More

    ತಿರುಪತಿಯಲ್ಲಿ ನಡೆಯುತ್ತಿಲ್ಲ ನಯನತಾರ -ವಿಘ್ನೇಶ್​​ ಮದುವೆ: ಇಲ್ಲಿದೆ ಮಾಹಿತಿ

    ಚೆನ್ನೈ: ದಕ್ಷಿಣ ಭಾರತ ಖ್ಯಾತ ನಟಿ ನಯನತಾರಾ ಹಾಗೂ ವಿಘ್ನೇಶ್​ ವಿವಾಹ ದಿನಾಂಕ ಈ ಹಿಂದೆಯೇ ನಿಗದಿಯಾಗಿತ್ತು. ಆದರೀಗ ಸ್ಥಳ ಬದಲಾವಣೆಯನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಕಳೆದ ತಿಂಗಳು ಈ ಜೋಡಿ ತಮ್ಮ ವಿವಾಹದ ದಿನಾಂಕವನ್ನು ಘೋಷಿಸಿಕೊಂಡಿದ್ದರು. ಜೂನ್​ 9 ರಂದು ತಿರುಪತಿಯಲ್ಲಿ ಇಬ್ಬರೂ ಸರಳವಾಗಿ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಇದೀಗ ಸ್ಥಳ ಬದಲಾಯಿಸಲಾಗಿದೆ.

    ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ತಾವಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತೇವೆ ಎಂದಿದ್ದ ಜೋಡಿ, ಈಗ ಧಿಢೀರ್​ ಜಾಗವನ್ನೂ ಬದಲಾಯಿಸಿದೆ. ಇದೀಗ ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಪ್ರತಿಷ್ಠಿತ ರೆಸಾರ್ಟ್​​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

    ಲೇಡಿ ಸೂಪರ್​ಸ್ಟಾರ್ ಎಂದೇ ಕರೆಸಿಕೊಂಡಿರುವ ನಯನತಾರಾ ಮತ್ತು ಜನಪ್ರಿಯ ನಿರ್ದೇಶಕ ವಿಘ್ನೇಶ್​ ಶಿವನ್​ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದು, ಇಬ್ಬರ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಲು ಈ ಜೋಡಿ ಈಗ ಸಿದ್ಧವಾಗಿದೆ.

    ನಯನತಾರಾ ಮತ್ತು ವಿಘ್ನೇಶ್​ ಶಿವನ್ ಜೂನ್​ 9ರಂದು ರೆಸಾರ್ಟ್​​ನಲ್ಲಿ ಮದುವೆಯಾಗಲಿದ್ದಾರೆ. ಇದಕ್ಕಾಗಿ ಭಾರೀ ಸಿದ್ಧತೆ ನಡೆಯುತ್ತಿದೆ. ಇದಾದ ಬಳಿಕ ತಮ್ಮ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಗೆ ಮಾಲ್ಡೀವ್ಸ್​ನಲ್ಲಿ ಮದುವೆ ಪಾರ್ಟಿಯನ್ನು ಆಯೋಜಿಸಿದ್ದಾರೆ ಎಂಬ ಸುದ್ದಿ ಕಾಲಿವುಡ್​ ಗಲ್ಲಿಯಿಂದ ಕೇಳಿಬಂದಿದೆ.

    ಅಂದಹಾಗೆ ನಯನಾ ಮತ್ತು ವಿಘ್ನೇಶ್​ ನಿಯಮಿತವಾಗಿ ತಿರುಪತಿ ದೇವಸ್ಥಾನಕ್ಕೆ ಭೇಟಿ ಮಾಡುತ್ತಿರುತ್ತಾರೆ. ಇಬ್ಬರಿಗೆ ಈ ಸ್ಥಳ ತುಂಬಾ ಇಷ್ಟ. ಹಾಗಾಗಿ ಇಲ್ಲೇ ಮದುವೆಯೂ ಆಗಲಿದ್ದಾರೆ ಎನ್ನಲಾಗಿತ್ತು. ಈಗ ದಿಢೀರ್​​ ಸ್ಥಳ ಬದಲಾವಣೆ ಮಾಡಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. (ಏಜೆನ್ಸೀಸ್​)

    ನಯನತಾರಾ-ವಿಘ್ನೇಶ್​ ಶಿವನ್​ ಮದುವೆ ದಿನಾಂಕ ಫಿಕ್ಸ್​: ಇಬ್ಬರಿಗೂ ಇಷ್ಟವಾದ ಸ್ಥಳದಲ್ಲೇ ವಿವಾಹ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts