More

    ಪಾರಂಪರಿಕ ಕಲೆಗಳ ಉಳಿಸಬೇಕು

    ನಾಯಕನಹಟ್ಟಿ: ಪಾರಂಪರಿಕ ಕಲೆಗಳ ಉಳಿವಿಗೆ ಪ್ರೋತ್ಸಾಹ ಅಗತ್ಯ ಎಂದು ತಿಪ್ಪೇರುದ್ರಸ್ವಾಮಿ ದೇವಾಲಯ ಸಮಿತಿ ಸದಸ್ಯೆ ಹಂಸವೇಣಿ ಹೇಳಿದರು.

    ಪಟ್ಟಣದ ತಿಪ್ಪೇರುದ್ರಸ್ವಾಮಿ ಒಳಮಠದ ಮುಂಭಾಗ ವಿದ್ಯಾವಿಕಾಸ್ ಶಾಲೆಯ ಮಕ್ಕಳಿಗೆ ಬುಧವಾರ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ ವೇಳೆ ಮಾತನಾಡಿದರು.

    ಬದಲಾಗುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೇವಲ ಓದುವುದನ್ನು ಕಲಿಯುತ್ತಿದ್ದಾರೆ. ಮಕ್ಕಳಿಗೆ ಲೋಕ ಜ್ಞಾನ ಅವಶ್ಯ. ರಂಗೋಲಿ ಹಾಕುವುದರಿಂದ ಬಣ್ಣಗಳ ಬಳಕೆ ಸೇರಿ ವಿವಿಧ ಕೌಶಲ ಕಲಿಯಲು ಸಾಧ್ಯವಿದೆ ಎಂದರು.

    ಮನೆ ಮುಂಭಾಗದಲ್ಲಿ ನೀರು ಹಾಕಿ ಸ್ವಚ್ಛಗೊಳಿಸಿ ರಂಗೋಲಿ ಹಾಕುವುದರಿಂದ ಮನೆಯ ವಾತಾವರಣದಲ್ಲಿ ಬದಲಾವಣೆ ಉಂಟಾಗುತ್ತದೆ. ಯಾಂತ್ರಿಕ ಬದುಕಿನಲ್ಲಿ ರಂಗೋಲಿಗಳು ಮರೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ಹೇಳಿದರು.

    ದೇವಾಲಯ ಸಿಬ್ಬಂದಿ ಸತೀಶ್, ಅರ್ಚಕ ಶಿವಲಿಂಗಮೂರ್ತಿ, ಶಿಕ್ಷಕಿಯರಾದ ಎ.ಉಮಾ, ಟಿ.ರೂಪಾ, ಕಾವೇರಿ, ರಶ್ಮಿ, ಜ್ಯೋತಿ, ಲಕ್ಷ್ಮೀ, ಸುಜಯ್, ತಿಪ್ಪೇಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts