More

    ಕರೊನಾ ಭೀತಿ ದೂರ ಆಗದಿರಲಿ

    ನಾಯಕನಹಟ್ಟಿ: ಸರ್ಕಾರದ ಜತೆ ದಾನಿಗಳು ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಕರೊನಾ ಸಂಕಷ್ಟದಲ್ಲಿ ಅಗತ್ಯ ವಸ್ತುಗಳ ವಿತರಣೆಗೆ ಮುಂದಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

    ಸಮೀಪದ ತುರುವನೂರು ಹೋಬಳಿಯ ವಿವಿಧ ಪಂಚಾಯಿಗಳಲ್ಲಿ ಶನಿವಾರ ಅಂಗವಿಕಲರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿ ಮಾತನಾಡಿ, ಕರೊನಾ ಭೀತಿ ಜನರಲ್ಲಿ ಸದಾ ಇರಬೇಕು. ಅನಗತ್ಯ ಓಡಾಟಕ್ಕೆ ಕಡಿವಾಣ ಸ್ವಯಂ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸರ್ಕಾರ ನೀಡುವ ದಿನಸಿ ಇಂತಹ ಸಮಯದಲ್ಲಿ ಸಾಕಾಗುವುದಿಲ್ಲ. ಆದ್ದರಿಂದ ದಾನಿಗಳ ಸಹಕಾರ ಪಡೆದು ವಿತರಿಸಲಾಗುತ್ತಿದೆ. ತುರುವನೂರು ಹೋಬಳಿಯಲ್ಲಿ 850, ಮಾಡನಾಯಕನಹಳ್ಳಿ ಪಂಚಾಯಿತಿಯಲ್ಲಿ 139 ಅಂಗವಿಕಲರಿದ್ದು, ಎಲ್ಲರಿಗೂ ಆಹಾರದ ಕಿಟ್‌ಗಳನ್ನು ನೀಡಲಾಗಿದೆ ಎಂದರು.

    ಗ್ರಾಪಂ ಅಧ್ಯಕ್ಷ ಲಿಂಗರಾಜು, ತಾಪಂ ಅಧ್ಯಕ್ಷ ಲಿಂಗರಾಜು, ಜಿಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ್, ಮಾಜಿ ಸದಸ್ಯ ಬಾಬುರೆಡ್ಡಿ, ಮೈಲಾರಪ್ಪ, ಪಿಡಿಒ ಕೇಶವಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts