತ್ರ

    ನವದೆಹಲಿ: ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಹೈಟೆಕ್ ಶಸ್ತ್ರಾಸ್ತ್ರ ಉತ್ಪಾದನೆ ಮಾಡಲು ನಿರ್ಧರಿಸಿವೆ. ಈ ನಿಟ್ಟಿನಲ್ಲಿ ಉಭಯ ದೇಶಗಳ ರಕ್ಷಣಾ ಸಚಿವಾಲಯಗಳು ಸಬ್ ರ್ವಂಗ್ ಗ್ರೂಪ್

    (ಎಸ್​ಡಬ್ಲ್ಯುಜಿ) ರಚಿಸಿವೆ. ತಂತ್ರಜ್ಞಾನ, ಅಭಿವೃದ್ಧಿ ಮತ್ತು ಉತ್ಪಾದನೆ, ತಂತ್ರಜ್ಞಾನ ಭದ್ರತೆ, ಕೃತಕ ಬುದ್ಧಿಮತ್ತೆ, ನಾವೀನ್ಯತೆ ಮತ್ತು ಜಂಟಿ ರಫ್ತು ಸೇರಿ ಹಲವು ಅಂಶಗಳನ್ನು ಎಸ್​ಡಬ್ಲ್ಯುಜಿ ನಿರ್ವಹಿಸಲಿದೆ. ಭಾರತದ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ (ರಕ್ಷಣಾ ಕೈಗಾರಿಕೆಗಳ ಉತ್ಪಾದನೆ) ಸಂಜಯ್ ಜಾಜು ಮತ್ತು ಇಸ್ರೇಲ್​ನ ಇಯಾಲ್ ಕ್ಯಾಲಿಫ್ ಇದರ ನೇತೃತ್ವ ವಹಿಸಲಿದ್ದಾರೆ.

    ಕ್ಷಿಪಣಿಗಳು, ಸಂವೇದಕಗಳು, ಸೈಬರ್-ಭದ್ರತೆ ಮತ್ತು ವಿವಿಧ ರಕ್ಷಣಾ ವ್ಯವಸ್ಥೆಗಳಲ್ಲಿ ಇಸ್ರೇಲ್ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸದ್ಯ ಭಾರತದಲ್ಲೂ ರಕ್ಷಣಾ ಉದ್ಯಮ ಬಲಗೊಳ್ಳುತ್ತಿರುವುದರಿಂದ ಈಗ ಉಭಯ ದೇಶಗಳು ಜಂಟಿ ಮಿಲಿಟರಿ ಉತ್ಪಾದನೆಗೆ ಮುಂದಾಗಿವೆ. ಇಸ್ರೇಲ್ ಕಂಪೆನಿಗಳಾದ ಐಎಐ, ರಾಫೆಲ್ ಅಡ್ವಾನ್ಸ್್ಡ

    ಡಿಫೆನ್ಸ್ ಸಿಸ್ಟಮ್ಸ್​​, ಎಲ್ಬಿಟ್ ಆಂಡ್ ಎಲ್ಟಾ ಸಿಸ್ಟಮ್ಸ್ ಭಾರತೀಯ ಕಂಪನಿಗಳೊಂದಿಗೆ 7 ಜಂಟಿ ಯೋಜನೆಗಳನ್ನು ನಡೆಸುತ್ತಿವೆ. 1999ರಲ್ಲಿ ನಡೆದ ಕಾರ್ಗಿಲ್ ಸಂಘರ್ಷದ ವೇಳೆ ಭಾರತಕ್ಕೆ ಇಸ್ರೇಲ್ ತುರ್ತಾಗಿ ಶಸ್ತ್ರಾಸ್ತ್ರಗಳನ್ನು ರವಾನಿಸಿ ನೆರವು ನೀಡಿತ್ತು.

    ಭಾರತ- ಜಪಾನ್ 5ಜಿ ಜಂಟಿ ಅಭಿವೃದ್ಧಿ

    ಅಮೆರಿಕ, ಆಸ್ಟ್ರೇಲಿಯಾ ಹಾಗೂ ಇಸ್ರೇಲ್ ಸೇರಿ ಕ್ವಾಡ್​ನ ಇತರ ಸದಸ್ಯ ರಾಷ್ಟ್ರಗಳ ಸಹಾಯದಿಂದ 5ಜಿ ಮತ್ತು 5ಜಿ ಪ್ಲಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಜಪಾನ್ ನಿರ್ಧರಿಸಿವೆ. ಜಪಾನ್​ನಲ್ಲಿ ಮುಂದಿನ ತಿಂಗಳು ನಡೆಯುವ ಕ್ವಾಡ್ ಸಭೆಯಲ್ಲಿ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಜತೆ ಮುಂದಿನ ತಲೆಮಾರಿನ ದೂರ ಸಂಪರ್ಕ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ರ್ಚಚಿಸಲಾಗುತ್ತದೆ ಎಂದು ತಿಳಿದುಬಂದಿದೆ.

    ಕ್ಷಿಪಣಿ ವ್ಯವಸ್ಥೆ: ಮುಂದಿನ ತಲೆಮಾರಿನ ಬರಾಕ್-8 ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಡಿಆರ್​ಡಿಒ ಹಾಗೂ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) 30 ಸಾವಿರ ಕೋಟಿ ರೂ. ಮೌಲ್ಯದ 3 ಯೋಜನೆಗಳಲ್ಲಿ ಕೆಲಸ ಮಾಡುತ್ತಿವೆ. ನೌಕಾಪಡೆಗಾಗಿ 2,606 ಕೋಟಿ ರೂ., ವಾಯುಪಡೆಗಾಗಿ 10,076 ಕೋಟಿ ರೂ. ಹಾಗೂ ಸೇನೆಗಾಗಿ 16,830 ಕೋಟಿ ರೂ. ವೆಚ್ಚದಲ್ಲಿ ಬರಾಕ್- ಕ್ಷಿಪಣಿ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿದೆ.

    ಡ್ರೋನ್​ಗಳು: ಇಸ್ರೇಲ್​ನ ಹೆರೊನ್ ಆಂಡ್ ಸರ್ಚರ್ ಸೆಕೆಂಡ್ ಸರ್ವೀಲಿಯನ್ಸ್​ನಿಂದ ಈಗಾಗಲೇ 100 ಡ್ರೋನ್​ಗಳನ್ನು ಸೇನೆಗೆ ಖರೀದಿಸಲಾಗಿದೆ. ಮಿಸೈಲ್​ಗಳ ಜತೆ ಡ್ರೋನ್​ಗಳನ್ನು ಜೋಡಿಸುವ 3,500 ಕೋಟಿ ರೂ. ಮೊತ್ತದ ಚೀತಾ ಪ್ರಾಜೆಕ್ಟ್ ಜಾರಿಯಲ್ಲಿದೆ.

    ರೆಡಾರ್​ಗಳು: ಇಸ್ರೇಲ್​ನ ಏರೋಸ್ಟಾಟ್​ನಿಂದ ರೆಡಾರ್​ಗಳನ್ನು ಭಾರತ ಅಳವಡಿಸಿಕೊಂಡಿದೆ. ಈಗ 4,577 ಕೋಟಿ ರೂ. ವೆಚ್ಚದಲ್ಲಿ 66 ಏರ್ ಡಿಫೆನ್ಸ್ ಫೈರ್ ಕಂಟ್ರೋಲ್ ರೆಡಾರ್​ಗಳನ್ನು ಖರೀದಿಸಲಾಗುತ್ತಿದೆ.

    ಎಡಬ್ಲ್ಯುಎಸಿಎಸ್: 2 ಫಾಲ್ಕನ್ ಏರ್​ಬ್ರೋನ್ ವಾರ್ನಿಂಗ್ ಆಂಡ್ ಕಂಟ್ರೋಲ್ ಸಿಸ್ಟಮ್ (ಎಡಬ್ಲ್ಯುಎಸಿಎಸ್) ಅನ್ನು 1.5 ಬಿಲಿಯನ್ ಡಾಲರ್​ಗೆ ಖರೀದಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಇದಕ್ಕೂ ಮೊದಲು 1.1 ಬಿಲಿಯನ್ ಡಾಲರ್ ಮೊತ್ತದಲ್ಲಿ ಐಎಲ್-76 ವಿಮಾನಗಳ 3 ಎಡಬ್ಲ್ಯುಎಸಿಎಸ್ ಖರೀದಿಸಲಾಗಿತ್ತು.

    ಮಿಸೈಲ್​ಗಳು, ಬಾಂಬ್: ಸ್ಪೈಡರ್ ಕ್ವಿಕ್ ರಿಯಾಕ್ಷನ್ ಆಂಟಿ ಏರ್​ಕ್ರಾಫ್ಟ್ ಮಿಸೈಲ್, ಪೈಥಾನ್ ಆಂಡ್ ಡೆರ್ಬೆ ಏರ್ ಟು ಏರ್ ಮಿಸೈಲ್ ಸೇರಿ ಹಲವು ಮಿಸೈಲ್​ಗಳು ಹಾಗೂ ಸ್ಪೈಸ್ 2000 ಬಾಂಬ್​ಗಳನ್ನು ಇಸ್ರೇಲ್​ನಿಂದ ಖರೀದಿಸಲಾಗಿದೆ.

    ಲ್ಯಾಂಡಿಂಗ್ ವೇಳೆ ಸೇನಾ ವಿಮಾನ ಪತನ: 22 ವಿದ್ಯಾರ್ಥಿಗಳು ಸಜೀವ ದಹನ, ನಾಲ್ವರು ಕಣ್ಮರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts