More

    ಜಿನಿಗಿ ಹಳ್ಳದಲ್ಲಿ ಕರಡಿ ಪ್ರತ್ಯಕ್ಷ

    ನಾಯಕನಹಟ್ಟಿ: ಸಮೀಪದ ಗುಂತಕೋಲಮ್ಮ ಸಮೀಪದ ಜಿನಿಗಿ ಹಳ್ಳದಲ್ಲಿ ಶನಿವಾರ ಸಂಜೆ ಮೂರು ಕುರಿಗಳ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ.

    ಸಮೀಪದ ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ದಾಳಿ ನಡೆಸಿದ ಕರಡಿ, ಗಂಭೀರವಾಗಿ ಗಾಯಗೊಳಿಸಿದೆ. ಇದನ್ನು ಕಂಡ ಕುರಿಗಾಹಿಗಳು ಸ್ಥಳೀಯರ ಸಹಾಯಕ್ಕಾಗಿ ಜೋರಾಗಿ ಕೂಗಿದ್ದಾರೆ. ಇದರಿಂದ ಗಾಬರಿಗೊಂಡ ಕರಡಿ ಸ್ಥಳದಲ್ಲಿದ್ದ ಮುಳ್ಳಿನ ಪೋದೆಯತ್ತ ಓಡಿದೆ.

    ಭಯಭೀತರಾಗಿರುವ ಗುಂತಲಕೋಲಮ್ಮನಹಳ್ಳಿ ಹಾಗೂ ತೊರೆಕೋಲಮ್ಮನಹಳ್ಳಿ ಜನರು, ಪೋದೆಯಿಂದ ಕರಡಿ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಪಿಎಸ್‌ಐ ರಘುನಾಥ್, ಅರಣ್ಯ ಇಲಾಖೆ ಅಧಿಕಾರಿ ಸುರೇಶ್ ಭೇಟಿ ನೀಡಿ ಲಾಠಿ ಬೀಸಿ ಜನರನ್ನು ಚದುರಿಸಿದ್ದಾರೆ. ಅರಣ್ಯ ಇಲಾಖೆ ರಾತ್ರಿ ಕಾರ್ಯಾಚರಣೆ ನಡೆಸಿ ಕರಡಿ ಸೆರೆ ಅಥವಾ ಸಮೀಪದ ಅದರ ನಿವಾಸ ಸ್ಥಳಕ್ಕೆ ಓಡಿಸುವ ಕಾರ್ಯ ನಡೆಸಲಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts