More

    ನಾಯಕನಹಟ್ಟಿ ತಿಪ್ಪೇಶ ಕಟ್ಟಿಸಿದ ಜಲಪಾತ್ರೇಲಿ ಜಲ ವೈಭವ: 12 ವರ್ಷಗಳ ಬಳಿಕ ಕೋಡಿಬಿದ್ದ ಹಿರೇಕೆರೆ

    ನಾಯಕನಹಟ್ಟಿ: ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು 17ನೇ ಶತಮಾನದಲ್ಲಿ ಕಲ್ಲು, ಮಣ್ಣಿನಿಂದ ಕಟ್ಟಿಸಿದ ಹಿರೇಕೆರೆ ಶನಿವಾರ ಕೋಡಿ ಬಿದ್ದಿದೆ.
    12 ವರ್ಷಗಳ ನಂತರ ಹಿರೇಕರೆಯಲ್ಲಿ ಗಂಗೆಯು ವೈಭವದಿಂದ ತುಂಬಿ ತುಳುಕುತ್ತಿರುವುದನ್ನು ನೋಡಲು ಸುತ್ತಮುತ್ತಲಿನ ಸಾವಿರಾರು ಜನ ಕ್ಷಣಾರ್ಧದಲ್ಲಿಯೇ ಜಮಾಯಿಸಿದ್ದರು.

    ಕಡಬನಕಟ್ಟೆ, ಉಪ್ಪಾರಹಟ್ಟಿ, ಬಾಗೇನಹಾಳ್, ಹಾಯ್‌ಕಲ್, ನಲಗೇತನ ಹಟ್ಟಿ ಭಾಗದಲ್ಲಿ ಮಳೆಯಾದರೆ ಕರೆಗೆ ಹೆಚ್ಚಿನ ನೀರು ಬರುತ್ತದೆ. ಮೇಲ್ಭಾಗದಲ್ಲಿ ಹಲವು ಕಡೆ ಚೆಕ್‌ಡ್ಯಾಂ ನಿರ್ಮಾಣವಾಗಿದ್ದು, ಕೆರೆಗೆ ನೀರು ಬರಲು ನಿಧಾನವಾಗುತ್ತಿದೆ.

    ಕಳೆದ ವರ್ಷ ಕೆರೆಯಲ್ಲಿ 8 ಅಡಿ ನೀರು ಸಂಗ್ರಹವಾಗಿತ್ತು. ಈ ವರ್ಷ 16ಅಡಿ ನೀರು ಬಂದು ಕೋಡಿ ಬಿದ್ದಿದೆ. ಇದಕ್ಕೆ ಹೊಂದಿಕೊಂಡಂತೆ ಉಪ್ಪಾರಹಟ್ಟಿ ಹಳ್ಳವಿದ್ದು, ಮೈದುಂಬಿ ಹರಿಯುತ್ತಿದೆ.

    ನಾಯಕನಹಟ್ಟಿಯಿಂದ ಪಶ್ಚಿಮಕ್ಕೆ 5 ಕಿಮೀ ದೂರದಲ್ಲಿರುವ ಕೆರೆಯಿಂದ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದೆ. ಹಿರೇಕೆರೆ ಜಿಲ್ಲೆಯ ಪ್ರಸಿದ್ಧ, ಪುರಾತನ ಐತಿಹಾಸಿಕ ಜಲಮೂಲವಾಗಿದ್ದು, ಇಂದಿನ ಯಾವ ತಂತ್ರಜ್ಞರಿಗೂ ಕಡಿಮೆ ಇಲ್ಲದಂತೆ ದೂರದೃಷ್ಟಿಯಿಂದ ಇದರ ನಿರ್ಮಾಣ ಮಾಡಲಾಗಿದೆ.

    800 ಎಕರೆ ವಿಸ್ತೀರ್ಣ ಹೊಂದಿದ್ದು, 2500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ. ಕೆರೆಯ ಏರಿ 1.2 ಕಿಮೀ ಉದ್ದವಿದ್ದು, 52 ಅಡಿ ಅಗಲವಿದೆ. ಏರಿ ನಿರ್ಮಾಣಕ್ಕೆ ಯಾವುದೇ ಗಾರೆ, ಸಿಮೆಂಟ್ ಬಳಕೆಯಾಗಿಲ್ಲ. ಮೂರು ಶತಮಾನಗಳು ಕಳೆದರೂ
    ಸುಭದ್ರವಾಗಿರುವುದು ಆಗಿನ ತಾಂತ್ರಿಕತೆಗೆ ಸಾಕ್ಷಿಯಾಗಿದೆ.

    ತೆಪ್ಪೋತ್ಸವ ನೋಡಲು ಭಕ್ತರ ತವಕ

    ಹಿರೇಕೆರೆ, ಚಿಕ್ಕಕೆರೆ ತುಂಬಿದಾಗ ನಾಯಕನಹಟ್ಟಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ತೆಪ್ಪೋತ್ಸವ ಆಚರಿಸುವ ಸಂಪ್ರದಾಯವಿದೆ. 2010ರ ಡಿಸೆಂಬರ್‌ನಲ್ಲಿ ನಡೆದ ಉತ್ಸವದ ವೇಳೆ ಲಕ್ಷಾಂತರ ಭಕ್ತರು ಸೇರಿದ್ದರು. ದೊಡ್ಡ ಕಾರ್ತಿಕೋತ್ಸವದ ಹಿಂದಿನ ದಿನ ಉತ್ಸವ ಮಾಡುವುದು ರೂಢಿಯಲ್ಲಿದೆ. ಈ ಬಾರಿ ಅದ್ದೂರಿಯಾಗಿ ನೆರವೇರಲಿದ್ದು, ಭಕ್ತರು ತವಕದಲ್ಲಿದ್ದಾರೆ ಎನ್ನುತ್ತಾರೆ ದಳವಾಯಿ ತಿಪ್ಪೇಸ್ವಾಮಿ.

     

    ನಿವೇಶನಕ್ಕಾಗಿ ಸ್ಲಂ ನಿವಾಸಿಗಳ ಪ್ರತಿಭಟನೆ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts